ಉದಯರಶ್ಮಿ ದಿನಪತ್ರಿಕೆ
ಇಂಡಿ: ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಕನ್ನಡ ಪ್ರಭಾ ದಿನ ಪತ್ರಿಕೆ ಇಂಡಿ ತಾಲೂಕು ವರದಿಗಾರು ಹಾಗೂ ಪೂರ್ವಿ ಉದಯ ದಿನ ಪತ್ರಿಕೆ ಸಂಪಾದಕ ಖಾಜು ಸಿಂಗೆಗೋಳ ಹಾಗೂ ಹಿರೇಬೇವನೂರ ಗ್ರಾಮದ ಶಿಕ್ಷಕ, ಆರ್.ಬಿ.ಪಾಟೀಲ ಅವರನ್ನು ತಾಲೂಕು ಪತ್ರಕರ್ತರ ಬಳಗದಿಂದ ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎ.ಸಿ.ಪಾಟೀಲ ಮಾತನಾಡಿ, ಕರ್ನಾಟಕವು ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಸಮಾಜ ಸೇವೆ, ಶಿಕ್ಷಣ ಮತ್ತು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದ ದಕ್ಷ ಪ್ರಾಮಾಣಿಕ ಪತ್ರಕರ್ತ ಖಾಜು ಸಿಂಗೆಗೋಳ ಅವರಿಗೆ ಈ ಬಾರಿ ಕರ್ನಾಟಕ ರಾಜ್ಯ ಉತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ ಎಂದರು.
ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾದ ಉಮೇಶ್ ಕೊಳೇಕರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಾದ ಪತ್ರಕರ್ತ ಖಾಜು ಸಿಂಗೆಗೋಳ, ಆರ್.ವಿ.ಪಾಟೀಲ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ತುಂಬಾ ಸಂತೋಷವಾಗಿದೆ ಎಂದರು.
ಸಂದರ್ಭದಲ್ಲಿ ಪತ್ರಕರ್ತರಾದ ಉಮೇಶ ಬಳಬಟ್ಟಿ, ಯಲಗೊಂಡ ಬೇವನೂರ, ಶಂಕರ ಜಮದಾರ, ಸಚೀನ ಇಂಡಿ, ತುಕಾರಾಮ ಪವಾರ, ಅರವಿಂದ್ ಕಾಂಬಳೆ, ಅಲ್ಲಾಬಕ್ಷ ಗೋರೆ, ಕಾಶಿನಾಥ ಕ್ಷೇತ್ರಿ, ಫಯಾಜ್ ಬಾಗವಾನ, ಮಲ್ಲಿಕಾರ್ಜುನ ಹಾವಿನಾಳಮಠ, ಮಹೇಶ್ ಶಿವಶರಣ, ರಾಮು ಯಂಕಚ್ಚಿ, ಸಿದ್ದು ಕೋಷ್ಠಿ ಸೇರಿದಂತೆ ಅನೇಕರು ಇದ್ದರು.

