ಆಲಮೇಲ ಪಟ್ಟಣದಲ್ಲಿ ಸಾಲುಮರದ ತಿಮ್ಮಕ್ಕ. ವೃಕ್ಷೋದ್ಯಾನ ಲೋಕಾರ್ಪಣೆಗೊಳಿಸಿದ ಶಾಸಕ ಅಶೋಕ ಮನಗೂಳಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಮಹಾಜನತೆಯ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಕೆರೆ ಮರು ನಿರ್ಮಾಣ ಹಾಗೂ ಕೆರೆಯ ಹತ್ತಿರ ಸುಂದರವಾದ ಸಾಲುಮರ ತಿಮ್ಭಕ್ಕ ವೃಕ್ಷೋದ್ಯಾನವನ್ನು ಆರಣ್ಯ ಇಲಾಖೆ ನಿರ್ಮಿಸಿದ್ದು, ಈ ಉದ್ಯಾನವನದಿಂದ ಸುತ್ತ ಮುತ್ತಲಿನ ಗ್ರಾಮಗಳ ಸಾರ್ವಜನಿರು, ಹಿರಿಯರಿಗೆ ಮತ್ತು ಮಕ್ಕಳು ವಾಯು ವಿಹಾರ ಹಾಗೂ ವಿಶ್ರಾಂತಿ ಪಡೆಯಲು ಆನುಕೂಲವಾಗಲಿದೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.
ಪಟ್ಟಣದಲ್ಲಿ ಸಾಲುಮರ ತಿಮ್ಮಕ್ಕ ವೖಕ್ಷೋದ್ಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಜಯಪುರ ಮತ್ತು ಸಿಂದಗಿಯ ಆರಣ್ಯ ಅಧಿಕಾರಿಗಳು ಕೂಡಿಕೊಂಡು ಸರಿಯಾದ ರೀತಿಯಲ್ಲಿ ಸುಂದರವಾದ ಸಾಲುಮರದ ತಿಮ್ಮಕ್ಕ ವೖಕ್ಷೋದ್ಯಾನ ನಿರ್ಮಾಣ ಮಾಡಿದ್ದಾರೆ. ಅಲಮೇಲ ಪಟ್ಟಣದ ಮಹಾಜನತೆ ಸರಿಯಾದ ರೀತಿಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದು ಸರಕಾರದ ಆಸ್ತಿ ಅಲ್ಲ, ಇದು ನಿಮ್ಮ ಅಲಮೇಲ ಪಟ್ಟಣದ ಆಸ್ತಿ, ಈ ಉದ್ಯಾನವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಆಲಮೇಲ ಪಟ್ಟಣದಲ್ಲಿ ಸುಂದರವಾದ ಸಾಲುಮರದ ತಿಮ್ಮಕ್ಕ ವೖಕ್ಷೋದ್ಯಾನ ನಿರ್ಮಾಣ ಮಾಡಿದ್ದು ಪಟ್ಟಣದ ಜನತೆಗೆ ಬಹಳ ಸಂತೋಷವಾಗಿದೆ. ಈ ಬೃಹತ್ ಉದ್ಯಾನ ವನದಲ್ಲಿ ಹಿರಿಯ ನಾಗರಿಕರು ಸಾರ್ವಜನಿಕರು ಮತ್ತು ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿವಕುಮಾರ ಗುಂದಗಿ. ಅರ್ಬನ್ ಬ್ಯಾಂಕಿನ ಅಧ್ಯಕ್ಷರು ಅಲಮೇಲ, ವಿಜಯಪುರ ಅರಣ್ಯ ಅಧಿಕಾರಿಗಳಾದ ಮಲ್ಲಿನಾಥ ಕೋಸನಾಳ, ಸೆಲ್ವ್ ರಾಜು ನಾಯ್ಕರ್ ಎಂ ಜಿ. ಆಂದೋಲಿ, ಶಿವಾನಂದ ಮಾಡಿಗೊಂಡ ಉಮರ ಬಿಳವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷರು. ಚಂದು ಹಳಿಮನಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರು. ಸಾಧಿಕ್ ಸುಂಬಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು. ರಮೇಶ್ ಬಂಟನೂರ. ನಾಗರಿಕ ವೇದಿಕೆಯ ಅಧ್ಯಕ್ಷರು, ಬಸವರಾಜ್ ತೆಲ್ಲೂರ ಗ್ಯಾರಂಟಿ ಸಮಿತಿ ಅಧ್ಯಕ್ಷರು ಸೇರಿದಂತೆ ಅನೇಕರಿದ್ದರು.

