ಉದಯರಶ್ಮಿ ದಿನಪತ್ರಿಕೆ
ಚಡಚಣ: ದೀಪಾವಳಿ ಹಬ್ಬದ ಪ್ರಯುಕ್ತ ಝಳಕಿ ಗ್ರಾಮದ ಬೀರಲಿಂಗೇಶ್ವರ ದೇವರ ಆವರಣದಲ್ಲಿ ವಿವಿಧ ಗ್ರಾಮಗಳ ದೇವರ ಪಲ್ಲಕ್ಕಿಗಳ ಅದ್ದೂರಿ ಭೇಟಿ ಹಾಗೂ ಧಾರ್ಮಿಕ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.
ಝಳಕಿ, ಲೋಣಿ, ಗೋಟ್ಯಾಳ, ಜೇವೂರ ಹಾಗೂ ಬಳ್ಳೊಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ದೇವರ ಪಲ್ಲಕ್ಕಿಗಳು ಒಂದೆಡೆ ಸೇರಿ ಪರಸ್ಪರ ಭೇಟಿಯಾದವು. ಈ ಸಂದರ್ಭದಲ್ಲಿ ಭಕ್ತರು ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು.
ನಂತರ ದೇವರುಗಳ ಪೂಜಾರಿಗಳಿಂದ ನುಡಿಮುತ್ತುಗಳ ಹೇಳಿಕೆ ನಡೆಯಿತು. ಧಾರ್ಮಿಕ ಪರಂಪರೆ, ಸಂಪ್ರದಾಯ ಹಾಗೂ ಭಕ್ತಿಯ ಮಹತ್ವ ಸಾರುವ ಈ ಕಾರ್ಯಕ್ರಮ ಗ್ರಾಮೀಣ ಭಾಗದ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಬೀರಲಿಂಗೇಶ್ವರ ದೇವರ ಸಮಿತಿ ಅಧ್ಯಕ್ಷ ಬೀರಣ್ಣಗೌಡ ಬಗಲಿ, ಶಿವಾನಂದ ಪೂಜಾರಿ, ಅಣ್ಣಪ್ಪ ತಳವಾರ, ಮಾಳಪ್ಪ ಉಮರಾಣಿ, ರಾಘವೇಂದ್ರ ಕಾಪಸೆ, ಸಣ್ಣಪ್ಪ ತಳವಾರ, ರಮೇಶಗೌಡ ಬಗಲಿ, ಗುರುಪಾದಗೌಡ ಬಿರಾದಾರ, ಶಂಕರಗೌಡ ಬಿರಾದಾರ, ವಿನೋದ ಶಿರಶ್ಯಾಡ, ಸುಭಾಷ್ ಚಟ್ಟರಕಿ, ಜಿ.ಡಿ. ಹೂಗಾರ, ಶಂಕರ ಪಾಚಂಗೆ, ಬೀರಣ್ಣ ಕಾಗರ, ಶಿವಬಾಳಪ್ಪಗೌಡ ಬಗಲಿ, ಗುರುಬಾಳಪ್ಪ ಅಗಸರ, ಮಲ್ಲಿಕಾರ್ಜುನ ಬನಸೋಡೆ, ಅಶೋಕ ಕಾಸರ, ಸುರೇಶ ಸಿಂಧೆ, ಶ್ರೀಮಂತ ನಾವಿ, ಕಿರಣ್ಣಗೌಡ ಬಗಲಿ ಸೇರಿದಂತೆ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.

