ರಂಗ್ ದೇ ವೀರ್–2026 ಚಿತ್ರಕಲಾ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ 4ನೇ ಸ್ಥಾನ
ಉದಯರಶ್ಮಿ ದಿನಪತ್ರಿಕೆ
ಬೈಲಹೊಂಗಲ: ಹಾನರ್‌ಪಾಯಿಂಟ್ ಫೌಂಡೇಶನ್ ವತಿಯಿಂದ 2026ರ ಜುಲೈ 26ರಿಂದ ಆಗಸ್ಟ್ 15ರವರೆಗೆ “ಮಾತೃಭೂಮಿ” ಎಂಬ ವಿಷಯದೊಂದಿಗೆ “ರಂಗ್ ದೇ ವೀರ್–8ನೇ ಅಖಿಲ ಭಾರತ ಮುಕ್ತ ಆನ್‌ಲೈನ್ ಚಿತ್ರಕಲಾ ಸ್ಪರ್ಧೆ–2026” ಆಯೋಜಿಸಲಾಗಿತ್ತು.
ದೇಶದಾದ್ಯಂತ ವಿವಿಧ ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ, ನೇಸರಗಿ (ಎಸ್‌ಸಿ–788) ವಿದ್ಯಾರ್ಥಿಗಳು ತಮ್ಮ ಕಲಾತ್ಮಕ ಪ್ರತಿಭೆ ಹಾಗೂ ದೇಶಭಕ್ತಿಯ ಭಾವನೆಯನ್ನು ಚಿತ್ರಗಳ ಮೂಲಕ ಅತ್ಯಂತ ಸುಂದರವಾಗಿ ಅಭಿವ್ಯಕ್ತಪಡಿಸಿದ್ದಾರೆ.
ವೀರಯೋಧರ ತ್ಯಾಗ, ದೇಶಪ್ರೇಮ ಮತ್ತು ಮಾತೃಭೂಮಿಯ ಮೇಲಿನ ಗೌರವವನ್ನು ಪ್ರತಿಬಿಂಬಿಸುವ ಚಿತ್ರಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿ ಭಾರತದ ಟಾಪ್–5 ಶಾಲೆಗಳ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ, ನೇಸರಗಿ (ಎಸ್‌ಸಿ–788) ರಾಷ್ಟ್ರಮಟ್ಟದಲ್ಲಿ 4ನೇ ಸ್ಥಾನ ಪಡೆದುಕೊಂಡಿಕೊಂಡು ಹೆಮ್ಮೆಯ ಸಾಧನೆಯ ಮೂಲಕ ಶಾಲೆಯ, ತಾಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿ ಹೆಚ್ಚಾಗಿದೆ.
ವಿದ್ಯಾರ್ಥಿಗಳಿಗೆ ಚಿತ್ರಕಲೆಯಲ್ಲಿ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷಕರಾದ ಆನಂದ ಕೋಳಿಗುಡ್ಡೆ ಮತ್ತು ಕುಮಾರಿ ಶಶಿತಾ ಕದರಿ ಹಾಗೂ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬೆಳಗಾವಿಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ, ವಸತಿ ಶಾಲೆಗಳ ಡಿಸಿಒ ರಾಘವೇಂದ್ರ ಗಂಗರಡ್ಡಿ, ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಜಾತಾ ಬಿ. ಪಾಟೀಲ, ಶಿವಲಿಂಗ ಶೇಟ್ಟೆನವರ, ಶ್ರೀನಾಥ ತಳವಾರ, ಸಚೀನ ಕರಿಹೊಳಿ ಹಾಗೂ ಆನಂದ ನರಗಟ್ಟಿ ಅವರು ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರನ್ನು ಅಭಿನಂದಿಸಿದ್ದಾರೆ.

