ನೂತನವಾಗಿ ಆಯ್ಕೆಯಾದ ಈದ್ಗಾ ಕಮೀಟಿ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ನೀವು ಸಮಾಜಕ್ಕೆ ಒಳಿತು ಮಾಡಿದರೆ ದೇವರು ನಿಮ್ಮನ್ನು ಮೆಚ್ಚುತಾನೆ ಆದ್ದರಿಂದ ದೇವರಲ್ಲಿ ನಂಬಿಕೆಯಿರಿಸಿ ಸಮಾಜಮುಖಿ ಕಾರ್ಯಗಳಲ್ಲಿ ಯುವಜನತೆ ಮುನ್ನಡೆಯಬೇಕು ಎಂದು ನಿವೃತ್ತ ಶಿಕ್ಷಕ ಖಾಜಾಅಮೀನ ವಲ್ಲಿಭಾಯಿ ಹೇಳಿದರು.
ಗ್ರಾಮದಲ್ಲಿ ನೂತನವಾಗಿ ಆಯ್ಕೆಯಾದ ಈದ್ಗಾ ಕಮೀಟಿ ಸದಸ್ಯರುಗಳಿಗೆ ಸಮಸ್ತ ಮುಸ್ಲಿಂ ಸಮುದಾಯದ ಹಿರಿಯರಿಂದ ಮಮತಾಜ ಮಜೀದ್‌ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲಾವಾರು ವರ್ಷಗಳಿಂದ ನಡೆಯುತ್ತಿರುವ “ಅಲ್ ನಸರ್ ಬೈತುಲ್ ಮಾಲ್” ಜತೆಗೂಡಿ ನೂತನ ಈದ್ಗಾ ಕಮೀಟಿ ಸದಸ್ಯರು ಕೆಲಸ ಮಾಡಿರಿ, ನಾವು ನಿಮಗೆ ಯಾವಾಗಲೂ ಮಾರ್ಗದರ್ಶನ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಜಹಾಂಗೀರಬಾಷಾ ಸಿರಸಗಿ ಅವರು, ಸಮಾಜದ ಏಳಿಗೆಗೆ ಯುವಶಕ್ತಿಯ ಅವಶ್ಯಕತೆಯಿದ್ದು, ಯುವಕರು ಹಳೆಯ ಬೇರು ಹೊಸ ಚಿಗರು, ಎಂಬಂತೆ ಹಿರಿಯರ ಮಾರ್ಗದರ್ಶನದಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕಿದೆ ಎಂದರು,
ನೂತನವಾಗಿ ಈದ್ಗಾ ಕಮೀಟಿಯ ಅಧ್ಯಕ್ಷರಾದ ವಜೀರ ನಾಗಾವಿ, ಉಪಾಧ್ಯಕ್ಷರಾದ ಇಮ್ಮತೀಯಾಜ ಹೋರಪೇಟಿ, ಪ್ರಧಾನ ಕಾರ್ಯದರ್ಶಿ ಮೇಹಬೂಬ ಮೇಲಿನಮನಿ (ನಾಯ್ಕೋಡಿ), ಸಧ್ಯಸರುಗಳಾದ ಲಾಳೇಮಶಾಕ ನಾಯ್ಕೋಡಿ, ಸಮೀರ ಹೊಸಮನಿ, ಯೂನೂಸ್ (ಬಬಲು) ನಾಯ್ಕೋಡಿ, ಮಶಾಕಸಾಬ ವಲ್ಲಿಭಾಯಿ, ಸಮೀರ್ ಹೊಸಮನಿ, ದಾವಲ ನಾಯ್ಕೋಡಿ, ಸಲ್ಮಾನ್ ಖಾನ್ ಕುದರಗೋಂಡ, ಸಲೀಮ ಬಡೆಮ್ಮಗೋಳ, ಶಫೀಕ ಮನಿಯಾರ ಅವರನ್ನು ಹಿರಿಯ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಹಿರಿಯರಾದ ಅಂಜುಮನ್ ಅಧ್ಯಕ್ಷರಾದ ಹುಸೇನಬಾಷಾ ದೋಡಮನಿ, ಖಾಜಾಮೀನ ವಲ್ಲಿಭಾಯಿ, ಜಹಾಂಗೀರಬಾಷಾ ಸಿರಸಗಿ, ಅಲ್ಲಾಬಕ್ಷ ನಾಯ್ಕೋಡಿ, ಮಹ್ಮದ ಉಸ್ತಾದ, ಮೇಹಮೂದ ಕೆಂಬಾವಿ, ನಬಿಲಾಲ ನಾಯ್ಕೋಡಿ, ಹುಸೇನ್ ನಾಯ್ಕೋಡಿ, ದಾವಲಸಾಬ ನಾಯ್ಕೋಡಿ, ಡಾ.ಹಸನ್ ನಾಗಾವಿ, ನಬಿಲಾಲ, ಶಾ, ನಾಯ್ಕೋಡಿ, ಇಸಾಕ ಪೀರಾಪೂರ, ರಜಾಕ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.

