ವ್ಯಕ್ತಿತ್ವವನ್ನು ನಿರ್ಧರಿಸುವ ಪ್ರಮುಖ ಅಂಶಗಳೆಂದರೆ, ಭೌತಿಕ ಬೆಳವಣಿಗೆಯ ಮಟ್ಟ, ಬೌದ್ಧಿಕ ಬೆಳವಣಿಗೆ ಮಟ್ಟ, ಭಾವನಾತ್ಮಕ ಬೆಳವಣಿಗೆ, ಮಾನಸಿಕ ಬೆಳವಣಿಗೆ, ನೈತಿಕ ಬೆಳವಣಿಗೆ, ನೀತಿಯನ್ನು ಗುರುತಿಸುವ ಅಂಶಗಳು ಮತ್ತು ಆಧ್ಯಾತ್ಮಿಕ ಬೆಳವಣಿಗೆ ಈ ಕೆಳಕಂಡ ಅಂಶಗಳ ಕಡೆಗೆ ಹೆಚ್ಚಿನ ಲಕ್ಷ್ಯವಹಿಸಿದರೆ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಬಹುದು.
– ಸಂತೋಷ್ ರಾವ್ ಪೆರ್ಮುಡ.
ಪಟ್ರಮೆ ಗ್ರಾಮ-ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ವ್ಯಕ್ತಿತ್ವ ಎಂಬುದು ಅನೇಕ ಆಂತರಿಕ ಶಕ್ತಿಗಳ ಸಂಗಮ. ಆದರ್ಶ, ಸದಾಚಾರ, ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ ಸನ್ನಿವೇಶಗಳೊಡನೆ ಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿಪರತೆ, ಪರೋಪಕಾರ ಮನಸ್ಸು, ಪ್ರಾಮಾಣಿಕತೆಗಳು ವ್ಯಕ್ತಿತ್ವವನ್ನು ನಿರ್ಮಿಸುವ ಶಕ್ತಿಗಳು. ಇದರಿಂದ ಇಲ್ಲಿ ವ್ಯಕ್ತಿ ಮುಖ್ಯವಲ್ಲ ಬದಲಿಗೆ ವ್ಯಕ್ತಿತ್ವ ಮುಖ್ಯವೆಂಬುದು ಅರಿವಾಗುತ್ತದೆ. ಹೂವಿಗೆ ಪರಿಮಳ ಎಷ್ಟು ಮುಖ್ಯವೋ ಅದೇ ರೀತಿ ಮನುಷ್ಯನಿಗೆ ವ್ಯಕ್ತಿತ್ವವೂ ಮುಖ್ಯ. ಪ್ರತಿಯೊಬ್ಬರ ಜೀವನದ ಒಳಿತು ಕೆಡಕುಗಳಿಗೆ ಅವರೇ ಶಿಲ್ಪಿಗಳಾಗಿರುತ್ತಾರೆ. ಮನುಷ್ಯ ತನ್ನ ಜೀವನವನ್ನು ತನ್ನಿಷ್ಟದಂತೆ ರೂಪಿಸಿಕೊಳ್ಳುತ್ತಾನೆ, ಅಂದರೆ ತನ್ನೆಲ್ಲ ಆಲೋಚನೆಗಳ ವಸ್ತುರೂಪವೇ ಮನುಷ್ಯನಾಗಿರುತ್ತಾನೆ. ವ್ಯಕ್ತಿತ್ವವು ಹುಟ್ಟಿನಿಂದ ಸಾವಿನವರೆಗೆ ರೂಪುಗೊಳ್ಳುತ್ತಿರುತ್ತದೆ. Peಡಿsoಟಿಚಿಟiಣಥಿ emeಡಿges eಚಿಡಿಟಥಿ ಚಿಟಿಜ ಛಿoಟಿಣiಟಿues ಣo ಛಿhಚಿಟಿge iಟಿ meಚಿಟಿiಟಿgಜಿuಟ ತಿಚಿಥಿs ಣhಡಿoughouಣ ಣhe ಟiಜಿesಠಿಚಿಟಿ.
