Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸ್ವಾಭಿಮಾನ-ಶೌರ್ಯದ ಸಂಕೇತ ರಾಣಿ ಚೆನ್ನಮ್ಮ

ಜೆಡಿಎಸ್ ಮಹಿಳಾ ಘಟಕದಅಧ್ಯಕ್ಷೆಯಾಗಿ ಅಪ್ಪರಾ ಬೇಗಂ ನೇಮಕ

ಜಾಲಗೇರಿಯ ಇಬ್ಬರು ಶಿಕ್ಷಕಿಯರಿಗೆ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮೂರು ಪ್ರಮುಖ ಬೇಡಿಕೆಗಳಿಗೆ ರೈತರ ಬಿಗಿ ಪಟ್ಟು
(ರಾಜ್ಯ ) ಜಿಲ್ಲೆ

ಮೂರು ಪ್ರಮುಖ ಬೇಡಿಕೆಗಳಿಗೆ ರೈತರ ಬಿಗಿ ಪಟ್ಟು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಬ್ಬು ಬೆಂಬಲ ಬೆಲೆಗೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ | ಸಿಎಂ ಸಭೆಗೂ ಮುನ್ನ ಬೇಡಿಕೆ ಈಡೇರಿಕೆಗೆ ಆಗ್ರಹ | ನ್ಯಾಯ ಸಿಗದಿದ್ದರೆ ಅ.27ಕ್ಕೆ ಕರ್ನಾಟಕ ಬಂದ್ ಎಚ್ಚರಿಕೆ!

ಬೆಳಗಾವಿ: ಕಬ್ಬು ಬೆಂಬಲ ಬೆಲೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಉತ್ತರ ಕರ್ನಾಟಕದ ರೈತರು ಈಗ ರಾಜ್ಯ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದಾರೆ.
ಅಕ್ಟೋಬರ್ 26 ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಗೂ ಮುನ್ನ ರೈತ ಸಂಘಟನೆಗಳು ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಇವುಗಳು ಈಡೇರದಿದ್ದರೆ ಅಕ್ಟೋಬರ್ 27 ರಂದು ರಾಜ್ಯಾದ್ಯಂತ ಬಂದ್ ಆಚರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರೈತ ಸಂಘ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಪ್ರೇಮ್ ಚೌಗಲಾ ಅವರು, ಮುಖ್ಯಮಂತ್ರಿ ಅವರೊಂದಿಗಿನ ಸಭೆಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆಯಿದೆ. ಸಭೆಯಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ ರೂ.1,000 ಬೆಂಬಲ ಬೆಲೆ ನೀಡಬೇಕು, ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ರೂ.4,500 ಪಾವತಿಸಬೇಕು ಹಾಗೂ ಕಬ್ಬಿನ ತೂಕ ಮಾಡುವಾಗ ಕಸ ಅಥವಾ ಕೆಸರು ಇದೆ ಎಂಬ ಕಾರಣ ನೀಡಿ ಹಣ ಕಡಿತಗೊಳಿಸುವ ಅಕ್ರಮ ಪದ್ಧತಿಯನ್ನು ತಡೆಯಬೇಕು ಎಂಬುದು ರೈತರ ಪ್ರಮುಖ ಬೇಡಿಕೆಗಳಾಗಿವೆ ಎಂದು ತಿಳಿಸಿದರು.
ಇದೇ ವೇಳೆ ಈ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಅಕ್ಟೋಬರ್ 27ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮೊದಲು ಅಕ್ಟೋಬರ್ 17ರಂದು ರಾಜ್ಯದ ಕಬ್ಬು ಬೆಳೆಯುವ ಜಿಲ್ಲೆಗಳ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಇದಲ್ಲದೆ, ಕರ್ನಾಟಕಕ್ಕೆ ತೈಲ ಮಾರುಕಟ್ಟೆ ಕಂಪನಿಗಳಿಂದ ಶೇ.100ರಷ್ಟು ಎಥನಾಲ್ ಹಂಚಿಕೆ ಮಾಡಬೇಕು ಎಂಬುದು ಮತ್ತೊಂದು ಬೇಡಿಕೆಯಾಗಿದೆ.
ಕಳೆದ ವರ್ಷ ರಾಜ್ಯಕ್ಕೆ ಶೇ.30ರಿಂದ 40ರಷ್ಟು ಮಾತ್ರ ಹಂಚಿಕೆ ಮಾಡಲಾಗಿತ್ತು. ಇದರಿಂದ ಹಲವು ಎಥನಾಲ್ ಮತ್ತು ಸಕ್ಕರೆ ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದೆ, ಹಣದ ಹರಿವಿನ ಸಮಸ್ಯೆ ಎದುರಿಸಿದ್ದವು. ಪರಿಣಾಮವಾಗಿ ರೈತರಿಗೆ ಹಣ ಪಾವತಿಸುವುದರ ಮೇಲೂ ಪರಿಣಾಮ ಬೀರಿತ್ತು. ಈ ಬೇಡಿಕೆ ಈಡೇರಿದರೆ ಮೆಕ್ಕೆಜೋಳ ಬೆಳೆಗಾರರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ದೇಶೀಯ ಬಳಕೆಯ ಸಕ್ಕರೆ ಮತ್ತು ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ ಬೆಲೆ ನಿಗದಿಪಡಿಸಬೇಕು ಹಾಗೂ ವಾಣಿಜ್ಯ ಸಕ್ಕರೆಗೆ ಹೆಚ್ಚಿನ ಬೆಲೆ ನೀಡಬೇಕು ಎಂಬುದು ರೈತರ ಮೂರನೇ ಬೇಡಿಕೆಯಾಗಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳು ಮತ್ತು ರೈತರಿಗೆ ಉತ್ತಮ ಆದಾಯ ದೊರೆಯಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಇದೇ ವೇಳೆ ರೈತರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಜಿಲ್ಲಾಧಿಕಾರಿ, ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳ ಕಚೇರಿಗಳನ್ನೂ ಸಂಪರ್ಕಿಸಲಾಗಿದೆ. ರೈತರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ಎರಡೂ ಸರ್ಕಾರಗಳು ನೀಡಿವೆ, ಪ್ರತಿಭಟನಾಕಾರರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

” ರೈತರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ಭರವಸೆ ನೀಡಿವೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ರೈತರು ಕಳೆದ ಮೂರು ದಿನಗಳಿಂದ ತಮ್ಮ ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕೆ.ಜಿ.ಗೆ ರೂ.60ಕ್ಕೆ ಹೆಚ್ಚಿಸಬೇಕು ಎಂಬುದು ರೈತರ ಮೊದಲ ಬೇಡಿಕೆಯಾಗಿದೆ. ಈ ವಿಷಯದಲ್ಲಿ ಸರ್ಕಾರದೊಂದಿಗೆ ಚರ್ಚೆ ನಡೆಸಲು ರೈತರು ಸಿದ್ಧರಿದ್ದಾರೆ.”

– ಮೊಹಮ್ಮದ್ ರೋಷನ್
ಬೆಳಗಾವಿ ಜಿಲ್ಲಾಧಿಕಾರಿ

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸ್ವಾಭಿಮಾನ-ಶೌರ್ಯದ ಸಂಕೇತ ರಾಣಿ ಚೆನ್ನಮ್ಮ

ಜೆಡಿಎಸ್ ಮಹಿಳಾ ಘಟಕದಅಧ್ಯಕ್ಷೆಯಾಗಿ ಅಪ್ಪರಾ ಬೇಗಂ ನೇಮಕ

ಜಾಲಗೇರಿಯ ಇಬ್ಬರು ಶಿಕ್ಷಕಿಯರಿಗೆ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ

ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸ್ವಾಭಿಮಾನ-ಶೌರ್ಯದ ಸಂಕೇತ ರಾಣಿ ಚೆನ್ನಮ್ಮ
    In (ರಾಜ್ಯ ) ಜಿಲ್ಲೆ
  • ಜೆಡಿಎಸ್ ಮಹಿಳಾ ಘಟಕದಅಧ್ಯಕ್ಷೆಯಾಗಿ ಅಪ್ಪರಾ ಬೇಗಂ ನೇಮಕ
    In (ರಾಜ್ಯ ) ಜಿಲ್ಲೆ
  • ಜಾಲಗೇರಿಯ ಇಬ್ಬರು ಶಿಕ್ಷಕಿಯರಿಗೆ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ
    In (ರಾಜ್ಯ ) ಜಿಲ್ಲೆ
  • ಕರವೇ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಧೈರ್ಯ & ಸ್ವಾಭಿಮಾನಕ್ಕೆ ಪ್ರತೀಕ ರಾಣಿ ಚನ್ನಮ್ಮ
    In (ರಾಜ್ಯ ) ಜಿಲ್ಲೆ
  • ಚೆನ್ನಮ್ಮರ ಶೌರ್ಯ ಮತ್ತು ತ್ಯಾಗ ಸದಾ ಸ್ಮರಣೀಯ :ಪ್ರಭುಶ್ರೀ
    In (ರಾಜ್ಯ ) ಜಿಲ್ಲೆ
  • ದಾಂಡಿಯಾ ನೃತ್ಯ ನಮ್ಮ ನಾಡಿನ ಸಂಸ್ಕೃತಿ ಗತವೈಭವದ ಪ್ರತೀಕ
    In (ರಾಜ್ಯ ) ಜಿಲ್ಲೆ
  • ವಚನ ಕಮ್ಮಟ ಪರೀಕ್ಷೆ: ಮಾದೇಶ ಸಾಧನೆಗೆ ಗೌರವ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆ ೩೭೧(ಜೆ) ಗೆ ಸೇರ್ಪಡೆಗೆ ವಿದ್ಯಾರ್ಥಿಗಳ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.