ಜೀವನದ ಹಲವು ಸಂದರ್ಭಗಳಲ್ಲಿ ಬದುಕುವ ಉದ್ದೇಶದಿಂದ ಕಠಿಣವಾದ ಬದಲಾವಣೆಯ ಪರ್ವಕ್ಕೆ ಎಲ್ಲರೂ ಒಗ್ಗಿಕೊಳ್ಳಬೇಕಾಗುತ್ತದೆ. ಹಲವು ಸಂದರ್ಭಗಳಲ್ಲಿ ಬದುಕಿನ ಯಾವುದೋ ನೆನಪುಗಳು, ಕಷ್ಟಗಳು ಹಾಗೂ ಅಭ್ಯಾಸಗಳು ಅಥವಾ ಹಳೆಯ ಪದ್ಧತಿಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಹಳೆಯ ಕೆಲವೊಂದು ಸಮಸ್ಯೆಗಳು ಹಾಗೂ ಹೊರೆಗಳಿಂದ ಹೊರಬಂದು ಹೊಸ ಬದುಕಿಗೆ ತೆರೆದುಕೊಳ್ಳಲು ಬದಲಾವಣೆಯು ಅವಶ್ಯಕವಾಗಿ ಬೇಕು.
– ಸಂತೋಷ್ ರಾವ್ ಪೆರ್ಮುಡ.
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು – ದ.ಕ ಜಿಲ್ಲೆ.
ಉದಯರಶ್ಮಿ ದಿನಪತ್ರಿಕೆ
ಪಕ್ಷಿಲೋಕದಲ್ಲಿ ಗಿಡುಗಕ್ಕೆ ವಿಶೇಷ ಸ್ಥಾನವಿದ್ದು, ಸಾಮಾನ್ಯವಾಗಿ ಒಂದು ಹದ್ದಿನ ಸರಾಸರಿ ಅಯಸ್ಸು ನಲುವತ್ತು ವರ್ಷ ಎಂದು ಅಧ್ಯಯನಗಳು ಹೇಳಿವೆ. ಆದರೆ ಒಂದು ಹದ್ದು ಸುಮಾರು ೪೦ ವರ್ಷಗಳ ವಯಸ್ಸನ್ನು ತಲುಪಿದಾಗ, ಇನ್ನೂ ೩೦ ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬದುಕಲು ಸಾಧ್ಯವಿದೆ.
ಆದರೆ ಆ ಹದ್ದು ತಾನು ಇನ್ನೂ ನಲುವತ್ತು ವರ್ಷ ಹೆಚ್ಚು ಕಾಲ ಬದುಕಬೇಕು ಎಂದು ಬಯಸಬೇಕು ಮತ್ತು ಅದಕ್ಕೆ ಅಗತ್ಯವಿರುವ ಕಠಿಣ ಪರಿಶ್ರಮಕ್ಕೆ ಒಳಗಾಗಬೇಕು. ಹೀಗೆ ನಿರ್ಧರಿಸುವ ಹದ್ದು, ತಾನು ಮತ್ತೂ ನಲವತ್ತು ವರ್ಷ ಹೆಚ್ಚು ಕಾಲ ಬದುಕಲು ಪರ್ವತದ ತುದಿಗೆ ಹಾರಿ ಹೋಗಿ ‘ಮರುಜನ್ಮ’ ಪಡೆಯುವ ಪ್ರಕ್ರಿಯೆಗೆ ಒಳಗಾಗುತ್ತದೆ. ಇದು ಪರಿವರ್ತನೆ ಮತ್ತು ಬದುಕುವ ದೃಢಸಂಕಲ್ಪದ ಕಠಿಣ ಪ್ರಕ್ರಿಯೆ ಆಗಿದೆ.

ಹದ್ದುಗಳು ಪಕ್ಷಿಗಳಲ್ಲಿಯೇ ಅತ್ಯಂತ ದೀರ್ಘಕಾಲ ಬದುಕುವ ಪಕ್ಷಿಗಳಾಗಿವೆ. ಸ್ವಾಭಾವಿಕ ಪರಿಸರದಲ್ಲಿ ಹದ್ದುಗಳು ಸಾಮಾನ್ಯವಾಗಿ ೨೦ ರಿಂದ ೩೦ ವರ್ಷಗಳ ಕಾಲ ಬದುಕುತ್ತವೆ. ಆಹಾರ ಸರಪಳಿಯ ಉನ್ನತ ಹಂತದ ಪರಭಕ್ಷಕಗಳು ಇವುಗಳು ಆಗಿರುವುದರಿಂದ, ಇತರ ಅನೇಕ ಪಕ್ಷಿಗಳಿಗೆ ಹೋಲಿಸಿದರೆ ಅವು ದೀರ್ಘಕಾಲ ಬದುಕುತ್ತವೆ. ದಾಖಲಾಗಿರುವ ಅತಿ ಹಳೆಯ ಕಾಡು ಹದ್ದಿನ ವಯಸ್ಸು ಸುಮಾರು ೩೨ ವರ್ಷಗಳು. ಇದು ಬಯಸಿದರೆ ಮುಂದಕ್ಕೆ ೭೦ ವರ್ಷಗಳ ಕಾಲವೂ ಬದುಕಬಲ್ಲದು. ಆದರೆ ಈ ವಯಸ್ಸನ್ನು ತಲುಪಲು, ಹದ್ದು ಒಂದು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅಂದರೆ ತನ್ನ ೪೦ರ ಹರೆಯದಲ್ಲಿ, ಅದರ ಉದ್ದನೆಯ ಮತ್ತು ಬಾಗಬಲ್ಲ ಉಗುರುಗಳು (ಪಂಜಗಳು) ತನಗೆ ಆಹಾರ ಆಗಬಲ್ಲ ಬೇಟೆಯನ್ನು ಹಿಡಿಯಲು ಅಸಮರ್ಥ ಸ್ಥಿತಿಗೆ ತಲುಪುತ್ತವೆ.
ಹದ್ದಿನ ಜೀವನದ ಉದ್ದಕ್ಕೂ ಅದರ ಉಗುರುಗಳು ತೀರಾ ಗಟ್ಟಿಯಾಗಿ, ಚೂಪಾಗಿ ಮತ್ತು ಬಾಗಿಕೊಂಡು ಇರುತ್ತವೆ. ಉಗುರುಗಳು ಮತ್ತು ಕೊಕ್ಕು ‘ಕೆರಾಟಿನ್’ ಎಂಬ ವಸ್ತುವಿನಿಂದ ಮಾಡಲ್ಪಟ್ಟಿರುತ್ತವೆ. ಇದು ನಮ್ಮ ಬೆರಳಿನ ಉಗುರುಗಳಲ್ಲಿ ಇರುವಂತಹ ವಸ್ತುವೇ ಆಗಿರುತ್ತದೆ. ನಮ್ಮ ಉಗುರುಗಳು ಬೆಳೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆ ಎನ್ನುವುನ್ನು ಒಮ್ಮೆ ಯೋಚಿಸುವುದು ಉತ್ತಮ.
ಹದ್ದಿನ ಉದ್ದನೆಯ ಮತ್ತು ಚೂಪಾದ ಕೊಕ್ಕು ಬಾಗಿಕೊಳ್ಳುತ್ತದೆ.
ಆಹಾರವನ್ನು ಹರಿದು ತಿನ್ನಲು ಹದ್ದಿನ ಕೊಕ್ಕು ಕೊಕ್ಕೆಯ ಆಕಾರದಲ್ಲಿ ಇರುತ್ತದೆ. ಬೇಟೆಯಾಡುವ ಇತರ ಎಲ್ಲಾ ಪಕ್ಷಿಗಳಂತೆ, ಹದ್ದು ಕೂಡ ತನ್ನ ಜೀವನದ ಉದ್ದಕ್ಕೂ ಈ ವಿಶಿಷ್ಟವಾದ ಕೊಕ್ಕೆಯ ಆಕಾರದ ಕೊಕ್ಕನ್ನು ಹೊಂದಿರುತ್ತದೆ. ಆಹಾರವನ್ನು ಹಿಡಿಯಲು ಮತ್ತು ತಿನ್ನಲು ಹದ್ದುಗಳಿಗೆ ಕೊಕ್ಕು ಮತ್ತು ಉಗುರುಗಳು ಅತ್ಯಗತ್ಯ. ಕೊಕ್ಕು ಅಥವಾ ಉಗುರುಗಳು ಇಲ್ಲದೆ ಯಾವುದೇ ಹದ್ದು ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ.
ದಪ್ಪನೆಯ ಗರಿಗಳಿಂದಾಗಿ ಅದರ ಹಳೆಯ ಮತ್ತು ಭಾರವಾದ ರೆಕ್ಕೆಗಳು ಎದೆಗೆ ಅಂಟಿಕೊಂಡಂತೆ ಆಗಿ, ಹಾರಾಟವನ್ನು ಕಷ್ಟಕರ ಮಾಡುತ್ತವೆ.
