ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ತಾಲೂಕಿನ ಮಿಣಜಗಿ ಗ್ರಾಮದ ಶ್ರೀ ಗುರುಪಾದೇಶ್ವರರ ೫೮ನೇ ಪುಣ್ಯಸ್ಮರಣೆ ಹಾಗೂ ಮಹಾ ರಥೋತ್ಸವ ಅಂಗವಾಗಿ ಶ್ರೀಮಠದಿಂದ ಕೊಡಮಾಡಲಾಗುವ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಎಂಟು ಜನರು ಭಾಜನರಾಗಿದ್ದಾರೆ.
ಬೆಂಗಳೂರಿನ ಚಲನಚಿತ್ರ ನಟ ಅನಿರುದ್ದ ಜತಕರ, ತಾಳಿಕೋಟೆಯ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ. ವಿರೇಶಗೌಡ ಪಾಟೀಲ(ಮಿಣಜಗಿ), ಮಾಣಿಕಚಂದ ದಂಡಾವತಿ(ಮುದ್ದೇಬಿಹಾಳ), ನಾಗರಬೆಟ್ಟ ಎಕ್ಸ್ಪರ್ಟ್ ಸೈನ್ಸ್ ಕಾಲೇಜಿನ ಅಧ್ಯಕ್ಷ ಬಿ.ಜಿ.ಮಠ, ಅರ್ಬನ್ ಬ್ಯಾಂಕ್ ನಿರ್ದೇಶಕ ಡಿ.ಕೆ.ಪಾಟೀಲ, ಆರೋಗ್ಯ ಇಲಾಖೆಯ ವಿರೇಶ ದಿಂಡವಾರ, ಮುದ್ದೇಬಿಹಾಳ ಪುರಸಭೆ ಮಾಜಿ ಸದಸ್ಯ ಬಸಯ್ಯ ನಂದಿಕೇಶ್ವರಮಠ, ಅವರು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಸಮಾಜ ಸೇವೆ, ಪತ್ರಿಕೋದ್ಯಮ, ಕಲೆ, ಶಿಕ್ಷಣ, ಸಹಕಾರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದಿ. ೭ ರಂದು ಬೆಳಿಗ್ಗೆ ೧೧ ಗಂಟೆಗೆ ಮಿಣಜಗಿ ಗ್ರಾಮದ ಶ್ರೀ ಗುರುಪಾದೇಶ್ವರರ ೫೮ನೇ ಪುಣ್ಯಸ್ಮರಣೆ ಹಾಗೂ ಮಹಾ ರಥೋತ್ಸವ ಅಂಗವಾಗಿ ಶ್ರೀಮಠದಲ್ಲಿ ನಡೆಯಲಿರುವ ಧರ್ಮ ಸಭೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಶ್ರೀಮಠದ ವೇ.ಸೋಮಶೇಖರಯ್ಯ ಹಿರೇಮಠ ಅವರು ತಿಳಿಸಿದ್ದಾರೆ.