ಮನೋವಿಜ್ಞಾನಿಗಳ ಪ್ರಕಾರ ವ್ಯಕ್ತಿತ್ವವು ಐದು ಅಂಶಗಳನ್ನು ಆಧರಿಸಿದೆ. (ಖಿhe ಜಿive ಜಿಚಿಛಿಣoಡಿs hಚಿve beeಟಿ ಜeಜಿiಟಿeಜ ಚಿs oಠಿeಟಿಟಿess ಣo exಠಿeಡಿieಟಿಛಿe, ಛಿoಟಿsಛಿieಟಿಣiousಟಿess, exಣಡಿಚಿveಡಿsioಟಿ, ಚಿgಡಿeeಚಿbಟeಟಿess, ಚಿಟಿಜ ಟಿeuಡಿoಣiಛಿism.) ಅವುಗಳೆಂದರೆ, ಮುಕ್ತ ಅನುಭವ, ಆತ್ಮಸಾಕ್ಷಿ ಭಾವ, ಬಹಿರ್ಮುಖತ್ವ, ಒಪ್ಪಿಕೊಳ್ಳುವ ಮನಸ್ಸು, ನರವ್ಯಾಧಿತನ ಇವು ಪ್ರಮುಖವಾದವುಗಳು. ವ್ಯಕ್ತಿತ್ವ ವಿಕಸನಗೊಳ್ಳಲು ಪ್ರಮುಖವಾಗಿ ಆರು ವಿಷಯಗಳಲ್ಲಿ ತನ್ನದೇ ಆದ ಪ್ರಭುತ್ವವನ್ನು ಸಾಧಿಸಿಕೊಳ್ಳಬೇಕಾಗುತ್ತದೆ. ಆ ಆರು ವಲಯಗಳೆಂದರೆ, ಭೌತಿಕ, ಬೌದ್ಧಿಕ, ಭಾವನಾತ್ಮಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ವಲಯಗಳು.
ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶಗಳು
ವ್ಯಕ್ತಿತ್ವವನ್ನು ನಿರ್ಧರಿಸುವ ಪ್ರಮುಖ ಅಂಶಗಳೆಂದರೆ, ಭೌತಿಕ ಬೆಳವಣಿಗೆಯ ಮಟ್ಟ, ಬೌದ್ಧಿಕ ಬೆಳವಣಿಗೆ ಮಟ್ಟ, ಭಾವನಾತ್ಮಕ ಬೆಳವಣಿಗೆ, ಮಾನಸಿಕ ಬೆಳವಣಿಗೆ, ನೈತಿಕ ಬೆಳವಣಿಗೆ, ನೀತಿಯನ್ನು ಗುರುತಿಸುವ ಅಂಶಗಳು ಮತ್ತು ಆಧ್ಯಾತ್ಮಿಕ ಬೆಳವಣಿಗೆ ಈ ಕೆಳಕಂಡ ಅಂಶಗಳ ಕಡೆಗೆ ಹೆಚ್ಚಿನ ಲಕ್ಷ್ಯವಹಿಸಿದರೆ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಬಹುದು. ಅವುಗಳೆಂದರೆ, ಪ್ರತಿ ದಿನವನ್ನೂ ಆಶಾದಾಯಕ ಹಾಗೂ ಅದೃಷ್ಟದ ದಿನವೆಂದು ಭಾವಿಸಬೇಕು. ಪ್ರತಿಯೊಂದು ವಿಚಾರದ ಕುರಿತೂ ಆಶಾದಾಯಕವಾಗಿರಬೇಕು. ಪ್ರತಿಯೊಂದರ ಬಗ್ಗೆಯೂ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಯಿರಬೇಕು. ಪ್ರಾಮಾಣಿಕತೆಯೇ ಜೀವನದ ಪರಮ ಮಂತ್ರವಾಗಿರಬೇಕು. ನಿತ್ಯ ಹೊಸ ಅನುಭವವನ್ನು ಪಡೆಯುವ ಮನಸ್ಸಿರಬೇಕು. ಅನ್ಯರಿಗಾಗಿ ಪ್ರಾರ್ಥನೆಯನ್ನು ಮಾಡಬೇಕು. (ಪರರ ಹಿತವನ್ನು ಬಯಸಬೇಕು) ಮುಕ್ತ ಮನೊಭಾವವಿರಬೇಕು. ಮಾನಸಿಕ ಚಟುವಟಿಕೆಯಿಂದ ಕೂಡಿರಬೇಕು. ತನ್ನ ನೈಜ ಪ್ರೀತಿಯನ್ನು ಎಲ್ಲರಿಗೂ ಹಂಚಬೇಕು. ಸ್ವಶಕ್ತಿಯಲ್ಲಿ ವಿಶ್ವಾಸವಿರಬೇಕು. ವರ್ತಮಾನದಲ್ಲಿ ಬದುಕುವ ಮನೋಭಾವವಿರಬೇಕು. ಹೆಚ್ಚು ಹೆಚ್ಚು ಮನನ ಮಾಡಿಕೊಳ್ಳುವುದು. ಯಾವುದನ್ನೂ ನಾಳೆ ಯಾ ನಾಡಿದ್ದು ಎಂದು ಮುಂದೂಡಬಾರದು. ಬೇರೆಯವರಿಂದ ಬರುವ ಹಿಮ್ಮಾಹಿತಿಯನ್ನು ಧನಾತ್ಮಕವಾಗಿ ಅಭ್ಯಸಿಸಬೇಕು. ವ್ಯಕ್ತಿತ್ವದ ಅಭಿವೃದ್ಧಿಯಲ್ಲಿ ಹವ್ಯಾಸವೂ ಪ್ರಮುಖ ಪಾತ್ರವಹಿಸುತ್ತದೆ. ವ್ಯಕ್ತಿಯೊಬ್ಬನ ವ್ಯಕ್ತಿತ್ವವು ೨೫% ವಂಶಪಾರಂಪರ್ಯವಾಗಿ, ಹಾಗೂ ಉಳಿದ ೭೫% ವ್ಯಕ್ತಿ ವಾಸಿಸುವ ಪರಿಸರವನ್ನು ಅವಲಂಬಿಸಿರುತ್ತದೆ.
