ಉದಯರಶ್ಮಿ ದಿನಪತ್ರಿಕೆ
ಅಕ್ಕಲಕೋಟ: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ಲಕ್ಮೀಪುತ್ರ ಕಿರನಳ್ಳಿ ಗೆ ಜಿಲ್ಲಾ ಪರಿಷದ ಕನ್ನಡ ಪ್ರಾಥಮಿಕ ಶಾಲೆಯ ವತಿಯಿಂದ ಸನ್ಮಾನ ಮಾಡಲಾಯಿತು
ಜೇವೂರ ಗ್ರಾಮದ ಶಿಕ್ಷಕ ಹಾಗೂ ಜಿಲ್ಲಾ ಪರಿಷದ ಕನ್ನಡ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಲಕ್ಷ್ಮೀಪುತ್ರ ಕಿರನಳ್ಳಿ ರವರಿಗೆ ಇತ್ತೀಚೆಗೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಬೆಂಗಳೂರು ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವ ಪ್ರಯುಕ್ತ ಶಾಲೆಯ ವತಿಯಿಂದ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು.
ಸನ್ಮಾನ ಮಾಡಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ರಾಜಶೇಖರ ಪಾಟೀಲ, ಲಕ್ಷ್ಮೀಪುತ್ರ ಕಿರನಳ್ಳಿ ರವರು ಅತ್ಯಂತ ಬಡತನದಲ್ಲಿ ಶಿಕ್ಷಣ ಪಡೆದು ಇಂದು ಕರ್ನಾಟಕದಲ್ಲಿ ಉತ್ತಮ ಆದರ್ಶ ಶಿಕ್ಷಕರಾಗಿ ಕಾರ್ಯ ಮಾಡುತ್ತಿದ್ದಾರೆ. ಮುಖ್ಯೋಪಾಧ್ಯಾಯರಾಗಿ ಶಾಲೆಯನ್ನು ಮಾದರಿ ಶಾಲೆಯಾಗಿ ಅಭಿವೃದ್ಧಿ ಮಾಡಿದ್ದಾರೆ. ಇವರು ಶಿಕ್ಷಣದ ಜೊತೆಗೆ ಸಾಮಾಜಿಕ ರಂಗದಲ್ಲೂ ವಿವಿಧ ಧಾರ್ಮಿಕ ,ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇವರ ಕಾರ್ಯ ಸ್ಮರಿಸಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ಇಂತಹ ಆದರ್ಶ ಶಿಕ್ಷಕರು ನಮ್ಮ ಶಾಲೆಯ ವಿದ್ಯಾರ್ಥಿಯಾಗಿದ್ದು ನಮ್ಮೂರಿಗೆ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ಈ ವೇಳೆ ಮುಖ್ಯೋಪಾಧ್ಯಾಯ ರಾಜಶೇಖರ ಕಾ. ಪಾಟೀಲ ಶಿಕ್ಷಕರಾದ
ಮಹೇಶ ಮ್ಹೇತ್ರಿ,ಗಡ್ಡೆಪ್ಪ ಪತ್ರಿಗೀಡ ,
ವಿದ್ಯಾಧರ ಶಿವಶರಣ,ಸಂಗಯ್ಯ ವಸ್ತ್ರದ,ಕಾಶೀನಾಥ ಕೋಳಿ,
ಸೋಮಣ್ಣಾ ಕುಂಭಾರ, ಜ್ಯೋತಿ ಚನಶೆಟ್ಟಿ , ಜಯಶ್ರೀ ಖಸ್ಕಿ,ಅರ್ಚನಾ ಅಡಕೆ, ಗಂಗೂಬಾಯಿ ಬಿರಾದಾರ, ಶಾಲೂಬಾಯಿ ಕೋರೆ,ಗುರುಸಿದ್ದ ಸಾವಳೆ, ಸಿಧ್ಧಾರಾಮ ಕೋನಳ್ಳಿ, ಶ್ರೀಶೈಲ ಚಪ್ಪಳಗಾಂವ, ಜ್ಯೋತಿ ವಘ್ಘಾಲೆ ಮುಂತಾದವರು ಉಪಸ್ಥಿತರಿದ್ದರು.

