Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ

ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ

ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕರಕುಶಲ ವಸ್ತುಗಳ ಕಲಾ ಪ್ರಾತ್ಯಕ್ಷಿಕೆಗೆ ಮಕ್ಕಳು ಫಿದಾ!
(ರಾಜ್ಯ ) ಜಿಲ್ಲೆ

ಕರಕುಶಲ ವಸ್ತುಗಳ ಕಲಾ ಪ್ರಾತ್ಯಕ್ಷಿಕೆಗೆ ಮಕ್ಕಳು ಫಿದಾ!

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಲಮಟ್ಟಿಯಲ್ಲಿನ ಹಳಕಟ್ಟಿ ಪ್ರೌಢಶಾಲೆಯಲ್ಲಿ ಕರಕುಶಲ ಕಲೆ ಪ್ರದರ್ಶನ, ಜಾಗೃತಿ ಕಾರ್ಯಕ್ರಮ

ಉದಯರಶ್ಮಿ ದಿನಪತ್ರಿಕೆ

ಆಲಮಟ್ಟಿ: ಅಲ್ಲಿ ವಿಭಿನ್ನ ಕಲ್ಪನೆಯ ಸ್ಪರ್ಶವುಳ್ಳ ಮಾನವನ ಕೈಚಳಕದಿಂದ ಉಪಯುಕ್ತ ವಸ್ತುಗಳು ನಾವೀನ್ಯತೆಯಿಂದ ತಯಾರಾಗುತ್ತಿದ್ದವು. ನಿರುಪಯುಕ್ತ ಸಾಮಗ್ರಿಗಳು ಜೀವ ವೈವಿಧ್ಯತೆಯ ರೂಪ ಪಡೆದು ಉಪಯುಕ್ತವಾಗಿ ಕಣ್ಮನ ಸೆಳೆಯುತ್ತಿದ್ದವು. ಇಂಥದೊಂದು ಕಲಾ ಸಾಧನಗಳ ದೃಶ್ಯಗಳನ್ನು ಕೌತಕದಿಂದ ವೀಕ್ಷಿಸುತ್ತಿದ್ದ ಮಕ್ಕಳ ಕಣ್ಣಂಚಿನಲ್ಲಿ ಕರಕುಶಲ ಕಲೆಗಳ ವೈವಿಧ್ಯಮಯ ಪರಂಪರೆ ಅನಾವರಣಗೊಂಡಿತ್ತು !
ಇಲ್ಲಿನ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಕರಕುಶಲ ಕಲೆಗಳ ಪರಿಕಲ್ಪನೆಯ ಸೃಜನಾತ್ಮಕ ಕಲಾಮೇಳದ ರಸಗಾನಕ್ಕೆ ಈಚೆಗೆ ಸಾಕ್ಷಿಯಾಗಿತ್ತು !
ಭಾರತ ಸರಕಾರ ಜವಳಿ ಸಚಿವಾಲಯದ ಕರಕುಶಲ ವಿಭಾಗದ ಮಾಕೆ೯ಟಿಂಗ್ ಸಹಾಯ ಮತ್ತು ಸೇವೆಗಳು ಎನ್ಎಚ್.ಡಿ.ಪಿ ಅಡಿಯಲ್ಲಿ ಕರಕುಶಲ ಕಲೆಗಳ ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ಸಂಯೋಜನೆಗೊಂಡಿತ್ತು.
ಇದರಂಗವಾಗಿ ನಡೆದ ಪ್ರಾತ್ಯಕ್ಷಿಕೆ ತೋರಣದಲ್ಲಿ ಕರಕುಶಲ ಕಲೆಗಳ ರಸದೌತಣ ಮಕ್ಕಳು ಸವಿಯುವ ಸುಯೋಗ ಒದಗಿತು. ಕರಕುಶಲ ವಸ್ತುಗಳ ತಯಾರಿಕೆಯ ಕಲಾ ಕೌಶಲ್ಯ ಕಣ್ತುಂಬಿಸಿಕೊಂಡು ಯುವಕರು ಸಂತಸಪಟ್ಟರು.
ಸಂಪನ್ಮೂಲ ವ್ಯಕ್ತಿಗಳು ಪ್ರದಶಿ೯ಸಿದ ಪ್ರಾತ್ಯಕ್ಷಿಕೆಯಲ್ಲಿ ಕಲಾತ್ಮಕವಾಗಿ ಸೃಜನಶೀಲತೆಯಿಂದ ಹಲ ಬಗೆಯ ವಸ್ತುಗಳು ತಯಾರಾಗಿ ಸೌಂದರ್ಯ ಮೀಮಾಂಸೆಯೊAದಿಗೆ ಕರಕುಶಲ ಕಲಾಭಿರುಚಿ ಪ್ರಜ್ಞೆ ಮಕ್ಕಳಲ್ಲಿ ಮೂಡಿಸುವಲ್ಲಿ ವಿಶಿಷ್ಟ ಪಾತ್ರ ವಹಿಸಿತು.