ಭೌತಿಕ ಬೆಳವಣಿಗೆ

ಮಾನವ ಏನನ್ನಾದರೂ ಸಾಧಿಸಲು ಪ್ರಪ್ರಥಮವಾಗಿ ದೇಹ ವರ್ಧನೆ ಅತಿ ಮುಖ್ಯ. ಹಿರಿಯರು ಹೇಳುವಂತೆ ‘ಘಟ ಇದ್ರೆ ಮಠ ಕಟ್ಟಬಹುದು’, ‘ಅಂಗಾಲಲ್ಲಿ ತ್ರಾಣ ಇದ್ರೆ ಬಂಗಾಳಕ್ಕಾದರು ನಡೀತೀನಿ’ ಅಂದರೆ ದೇಹಾರೊಗ್ಯ ಅತಿ ಮುಖ್ಯ. ಇದನ್ನೇ ಸಂಸ್ಕೃತದಲ್ಲಿ ‘ಶರೀರಮಾಧ್ಯಂ ಖಲುಧರ್ಮ ಸಾಧನಮ್’, ‘ಹಿತ ಭುಕ್, ಮಿತ ಭಹುಕ್, ಋತ ಭುಕ್’ ‘ಧರ್ಮಾರ್ಥ ಕಾಮ ಮೋಕ್ಷಾಣಾಂ ಆರೋಗ್ಯಂ ಮೂಲಮುತ್ತಮಮ್’. ಅಂದರೆ ಜೀವನದಲ್ಲಿ ಯಾವುದೇ ಸಾಧನೆ ಮಾಡಲು ಆರೋಗ್ಯವೆಂಬುದು ಅತಿ ಅಗತ್ಯವೆಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಆಂಗ್ಲ ಗಾದೆ ಹೇಳುವಂತೆ ‘ಗಟ್ಟಿ ದೇಹದಲ್ಲಿ ಗಟ್ಟಿ ಚಿಂತನೆಗಳಿರುತ್ತವೆ’ ಎನ್ನುವುದನ್ನು ಅರಿತು ದೈಹಿಕವಾಗಿ ಸಮರ್ಥರಿರಬೇಕು. ಇದಕ್ಕಾಗಿ ಉತ್ತಮ ಹವ್ಯಾಸಗಳು ಮತ್ತು ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು.
ಬೌದ್ಧಿಕ ಬೆಳವಣಿಗೆ
ಜೀವನದಲ್ಲಿ ಯಾವುದೇ ಸಾಧನೆಗೆ ಮಾನವನ ಬುದ್ಧಿ ಪ್ರಮುಖ ಪಾತ್ರ ವಹಿಸುತ್ತದೆ. ಮಾನವನ ಧೀಶಕ್ತಿಯಿಂದಾಗಿ ಇಂದಿನ ಎಲ್ಲ ಚಟುವಟಿಕೆಗಳು ಜರುಗುತ್ತಿವೆ. ವಿದ್ಯೆ ಬುದ್ಧಿ ಇವೆರಡು ಶಬ್ದಗಳು ಜೀವನ ಪರ್ಯಂತ ಜೊತೆ ಜೊತೆಯಲ್ಲೇ ಸಾಗುತ್ತಿರುತ್ತವೆ. ಹಾಗಾಗಿಯೇ ಬುದ್ಧಿಗೆ ಸಂಬಂಧಿಸಿದಂತೆ ಹಿರಿಯರು ಹಲವಾರು ಗಾದೆಮಾತುಗಳನ್ನು ಕಟ್ಟಿದ್ದಾರೆ. ‘ಅರಿವು ಇದ್ರೆ ಮರೆವು ಬರಲ್ಲ’, ‘ಹೇಳಿಕೊಟ್ಟ ಬುದ್ಧಿ ಕಟ್ಟಿಕೊಟ್ಟ ಬುತ್ತಿ ಬಾಳ ದಿನ ಉಳಿಯಲ್ಲ’. ‘ಹೇಳೋರಿಗೆ ಸುದ್ಧಿ, ಕೇಳೋರಿಗೆ ಬುದ್ಧಿ’, ‘ಚಾಡಿ ಮಾತ ಕೇಳಿ ಚಾವಡಿ ಹಾಳಾಯ್ತಂ’, ’ಓದು ಒಕ್ಕಾಲು, ಬುದ್ಧಿ ಮುಕ್ಕಾಲು’, ‘ಕ್ಷಣಂ ಚಿತ್ತಂ, ಕ್ಷಣಂ ವಿತ್ತಂ. ಕುಶಾಗ್ರ ಬುದ್ಧಿನೋ, ಮುಸಲಾಗ್ರ ಬುದ್ಧಿನೋ? ವಿದ್ಯೆಗೆ ಎಣೆಯಿಲ್ಲ, ಬುದ್ಧಿಗೆ ಕಡೆಯಿಲ್ಲ, ಘೃತ ಬುದ್ಧಿಯೋ, ತೈಲ ಬುದ್ಧಿಯೋ? ವಿದ್ಯೆ ಬುದ್ಧಿಗ್ ಮೂಲ, ಬುದ್ಧಿ ಸೌಖ್ಯಕ್ಕೆ ಮೂಲ’, ‘ಬುದ್ಧಿ ಉಂಟೆ ಬುವ್ವ ತಿಂಟಾಡು, ಲೇಕುಂಟೆ ಗುವ್ವ ತಿಂಟಾಡು’.
ಅಂದರೆ, ಬುದ್ಧಿ ಮಾನವ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಅತ್ಯವಶ್ಯಕ. ಯಾವುದನ್ನೇ ತಿಳಿಯುವ ಶಕ್ತಿ, ವಿಷಯದ ಬಗೆಗಿನ ತಿಳುವಳಿಕೆ, ವಿಷಯದ ಬಗೆಗಿನ ಆಳವಾದ ಅರಿವು, ವ್ಯಕ್ತಿಯ ಸ್ವಭಾವ, ಜ್ಞಾನ ಈ ಎಲ್ಲವೂ ಜಾಣತನ ಅಥವಾ ವ್ಯಕ್ತಿಯ ಬುದ್ಧಿಯನ್ನು ಅವಲಂಬಿಸಿರುತ್ತವೆ.
ಭಾವನಾತ್ಮಕ ಬೆಳವಣಿಗೆ:
ಸಹಜವಾಗಿಯೇ ಮಾನವ ಭಾವನಾತ್ಮಕ ಜೀವಿ. ಭಾವನೆಗಳೇ ಇಲ್ಲದವನು ಪಶು ಸಮಾನ. ಭಾವನೆಗಳು ಮಾನವನನ್ನು ತನ್ನ ಜೀವನದ ಬಗ್ಗೆ ಕನಸು ಕಾಣಲು ಪ್ರೇರೆಪಿಸುತ್ತವೆ. ಸ್ವಪ್ನರಹಿತ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಭಾವನೆಗಳು ಜ್ಞಾನಕ್ಕಿಂತ ಹೆಚ್ಚು ಪರಿಣಾಮಕಾರಿ. ಭಾವನೆಗಳೆಂಬ ಅಗ್ನಿಗೆ ಆಸೆ ಆಕಾಂಕ್ಷೆಗಳೇ ಸೌದೆಗಳು. ಭಾವನೆಗಳು ಅಂತರಂಗದ ಗತಿಬಿಂಬ ಪ್ರತಿಬಿಂಬಗಳಂತೆ. ಯದ್ಭಾವಂ ತದ್ಭವತಿ, ನಿಮ್ಮ ಭಾವನೆಗಳು ಶಭ್ರವಾಗಿದ್ದರೆ ಒತ್ತಡಗಳಿಗೆ ಅವಕಾಶವಿರದು. ನಕಾರಾತ್ಮಕ ಚಿಂತನೆಗಳಿAದ ದೂರ ನಿಂತಾಗ ಸಕಾರಾತ್ಮಕ ಭಾವನೆಗಳ ಜನನವಾಗುತ್ತದೆ. ಭಾವನೆಗಳು ಸ್ಪಷ್ಟವಾಗುತ್ತಾ ಹೋದಂತೆ ಸೃಜನಶೀಲತೆ ಹಾಗು ಆತ್ಮವಿಶ್ವಾಸಗಳು ವರ್ಧಿಸುತ್ತವೆ.
