ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಇಲ್ಲಿ ನವರಾತ್ರಿ ಉತ್ಸವದ ಸಂಭ್ರಮ ಕಳೆಗಟ್ಟಿದೆ. ಶ್ವೇತ ವಸ್ತ್ರಧಾರಣಿಯ ಬ್ರಹ್ಮಚಾರಿಣಿ ರೂಪಾಂಗಣದ ಲಾವಣ್ಯದಲ್ಲಿ ಗುಮ್ಮಟ ನಗರಿಯ ಮಹಿಳಾ ಮಣಿಗಳು ನವರಾತ್ರಿಯ ಎರಡನೇ ದಿನ ಸೋಮವಾರ ಮಿನುಗಿ ಹಬ್ಬದ ಉತ್ಸವಕ್ಕೆ ಮೆರಗಿನ ಲೇಪನ ಸೃಜೀಸಿದ್ದಾರೆ.
ಇಲ್ಲಿನ ರಾಜಾಜಿ ನಗರದ ಅಪಾರ ಮಹಿಳಾ ಸಮೂಹ ಸೋಮವಾರ ನಸುಕಿನಲ್ಲಿಯೇ ಬಿಳಿ ಬಣ್ಣದ ಸೀರೆಯನ್ನುಟ್ಟು ಹಬ್ಬದ ಉತ್ಸಾಹದಲ್ಲಿ ತನ್ಮರಾಗಿ ಶ್ರದ್ಧೆಯಿಂದ ಭಕ್ತಿ ಭಾವ ಮೆರೆದಿದ್ದಾರೆ.ನಸುಕಿನ 3-30 ಗಂಟೆಯ ಮಧ್ಯರಾತ್ರಿಯಿಂದಲೇ ಪವಿತ್ರಭಾವದ ಶುಚಿಯಿಂದ ರಾಜಾಜಿ ನಗರದಲ್ಲಿ ನಾಡದೇವಿ ಮಂದಿರ ಉತ್ಸವ ಟ್ರಸ್ಟ್ ಕಮೀಟಿಯವರು ನವರಾತ್ರಿ ಉತ್ಸವದಂವಾಗಿ ಪ್ರತಿಷ್ಟಾಪಿಸಿರುವ ದೇವಿ ಮಂದಿರಕ್ಕೆ ತೆರಳಿ ಸಂಪ್ರದಾಯ ಬದ್ದವಾಗಿ ಆದಿಶಕ್ತಿಯನ್ನು ಪೂಜಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.
ನವರಾತ್ರಿಯ ಒಂಬತ್ತು ದಿನಗಳೂ ನವದುಗೆ೯ಗೆ ಪ್ರಿಯವಾದ ಬಣ್ಣದ ಸೀರೆಯನ್ನುಟ್ಟು ಭಕ್ತಿಲೋಕದ ಸಂಭ್ರಮ ಇಮ್ಮಡಿಯೊಂದಿಗೆ ಹಂಚಿಕೊಳ್ಳಲು ಇಲ್ಲಿನ ಮಹಿಳೆಯರು ಭಾವಮನ ತೋರಿದ್ದು ಶರನ್ನವರಾತ್ರಿಯ ಉಲ್ಲಾಸೋಮಯದ ಸಡಗರ ಗರಿಗೆದರಿದೆ. ನಾಡಹಬ್ಬ ನವರಾತ್ರಿ ಆಚರಣೆ ಜೊತೆಗೆ ಮನೆಮನಗಳಲ್ಲೂ ದುಗೆ೯ಯನ್ನು ಶ್ರದ್ಧೆ, ಭಕ್ತಿಪೂರಕ ಆಚರಿಸಿ ಹಬ್ಬಕ್ಕೆ ವಿಶೇಷ ಮೆರಗು ನೀಡುತ್ತಿದ್ದಾರೆ.
ನಸುಕಿನಲ್ಲೇ ಪೂಜಾ ಕೈಂಕರ್ಯದ ನಾದ ಕಳೆಗಟ್ಟುತ್ತಿದ್ದು ನವರಾತ್ರಿ ಹಬ್ಬದ ಸಾಂಸ್ಕೃತಿಕ ಮಹತ್ವ ಮತ್ತಷ್ಟು ವೈಭವ ಹೆಚ್ಚಿಸಿದೆ. ಆಸಕ್ತಿಯೊಂದಿಗೆ ನಾಡಿನ ಸಂಸ್ಕೃತಿ ಮತ್ತು ಪರಂಪರಗೆ ಒತ್ತು ನೀಡಿ ದುಗಾ೯ಮಾತೆಯನ್ನು ಪವಿತ್ರತೆಯಿಂದ ಆರಾಧಿಸಿ ಪೂಜಿಸಲಾಗುತ್ತಿದೆ. ಆ ಪ್ರಯುಕ್ತ ಹಬ್ಬದ ಘಮ ಪರಿಮಳಿಸಿ ವಿಜೃಂಭಣೆಯಿಂದ ಸಾಗುತ್ತಿದೆ.
ವೈವಿಧ್ಯಮಯ ಸಾಮರಸ್ಯ, ಸೌಹಾರ್ದತೆ, ಸಂಸ್ಕೃತಿ, ಪರಂಪರೆ ತೋರಣದ ಪರಿಚಯ ನವರಾತ್ರಿ ಮಹೋತ್ಸವದಲ್ಲಿ ಎದ್ದು ಕಾಣುತ್ತಿದೆ. ನಾರಿ ಲೋಕ ಅತ್ಯೋತ್ಸಾಹದಿಂದ ಪಾಲ್ಗೊಂಡು ದೇವಿಯ ದಿವ್ಯ ದರ್ಶನದೊಂದಿಗೆ ಆಶೀವಾ೯ದ ಪಡೆದು ಧನ್ಯತೆಯಲ್ಲಿ ಮಿಂದೆದ್ದಿದ್ದಾರೆ. ಬಣ್ಣದ ಸೀರೆಗಳನ್ನು ಧರಿಸಿಕೊಂಡು ಭವ್ಯತೆಯ ಪರಂಪರೆ ಸಾಕ್ಷೀಕರಿಸುತಾ ಶಾಂತ ಚಿತ್ತದಿಂದ ಭಕ್ತಿ ತರ್ಪಣದಲ್ಲಿ ಲೀನರಾಗಿ ಶುಭ್ರತೆಯ ಪ್ರತಿಬಿಂಬರಾಗಿ ಗೋಚರಿಸುತ್ತಿರುವುದು ಹಬ್ಬಕ್ಕೆ ಸ್ನೇಹ ಭಾವದ ಜೀವ ಕಳೆ ತುಂಬಿದ್ದಾರೆ. ನವರಾತ್ರಿಯ 9 ಪ್ರತಿ ದಿನ ಬೆಳಂ ಬೆಳಿಗ್ಗೆಯೆ ಆಪ್ತತೆ ಮನಭಾವದ ಪ್ರೀತಿಯುಳ್ಳ ಒಡನಾಡಿ ಸ್ನೇಹಿತೆಯರು ಆಯಾ ದಿನದ ಬಣ್ಣ ಬಣ್ಣದ ಸೀರೆ ಲೋಕದಲ್ಲಿ ಸಂಗಮಿಸಿ ಭಕ್ತಿ ಪಾರಮ್ಯದ ಸೌಜನ್ಯ ಪಥ ಹೊಂಗೀರಣದಲ್ಲಿ ಮಿನುಗುತ್ತಿರುವುದು ವಿಶೇಷ.