ಹದ್ದಿನ ಜೀವನದ ಉದ್ದಕ್ಕೂ ಗರಿಗಳು ಬದಲಾಗುತ್ತಲೇ ಇರುತ್ತವೆ. ಈ ಪ್ರಕ್ರಿಯೆಯನ್ನು ‘ಮೋಲ್ಟಿಂಗ್’ (ಗರಿ ಉದುರುವಿಕೆ) ಎಂದು ಕರೆಯುತ್ತಾರೆ. ಹದ್ದು ತನ್ನ ಎಲ್ಲಾ ಗರಿಗಳನ್ನು ಒಂದೇ ಬಾರಿಗೆ ಕಳೆದುಕೊಳ್ಳುವುದಿಲ್ಲ. ಇದು ನಿಧಾನವಾಗಿ ನಡೆಯುವ ಪ್ರಕ್ರಿಯೆ ಆಗಿದ್ದು, ಗರಿಗಳು ನಿರಂತರವಾಗಿ ನವೀಕರಣ ಆಗುತ್ತಾ ಇರುತ್ತವೆ.

ಆಗ ಹದ್ದಿನ ಮುಂದೆ ಕೇವಲ ಎರಡು ಆಯ್ಕೆಗಳು ಮಾತ್ರ ಉಳಿದಿರುತ್ತವೆ. ಒಂದು ಯಥವಾತ್ತಾಗಿ ತಾನು ಅಸಮರ್ಥ ಆದಾಗ ತನ್ನ ಮುಂದಿರುವ ಸಾವನ್ನು ಒಪ್ಪಿಕೊಂಡು ಸಾಯುವುದು ಅಥವಾ ಮುಂದಿನ ನೂರೈವತ್ತು ದಿನಗಳ ಕಾಲ ನಡೆಯುವ ನೋವಿನ ಬದಲಾವಣೆಯ ಪ್ರಕ್ರಿಯೆಗೆ ಒಳಗಾಗುವುದು. ಬದುಕುವುದಕ್ಕಾಗಿ ಇದು ಜೀವನದ ಅತ್ಯಂತ ಕಠಿಣ ಹಾಗೂ ನೋವಿನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.
ಈ ಪ್ರಕ್ರಿಯೆಯಲ್ಲಿ ಹದ್ದು ಪರ್ವತದ ತುದಿಗೆ ಹಾರಿ ತನ್ನ ಗೂಡಿನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ.
ಹದ್ದಿನ ಗೂಡನ್ನು ಮರಿಗಳನ್ನು ಸಾಕಲು ಮಾತ್ರ ಬಳಸಲಾಗುತ್ತದೆ. ವರ್ಷದ ಬಹುಪಾಲು ಸಮಯದಲ್ಲಿ ಹದ್ದುಗಳು ತಮ್ಮ ಗೂಡನ್ನು ಬಳಸುವುದಿಲ್ಲ. ಕೇವಲ ಮರಿಗಳನ್ನು ಸಾಕುವ ಕೆಲವು ತಿಂಗಳುಗಳು ಮಾತ್ರ ಅವು ಗೂಡನ್ನು ಬಳಸುತ್ತವೆ.
ಅಲ್ಲಿ ಹದ್ದು ತನ್ನ ಕೊಕ್ಕನ್ನು ಒಂದು ಕಠಿಣವಾದ ಬಂಡೆಗೆ ಬಡಿದು ಅದನ್ನು ಕಳಚಿಕೊಳ್ಳುತ್ತದೆ.
ಆಹಾರವನ್ನು ಹಿಡಿಯಲು ಮತ್ತು ತಿನ್ನಲು ಹದ್ದುಗಳಿಗೆ ಕೊಕ್ಕು ಮತ್ತು ಉಗುರುಗಳು ಅತ್ಯಗತ್ಯ. ಕೊಕ್ಕು ಅಥವಾ ಉಗುರು ಇಲ್ಲದೆ ಯಾವುದೇ ಹದ್ದು ಬದುಕಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ಗಿಡುವು ತನ್ನ ಬಾಗಿ ಮೊಂಡಾದ ಕೊಕ್ಕಿನ ತುದಿಯನ್ನು ಕಲ್ಲಿಗೆ ಜೋರಾಗಿ ಕುಕ್ಕಿ, ಉಜ್ಜಿ ಮೊಂಡಾದ ತುದಿಯನ್ನು ಕಿತ್ತು ತೆಗೆದು, ಹೊಸತಾದ ಕೊಕ್ಕು ಬೆಳೆಯುವವರೆಗೆ ಕಾಯುತ್ತಾ ಕುಳಿತುಕೊಳ್ಳುತ್ತದೆ.
ಕೊಕ್ಕು ಬೆಳೆದ ನಂತರ ಉಗುರುಗಳನ್ನು ಬಂಡೆಗೆ ಉಜ್ಜಿ ಮೊನಚು ಮಾಡುತ್ತದೆ.