ಮಾನಸಿಕ ಬೆಳವಣಿಗೆ

ವ್ಯಕ್ತಿತ್ವ ವಿಕಸನದಲ್ಲಿ ಮಾನಸಿಕ ಬೆಳವಣಿಗೆ ಪ್ರಮುಖ ಪಾತ್ರ ವಹಿಸಿದರೆ, ಮನಸ್ಸು ವ್ಯಕ್ತಿತ್ವದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇಚ್ಛಾಶಕ್ತಿ ಕ್ರಿಯಾ ಶಕ್ತಿಗಳು ಸಕಾರಾತ್ಮಕವಾಗಿದ್ದಲ್ಲಿ ಮನಸ್ಸು ಸದಾ ಉತ್ಸಾಹಭರಿತವಾಗಿರುತ್ತದೆ. ಎಲ್ಲ ಬಗೆಯ ನಂಬಿಕೆಗಳು ಮನಸ್ಸನ್ನು ಆಧರಿಸಿರುತ್ತವೆ. ಇದನ್ನೇ ರಾಷ್ಟçಕವಿ ಕುವೆಂಪುರವರು ಹೀಗೆ ಹೇಳುತ್ತಾರೆ.. ‘ಎಷ್ಟು ದೇವರ ನೀನೆಷ್ಟು ನಂಬಿದರೇನು, ಒಂದಿಷ್ಟು ನಂಬದಿರೆ ನಿನ್ನ ನೀನು’ ಎಂದು.
ಮಾನಸಿಕವಾಗಿ ಅತಿ ಎತ್ತರಕ್ಕೆ ಬೆಳೆಯಲಾಗದಿದ್ದರೂ ಎಲ್ಲರ ಮನಸ್ಸಿಗೆ ಹತ್ತಿರವಾಗಿ ಬೆಳೆಯಬೇಕು. ಮನಸ್ಸನ್ನು ಕೆರಳಿಸಬಾರದು ಆದರೆ ಅರಳಿಸಬೇಕು. ಮನಸ್ಸನ್ನು ಅರಳಿಸಿ ಪಳಗಿಸಿದರೆ, ಸುಖ ದುಃಖಗಳಲ್ಲಿ ಸಮತೆಯನ್ನು ಹೊಂದಿ ಎಲ್ಲ ಕನಸುಗಳನ್ನು ನನಸಾಗಿಸಿಕೊಳ್ಳಬಹುದು. ಮನಸ್ಸು ಪರಿಶುದ್ಧವಾಗಿದ್ದರೆ ಶತ್ರುವೂ ಮಿತ್ರನಾಗುತ್ತಾನೆ. ಗಾದೆ ಮಾತು ಹೇಳುವಮತೆ ‘ಮನಸ್ಸಿನಂತೆ ಮಹದೇವ’ ಎಲ್ಲಕ್ಕೂ ಮನಸ್ಸೇ ಕಾರಣ. ಇದನ್ನೇ ಸಂಸ್ಕೃತತದಲ್ಲಿ ಹೀಗೆ ಹೇಳುತ್ತಾರೆ. ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ’ ಅಂದರೆ ಮಾನವ ಬಯಸುವ ಮೋಕ್ಷ ಬಂಧನಗಳಿಗೆ ಮನಸ್ಸೇ ಮುಖ್ಯ ಕಾರಣವಾಗುತ್ತದೆ.
ಜಾನ್ಮಿಲ್ಟನ್ ಹೇಳುವಂತೆ ‘ಮನಸ್ಸಿಗೆ ಮನವೇ ನೆಲೆ ಮನಸ್ಸು ತನ್ನಲ್ಲಿಯೇ ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತದೆ. ನಾಕ ನರಕಗಳೆರಡೂ ಮನಸ್ಸಿನಲ್ಲಿಯೇ ಇರುತ್ತವೆ. ನರಕದಿಂದ ನಾಕವನ್ನೂ, ನಾಕದಿಂದ ನರಕವನ್ನೂ ಮನಸ್ಸೇ ನಿರ್ಧರಿಸುತ್ತದೆ’. ಚಿನ್ಮಯ ಚಿಂತಾಮಣಿ ಹೇಳುವಂತೆ ‘ಜನಿಸಿದ ರಾಗಾಧಿಕಮೆಂಬೀ, ಘನಕಲ್ಲೋಲಗಳಿಂದ, ಮನವೆಂಬ ಉದಕವು ಕದಡದಿರೆ, ಚಿನ್ಮಯನಿಲ್ಲಿಯೇ ತೋರ್ಕುಮ್’. ಕರ್ಮಯೋಗಿ ಸಿದ್ಧರಾಮ ಹೇಳುವಂತೆ ‘ಮನವೆಂದು ಬೇರಿಲ್ಲ, ಮಹಾದೇವನ ಅರುಹು ನೋಡಾ, ಸಂಕಲ್ಪ ವಿಕಲ್ಪಗಳ ಧರಿಸಿದಲ್ಲಿ ಮನವೆನಿಸೀತು’.