ಸ್ವಹಸ್ತದಿಂದ ವಸ್ತುಗಳು ಅಲಂಕಾರಿಕವಾಗಿ ವಿನ್ಯಾಸಗೊಳ್ಳುತ್ತಿದ್ದವು. ಇದನ್ನು ಕಂಡು ವಿದ್ಯಾರ್ಥಿಗಳು ಖುಷಿಯಿಂದ ಚಪ್ಪಾಳೆ ತಟ್ಟಿ ಆತ್ಮತೃಪ್ತಿಯಿಂದ ಸಂಭ್ರಮಿಸಿದರು. ತಂತ್ರಜ್ಞಾನದ ಪರಂಪರೆಯಲ್ಲಿ ಹಳೆಯ ಪ್ರಾಚೀನ ಕಾಲದಲ್ಲಿನ ಕಲೆಗಳ ಹಾಗೂ ಪ್ರಕೃತಿ ಪೂರಕ ವಸ್ತುಗಳ ಸುಗಂಧ ಕಲಾ ವೈಭವದ ಶ್ರೀಮಂತಿಕೆ ಪರಿಮಳಿಸಿತು. ಈ ಕರಕುಶಲ ಕಲಾ ಕಳೆ ಮಕ್ಕಳ ಮನದಲ್ಲಿ ಹೊಸ ಭಾಷ್ಪ ತೆರೆಯಿಸಿತು. ಕರಕುಶಲ ಕಲಾಂಕುರದ ಬುತ್ತಿಯಲ್ಲಿ ಸಂಗಮಿಸಿ ವಿಹರಿಸಿದರು. ಶ್ರಮ, ಸಂಸ್ಕೃತಿ ಮಹತ್ವ ಅರಿತು ಬದುಕಿನ ಆಶಾಭಾವ ಸಾಧನದ ಇಂಚರ ತಿಳಿದುಕೊಳ್ಳಲು ಪ್ರಯತ್ನಿಸಿದ್ದು ವಿಶೇಷ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಕಾಳಪ್ಪ ಬಡಿಗೇರ, ಮುತ್ಪಪ್ಪ ಬುಡ್ಡರ, ಶರಣಪ್ಪ ಕುಂಬಾರ, ಶ್ರೀಮತಿ ರೇಣುಕಾ ಬಡಿಗೇರ ವಿವಿಧ ಪ್ರಾತ್ಯಕ್ಷಿಕೆ ನೀಡಿ ಮಕ್ಕಳಿಗೆ ಹುರಿದುಂಬಿಸಿದರು.
ಬಿದಿರಿನ ಬುಟ್ಟಿ ತಯಾರಿಸುವುದು, ರೊಟ್ಟಿ ಬುಟ್ಟಿ ಮರ ಹೆಣೆಯುವುದು, ಕುಂಬಾರಿಕೆ ಕಲೆಯಲ್ಲಿ ಮಣ್ಣಿನ ಮಡಿಕೆ,ಗಡಿಗೆ ತಯಾರಿಸುವದು, ಬಡಿಗೇತನ ಕಲೆಯಲ್ಲಿ ಕಟ್ಟಿಗೆ ಮೇಲೆ ದೇವತಾಕೃತಿಗಳ ಕೆತ್ತನೆ, ಕಸೂತಿ ಕಲೆಯಲ್ಲಿ ಬಟ್ಟೆಗಳ ಮೇಲೆ ನಕ್ಷಾ ಚಿತ್ತಾರಗಳ ವರ್ಣನೆ ಕಲಾ ಬಿಂಬ ಸೃಜೀಸುವ ಕಸೂತಿ ಕಲೆ, ಮರಗೆಲಸದ ಚಾತುರ್ಯಗಳು ಹೀಗೆ ಹಲ ಕರಕುಶಲ ವಸ್ತುಗಳು ಈ ಕಲಾ ಮೇಳದ ಪ್ರಾತ್ಯಕ್ಷಿಕೆಯಲ್ಲಿ ಅಕರ್ಷಣೆಯಿಂದ ಅಚ್ಚಾದವು.
ಭಾರತ ಸರಕಾರ ಜವಳಿ ಮಂತ್ರಾಲಯ ಕರಕುಶಲ ವಿಭಾಗದ ಅಸಿಸ್ಟೆಂಟ್ ಡೈರೆಕ್ಟರ್ ಕಿರಣ ವ್ಹಿ.ಎನ್, ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಬಸಯ್ಯ ಮಠಪತಿ, ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕರಕುಶಲದ ಚಟುವಟಿಕೆಯಲ್ಲಿ ಪಾಲ್ಗೊಂಡು ಗಮನ ಸೆಳೆದ ಮಕ್ಕಳಿಗೆ ಪ್ರಮಾಣ ಪತ್ರ ಆಯೋಜಕರಿಂದ ವಿತರಿಸಲಾಯಿತು. ಶಿಕ್ಷಕರಾದ ಎನ್.ಎಸ್.ಬಿರಾದಾರ, ಎಸ್.ಎಚ್.ನಾಗಣಿ, ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಶ್ರೀಧರ ಚಿಮ್ಮಲಗಿ, ಶ್ರೀಮತಿ ಸಾವಿತ್ರಿ ಸಜ್ಜನ, ಇಬ್ರಾಹಿಂ ಹುನಗುಂದ, ಕರುಣಿಕ ಸಚೀನ ಹೆಬ್ಬಾಳ ಇತರರಿದ್ದರು.
ಎಲ್.ಆರ್.ಸಿಂಧೆ ಪ್ರಾಥಿ೯ಸಿದರು. ಜಿ.ಆರ್.ಜಾಧವ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ

ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ

ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ

ಅ.೭ರಂದು ವಿಜಯಪುರಕ್ಕೆ ಎನ್‌ಪಿಎಸ್ ಸಂಚಯ ಯಾತ್ರೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ
    In (ರಾಜ್ಯ ) ಜಿಲ್ಲೆ
  • ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ
    In (ರಾಜ್ಯ ) ಜಿಲ್ಲೆ
  • ಅ.೭ರಂದು ವಿಜಯಪುರಕ್ಕೆ ಎನ್‌ಪಿಎಸ್ ಸಂಚಯ ಯಾತ್ರೆ
    In (ರಾಜ್ಯ ) ಜಿಲ್ಲೆ
  • ಪೂರ್ವಭಾವಿ ಸಭೆ: ಕನ್ನಡಹಬ್ಬ ಅದ್ದೂರಿ ಆಚರಣೆಗೆ ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಕಾಲುವೆಗಳಿಗೆ ನಿರಂತರ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ೩೭೧ಜೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ
    In (ರಾಜ್ಯ ) ಜಿಲ್ಲೆ
  • ಬಯಲಾಟವನ್ನು ನಾಡಕಲೆಯಾಗಿ ಘೋಷಿಸಿ :ಮೇತ್ರಿ
    In (ರಾಜ್ಯ ) ಜಿಲ್ಲೆ
  • ದೆಹಲಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆಗೆ ಕೆಯುಡಬ್ಲ್ಯೂಜೆ ಖಂಡನೆ
    In (ರಾಜ್ಯ ) ಜಿಲ್ಲೆ
  • ವಿಶೇಷಚೇತನರ ವಿವಿಧ ಯೋಜನೆಗಳಿಗೆ ಆನ್‌ಲೈನ್ ಅರ್ಜಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.