ಹೊಸ ಕೊಕ್ಕು ಬೆಳೆದ ನಂತರ ತನ್ನ ಮೊಂಡಾಗಿ ಮೊನಚು ಕಳೆದುಕೊಂಡ ಉಗುರುಗಳನ್ನು ಕಲ್ಲಿಗೆ ಆಳವಾಗಿ ಉಜ್ಜುತ್ತದೆ. ಈ ಮೂಲಕ ತನ್ನ ಮೊನಚು ಕಳೆದುಕೊಂಡ ಉಗುರನ್ನು ಮತ್ತೆ ಮೊನಚು ಮಾಡಿಕೊಳ್ಳುತ್ತದೆ.
ಹೊಸ ಉಗುರುಗಳು ಬೆಳೆದ ನಂತರ, ಹದ್ದು ತನ್ನ ಹಳೆಯ ಗರಿಗಳನ್ನು ಕಿತ್ತುಹಾಕಲು ಪ್ರಾರಂಭಿಸುತ್ತದೆ.
ಕಾಲಿನ ಉಗುರುಗಳು ಹೊಸತಾಗಿ ಬೆಳೆಯುತ್ತಿದ್ದಂತೆ, ತನ್ನ ರೆಕ್ಕೆಗಳಲ್ಲಿ ಇರುವ ವಯಸ್ಸಾದ ಪುಕ್ಕಗಳನ್ನು ತಡೆಯಲಾರದ ನೋವಿದ್ದರೂ ಒಂದೊಂದಾಗಿ ಕಿತ್ತುತೆಗೆದು ಹಿಸ ಪುಕ್ಕಗಳು ಬರುವವರೆಗೆ ಕಾಯುತ್ತಾ ಕುಳಿತುಕೊಳ್ಳುತ್ತದೆ.
ಹದ್ದು ಹಲವು ದಿನಗಳವರೆಗೆ ಆಹಾರವಿಲ್ಲದೆ ಇದ್ದು, ಅಳಿವು ಮತ್ತು ಉಳಿವು ಎನ್ನುವ ಪ್ರಶ್ನೆಯ ಸಂದರ್ಭದಲ್ಲಿ ಬದುಕಲು ಅಗತ್ಯವಿರುವ ಕಠಿಣವಾದ ಬದಲಾವಣೆಯ ಪ್ರಕ್ರಿಯೆಗೆ ಒಳಗಾಗಲು ಹಲವು ದಿನಗಳವರೆಗೆ ಆಹಾರವಿಲ್ಲದೆ ಇರುತ್ತದೆ. ಮತ್ತು ಹಲವು ಸಮಯಗಳ ಉಪವಾಸ ಮತ್ತು ಕಠಿಣ ಪರಿಶ್ರಮದ ನಂತರ, ಹದ್ದು ತನ್ನ ಪ್ರಸಿದ್ಧವಾದ ‘ಮರುಜನ್ಮದ ಹಾರಾಟ’ವನ್ನು ಕೈಗೊಳ್ಳುತ್ತದೆ ಮತ್ತು ಇನ್ನೂ ೩೦ ವರ್ಷಗಳ ಕಾಲ ಬದುಕುತ್ತದೆ.
ಏಕೆ ಈ ಕಠಿಣ ಅಥವಾ ನೋವಿನಿಂದ ಕೂಡಿದ ಬದಲಾವಣೆಯ ಅಗತ್ಯವಿದೆ?
ಜೀವನದ ಹಲವು ಸಂದರ್ಭಗಳಲ್ಲಿ ಬದುಕುವ ಉದ್ದೇಶದಿಂದ ಕಠಿಣವಾದ ಬದಲಾವಣೆಯ ಪರ್ವಕ್ಕೆ ಎಲ್ಲರೂ ಒಗ್ಗಿಕೊಳ್ಳಬೇಕಾಗುತ್ತದೆ. ಹಲವು ಸಂದರ್ಭಗಳಲ್ಲಿ ಬದುಕಿನ ಯಾವುದೋ ನೆನಪುಗಳು, ಕಷ್ಟಗಳು ಹಾಗೂ ಅಭ್ಯಾಸಗಳು ಅಥವಾ ಹಳೆಯ ಪದ್ಧತಿಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಹಳೆಯ ಕೆಲವೊಂದು ಸಮಸ್ಯೆಗಳು ಹಾಗೂ ಹೊರೆಗಳಿಂದ ಹೊರಬಂದು ಹೊಸ ಬದುಕಿಗೆ ತೆರೆದುಕೊಳ್ಳಲು ಬದಲಾವಣೆಯು ಅವಶ್ಯಕವಾಗಿ ಬೇಕು. ಮತ್ತು ಬದಲಾವಣೆಗಳಿಗೆ ತೆರೆದುಕೊಳ್ಳುವುದೂ ಅನಿವಾರ್ಯ.