ತಿಳಿದವರು ಕಥೆಯಿಲ್ಲದ ಮನೆಯೆಲ್ಲಿದೆ? ವ್ಯಥೆಯಿಲ್ಲದ ಮನವೆಲ್ಲಿದೆ? ಅಂದರೆ, ಮಾನಸಿಕ ಸಮತೋಲನವೇ ಪ್ರಬುದ್ಧತೆ ಎಂದು ಹಿರಿಯರು ಹೇಳಿದ್ದಾರೆ. ಇದನ್ನೇ ಸಂಸ್ಕೃತದಲ್ಲಿ ‘ಜಿತೇ ಮನಸಿ ಸರ್ವಮ್’ ಅಂದರೆ ಮನಸ್ಸನ್ನು ಗೆದ್ದರೆ ಪ್ರಪಂಚವನ್ನು ಗೆದ್ದಂತೆಯೇ ಎಂದು ಹೇಳಲಾಗಿದೆ.
ನೈತಿಕ ಬೆಳವಣಿಗೆ:
ನೀತಿ ಸಮಾಜದ ಸಂಸ್ಕೃತಿಯ ನಿಯಮ. ನೀತಿಸಾರದ ಬಗ್ಗೆ ಸಾಕಷ್ಟು ಗ್ರಂಥಗಳು ರಚನೆಯಾಗಿವೆ. ಮಾನವ ಮನಸ್ಸಿಗೆ ಸರಿ ತಪ್ಪುಗಳನ್ನು ತೋರಿಸುವ ಪ್ರಮುಖ ಕೆಲಸ ಮಾಡುವುದೇ ನೀತಿ. ನೀತಿಯ ಬಗೆಗೆ ಪ್ರಪಂಚವೇ ಮಾತಾಡುತ್ತಿರುತ್ತದೆ ಆದರೆ ಪಾಲನೆಯಲ್ಲಿ ಹಿಂದು ಮುಂದಾಗಿರುತ್ತದೆ. ನೀತಿ ಸದಾ ಸಮುದಾತದ ಸಮಾಜದ ಅಭ್ಯುದಯವನ್ನು ಬಯಸುತ್ತದೆ. ಹಿಂದೂ ಪರಂಪರೆಯಲ್ಲಿ ಎಲ್ಲ ವೇದಗಳು, ಉಪನಿಷತ್ತುಗಳು, ಪುರಾಣಗಳು ನೀತಿಯನ್ನು ಒತ್ತಿ ಹೇಳುತ್ತವೆ. ಅತ್ಯಂತ ಪ್ರಚಲಿತವಿರುವ ಗೋವಿನ ಹಾಡಿನಲ್ಲಿ ನೀತಿಯ ಎಳೆಗಳನ್ನು ಗುರುತಿಸಬಹುದು. ಸತ್ಯವೇ ನಮ ತಾಯಿ ತಂದೆ ಸತ್ಯವೇ ನಮ ಬಂಧು ಬಳಗ ಸತ್ಯ ವಾಕ್ಯಕೆ ತಪ್ಪಿ ನದೆದರೆ ಮೆಚ್ಚನಾ ಪರಮಾತ್ಮನು ಎಂದು.
ನೀತಿಯನ್ನು ಗುರುತಿಸುವ ಅಂಶಗಳು
ನಿಷ್ಪಕ್ಷಪಾತತೆ, ಕ್ಷಮೆ, ನಮ್ರತೆ, ಸ್ವನಿಯಂತ್ರಣ, ಸಹಿಷ್ಣುತೆ, ಒಳ್ಳೆಯತನ, ಅಂಟಿಕೊಳ್ಳದಿರುವುದು, ಧ್ಯಾನ, ಘನತೆ, ಸ್ಥೈರ್ಯ, ಸಹಾನುಭೂತಿ, ವಿಧೇಯತೆ, ಇಂದ್ರಿಯ ನಿಗ್ರಹಗಳು ಮನುಷ್ಯನ ನೀತಿಯನ್ನು ಗುರುತಿಸುತ್ತವೆ. ಸಂಸ್ಕೃತ ಸುಭಾಷಿತದಲ್ಲಿ ‘ಪರೋಪಕಾರಾರ್ಥೇ ಫಲಂತಿ ವೃಕ್ಷಃ ಪರೋಪಕಾರಾರ್ಥೇ ದುಹಂತಿ ಗಾವಃ ಪರೋಪಕಾರಾರ್ಥೇ ವಹಂತಿ ನದಯಾ ಪರೋಪಕಾರಾರ್ಥಮಿದಂ ಶರೀರಮ್’ ಎಂದು ಹೇಳಲಾಗಿದೆ. ಅಂದರೆ ಪರರಿಗಾಗಿಯೇ ಮರಗಳು ಹಣ್ಣನ್ನು ಕೊಡುತ್ತವೆ, ಪರರಿಗಾಗಿಯೇ ಹಸುಗಳು ಹಾಲನ್ನು ಕೊಡುತ್ತವೆ, ಪರರಿಗಾಗಿಯೇ ನದಿಗಳು ಹರಿಯುತ್ತವೆ, ಇಡೀ ಪ್ರಕೃತಿಯೆ ಪರರ ಸೇವೆಯಲ್ಲಿ ತೊಡಗಿರುವಾಗ ಮಾನವರಾಗಿ ಬೇರೆಯವರ ಒಳಿತಿಗಾಗಿ ಬದುಕನ್ನು ಸವೆಸಬೇಡವೇ ಎಂದು. ಇದನ್ನೇ ನಮ್ಮ ಹಿರಿಯರು ‘ತಿರ್ಕಂಡ್ ತಿಂದ್ರೂ, ಕರ್ಕೋಂಡ್ ಉಣ್ಬೇಕಂತೆ’ ಎಂದು ಹೇಳಿದ್ದಾರೆ.
