ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜೋತ್ಸವ ಅಂಗವಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ವಿಜಯಪುರ ಜಿಲ್ಲಾ ಸಮಿತಿಯು “ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಮಹನೀಯರು” ಈ ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ವಯಸ್ಸಿನ ಮಿತಿಯಿಲ್ಲ , ಪ್ರಬಂಧ ಕಳಸಬಯಸುವರು ೨೦೦ ಪದಗಳ ಮಿತಿಯಲ್ಲ , ಮೊಬೈಲ್ ನಲ್ಲಿ ಟೈಪ್ ಮಾಡಿ ಈ ಸಂಖ್ಯೆಗೆ 81054 73275 (ಸುಕಾಂತ ಕುಲಕರ್ಣಿ) ವಾಟ್ಸಪ್ ಮೂಲಕ ಕಳಿಸಲು ಕೋರಲಾಗಿದೆ.
ಸ್ಪರ್ದೆಯಲ್ಲಿ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಪ್ರಥಮ, ದ್ವಿತೀಯ, ತೃತೀಯ ಮತ್ತು ೧೦ ಜನರಿಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು ವಾಟ್ಸಪ್ ಮೂಲಕ ಪ್ರದಾನ ಮಾಡಲಾಗುವುದು, ಮತ್ತು ಸ್ಪರ್ಧೆಗೆ ಕಳಿಸಲು ಕೊನೆಯ ದಿನಾಂಕ ನವೆಂಬರ್ ೧೦ ಆಗಿರುತ್ತದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾಧ್ಯಕ್ಷರಾದ ವಿವೇಕ ಕುಲಕರ್ಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿ 81054 73275.
