ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಶಿಕ್ಷಣ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕನ್ನೂರಿನ ಗುರುಶಾಂತ ಕಾಗವಾಡ ಅವರು ಸ್ವಯಂ ನಿವೃತ್ತಿ ಪಡೆದಿದ್ದರಿಂದ ಇಲಾಖೆ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ವಿ ಹೊಸೂರ ಮತ್ತು ಸಿಬ್ಬಂದಿ ಗುರುಶಾಂತ ಕಾಗವಾಡ ಅವರನ್ನು ಸನ್ಮಾನಿಸಿ ಅವರ ಕಾರ್ಯದಕ್ಷತೆ ಮತ್ತು ಸೇವಾ ಮನೋಭಾವ ಕುರಿತು ಶ್ಲಾಘಿಸಿದರು.
ಕಚೇರಿಯ ಸಿಬ್ಬಂದಿ ಮತ್ತು ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