ಆಧ್ಯಾತ್ಮಿಕ ಬೆಳವಣಿಗೆ:
ಮಾನವ ಜೀವನದಲ್ಲಿ ಅತಿ ಶ್ರೇಷ್ಟವಾದ ಕೆಲಸ ಅಥವಾ ಕರ್ಮವೆಂದರೆ ಆತ್ಮಚಿಂತನೆ. ಮಾನವ ಭಗವಂತನೊಡನೆ ನಡೆಸುವ ಸಂವಾದವೇ ಆಧ್ಯಾತ್ಮ. ಆತ್ಮ ಮತ್ತು ಪರಮಾತ್ಮರ ನಡುವಿನ ಸಂಬಂಧ ವ್ಯತ್ಯಾಸ, ಹಾಗೂ ಪರಿಕಲ್ಪನೆ, ಮುಕ್ತಿ ಅಥವಾ ಪರಿನಿರ್ವಾಣ, ದ್ವೆöÊತ ಅದ್ವೈತಗಳ ಪರಿಕಲ್ಪನೆ. ಹೀಗೆ ಜೀವನ ಪರ್ಯಂತ ಆತ್ಮಾನುಭವದ ಹುಡುಕಾಟವೇ ಆಧ್ಯಾತ್ಮ. ತತ್ವಜ್ಞಾನವು ಆಧ್ಯಾತ್ಮದ ಅಡಿಗಲ್ಲಾಗಿದೆ. ಪಾಪ ಮತ್ತು ಪುಣ್ಯಗಳನ್ನು ಇಲ್ಲಿ ಅನುಭವಿಸಿ ಮುಕ್ತಿಗಾಗಿ ಹುಡುಕಾಡುತ್ತೇವೆ. ನಾನು ನನ್ನದೆಂಬ ಅಹಂಕಾರದಿAದ ಹೊರಬರಲು ಪ್ರಯತ್ನಿಸುತ್ತೇವೆ. ಜನನ ಮರಣ ಚಕ್ರದಿಂದ ಬಿಡುಗಡೆ ಹೊದಲು ತವಕಿಸುತ್ತೇವೆ. ಇದನ್ನೇ ಶಂಕರಾಚಾರ್ಯರು ‘ಪುನರಪಿ ಜನನಂ, ಪುನರಪಿ ಮರಣಮ್, ಪುನರಪಿ ಜನನೇ ಜಠರೇ ಶಯನಮ್’ ಎಂದು ಸಂಸ್ಕೃತದಲ್ಲಿ ಹೇಳಿದ್ದಾರೆ
‘ಸತ್ಸಂಗತ್ವೇ ನಿಸ್ಸಂಗತ್ವಮ್, ನಿಸ್ಸಂಗತ್ವೇ ನಿರ್ಮೋಹತ್ವಮ್, ನಿರ್ಮೋಹತ್ವೇ ನಿಶ್ಚಲ ತತ್ವಮ್, ನಿಶಚಲ ತತ್ವೇ ಜೀವನ್ಮುಕ್ತಿಃ’ ‘ಅವಶ್ಯಂ ಅನುಭೋಕ್ತವ್ಯಂ, ಕೃತಕರ್ಮ ಶುಭಾಶುಭಂ’ ಅಂದರೆ ಜೀವನದಲ್ಲಿ ನಾವು ಮಾಡಿದ ಒಳಿತು ಕೆಡಕುಗಳನ್ನು ನಾವು ಇಲ್ಲಿಯೇ ಅನುಭವಿಸಿ ತೀರಬೇಕು. ಮೋಕ್ಷ ಎಂಬ ಮಾತು ಜೀವನದ ನಾಲ್ಕು ಹಂತಗಳ ಕೊನೆಯಲ್ಲಿ ಬರುತ್ತದೆ. ಜನ್ಮದಾರಭ್ಯ ಮರಣಾಂತ್ಯದವರೆಗೆ ಮೋಕ್ಷದ ಹುಡುಕಾಟ ಸಾಗಿದರೂ ಮೋಕ್ಷವಾಗದಿರಬಹುದು. ಉತ್ತಮ ಮನುಷ್ಯತ್ವ ಮುಮುಕ್ಷತ್ವದ ಕಡೆಗೆ ಕೊಂಡೊಯ್ಯುತ್ತದೆ. ಇದಕ್ಕೆ ಅತ್ಯಗತ್ಯವಾದದ್ದು ಭಕ್ತಿ. ಇದನ್ನೇ ಸಂಸ್ಕೃತದಲ್ಲಿ ಮೋಕ್ಷಕಾರಣ ಸಾಮಗ್ರ‍್ಯಾಂ ಭಕ್ತಿರೇವ ಗರೀಯಸಿ’ ಅಂದರೆ ಮೋಕ್ಷಕ್ಕೆ ಕಾರಣವಾಗುವ ಸಾಮಗ್ರಿಗಳಲ್ಲಿ ಭಕ್ತಿಯೇ ಶ್ರೇಷ್ಠವಾದುದು ಎನ್ನಲಾಗಿದೆ.
ಇಂಥ ಶ್ರೇಷ್ಠವಾದ ಭಕ್ತಿಯ ಕುರಿತು ಸರ್ವಜ್ಞನು ಭಕ್ತಿಯಿಂದಲೆ ಶಕ್ತಿ, ಭಕ್ತಿಯಿಂದಲೆ ಮುಕ್ತಿ, ಭಕ್ತಿವಿರಕ್ತಿ ಅಳಿದರೀ ಜಗದಲ್ಲಿ, ಮುಕ್ತಿಯಿಲ್ಲರಂದ ಸರ್ವಜ್ಞ. ಭಕ್ತ ಭಗವಂತರ ನಡುವಿನ ದ್ವಂದ್ವದ ಸನ್ನಿವೇಶವನ್ನು ಡಿ.ವಿ.ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ವರ್ಣಿಸಿದ್ದಾರೆ ದೇವರೆಂಬುದೇನು ಕಗ್ಗತ್ತಲೆಯ ಗವಿಯೇ? ನಾವರಿಯಲಾರದೆಲ್ಲದರ ಒಟ್ಟು ಹೆಸರೇ? ಕಾವನೋವನಿರಲ್ಕೆ ಜಗದ ಕತೆಯೇಕಿಂತು, ಸಾವು ಹುಟ್ಟುಗಳೇನು? ಮಂಕುತಿಮ್ಮ. ಅಂದರೆ ನರ ನಾರಾಯಣನಾಗಲು ಮೇಲೆ ಹೇಳಿರುವ ಆರೂ ಅಂಶಗಳನ್ನು ಮನನ ಮಾಡಿಕೊಂಡು ಮಾನವ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದು ಎಂದು.
ಇದನ್ನು ಸಂಸ್ಕೃತದಲ್ಲಿ ‘ಯೇಷಾಂ ನ ವಿದ್ಯಾ ನ ತಪೋ ನ ದಾನಮ್, ನ ಜ್ಞಾನಂ ನ ಶೀಲಂ ನ ಗುಣೋ ನ ಧರ್ಮಃ, ತೇ ಮರ್ತ್ಯ ಲೋಕೇ ಭುವಿ ಭಾರ ಭೂತಾಃ, ಮನುಷ್ಯರೂಪೇಣ ಮೃಗಾಶ್ಚರಂತಿ’ ಎಂದು ಹೇಳಲಾಗಿದೆ. ಅಂದರೆ ಯಾರಲ್ಲಿ ವಿದ್ಯೆ ಇಲ್ಲವೋ, ಯಾರಲ್ಲಿ ದಾನವಿಲ್ಲವೋ, ಯಾರಲ್ಲಿ ಜ್ಞಾನವಿಲ್ಲವೋ, ಯಾರಲ್ಲಿ ಶೀಲವಿಲ್ಲವೋ, ಗುಣವಿಲ್ಲವೋ, ಧರ್ಮವಿಲ್ಲವೋ, ಅಂಥವರು ಈ ಭೂಮಿಗೆ ಭಾರವಾದ ಜೀವನವನ್ನು ನಡೆಸುತ್ತಾರೆ. ಹಾಗೆಯೇ ಮಾನವ ರೂಪದಲ್ಲಿದ್ದರೂ ಮೃಗಗಳಂತೆ ಬದುಕಿ ವ್ಯರ್ಥ ಜೀವನ ನಡೆಸುತ್ತಿರುತ್ತಾರೆ.


