Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ

ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ

ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕಣ್ಣಂಚಿನ ಕಣ್ಣಾಮುಚ್ಚಾಲೆಯಲ್ಲಿ ಪ್ರೇಮದ ಬೆಸುಗೆ
ವಿಶೇಷ ಲೇಖನ

ಕಣ್ಣಂಚಿನ ಕಣ್ಣಾಮುಚ್ಚಾಲೆಯಲ್ಲಿ ಪ್ರೇಮದ ಬೆಸುಗೆ

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿ ಮೊ:9449234142

ಉದಯರಶ್ಮಿ ದಿನಪತ್ರಿಕೆ

ನನ್ನ ಉಸಿರಿನ ಒಡತಿಗೆ,
ಹೃದಯದ ಭಾಷೆಗೆ ಅಕ್ಷರಗಳ ರೂಪ ಕೊಡುವುದು ಎಷ್ಟು ಕಷ್ಟವೋ, ನಿನ್ನ ಮೇಲಿರುವ ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡುವುದು ಅಷ್ಟೇ ಅಸಾಧ್ಯ. ಆದರೂ, ನನ್ನ ಒಂಟಿ ಜಗತ್ತಿಗೆ ಬೆಳಕಾಗಿ ಬಂದ ನಿನಗಾಗಿ, ನಮ್ಮ ಪ್ರೇಮಕಾವ್ಯದ ಪುಟಗಳನ್ನು ಒಮ್ಮೆ ತಿರುವಿ ಹಾಕುತ್ತಿದ್ದೇನೆ.
ಅಂದು ಆ ಕಿಕ್ಕಿರಿದು ತುಂಬಿದ್ದ ಬಸ್ ನಿಲ್ದಾಣ… ನಿನ್ನನ್ನು ಮೊದಲ ಬಾರಿಗೆ ನೋಡಿದ ಆ ಕ್ಷಣ ಇಂದಿಗೂ ನನ್ನ ಕಣ್ಣುಗಳಲ್ಲೇ ಹಸಿರಾಗಿದೆ. ನೀನು ಅಪರಿಚಿತಳಾಗಿ ಬಂದು ನನ್ನ ಪ್ರಪಂಚವನ್ನೇ ಬದಲಾಯಿಸಿಬಿಟ್ಟೆ. ನೀಲಿ ಬಣ್ಣದ ರೇಷ್ಮೆ ಸೀರೆಯುಟ್ಟು, ಅದಕ್ಕೆ ಹೊಂದುವ ಜರಿ ಬ್ಲೌಸ್ ಧರಿಸಿದ ನಿನ್ನ ಆ ರೂಪ ದೇವಲೋಕದ ಅಪ್ಸರೆಯಂತೆ ಕಂಗೊಳಿಸುತ್ತಿತ್ತು. ಆ ಸುರುಳಿ ಮುಂಗುರುಳಿನ ಸೌಂದರ್ಯ, ಬಿಲ್ಲು ಹಚ್ಚಿದಂತಿದ್ದ ಹುಬ್ಬುಗಳು, ಮತ್ತು ನಕ್ಷತ್ರಗಳನ್ನೇ ಹೋಲುವ ನಿನ್ನ ಆ ನೀಲ ಗಗನದಂತಹ ಕಣ್ಣುಗಳು ನನ್ನನ್ನು ಮಂತ್ರಮುಗ್ಧನಾಗಿಸಿದ್ದವು. ಗುಲಾಬಿ ದಳಗಳಂತಿದ್ದ ತುಟಿಗಳು, ನುಣುಪಾದ ಕೆನ್ನೆಗಳು, ಮತ್ತು ಆ ಸುಂದರ ಗಲ್ಲದ ಕೆಳಗೆ ಮಿನುಗುತ್ತಿದ್ದ ನಿನ್ನ ಆ ಸಣ್ಣನೆಯ ಕಪ್ಪುಮತಿ, ಸಣಕಲು ಸಣ್ಣನೆ ಸೊಂಟ ನನ್ನ ಎದೆಯಲ್ಲಿ ಪ್ರೇಮದ ತರಂಗಗಳನ್ನೇ ಎಬ್ಬಿಸಿತ್ತು. ಕೈಯಲ್ಲಿದ್ದ ಬಳೆಗಳ ನಾದ ಮತ್ತು ಕೊರಳಿನ ಸಾಂಪ್ರದಾಯಿಕ ಒಡವೆಗಳು ನಿನ್ನ ಅಂದಕ್ಕೆ ಹೊಸ ಮೆರುಗನ್ನು ನೀಡಿದ್ದವು.


ನಿನ್ನನ್ನು ನೋಡುತ್ತಿದ್ದ ನನ್ನ ಮುಖದಲ್ಲೂ ಒಂದು ಆಕರ್ಷಕ ಕಳೆಯಿತ್ತು. ಅಚ್ಚುಕಟ್ಟಾಗಿ ಕತ್ತರಿಸಿದ ರೇಷ್ಮೆಯಂತಹ ಕೂದಲು ಮತ್ತು ಗಂಡುತನದ ಗತ್ತನ್ನು ಹೆಚ್ಚಿಸುವಂತೆ ಸವರಿದ್ದ ನನ್ನ ಆ ದಟ್ಟವಾದ ಮೀಸೆ, ಜೀನ್ಸ್ ಪ್ಯಾಂಟ್, ಕಡುಗಪ್ಪು ಶರ್ಟ್ ಧರಿಸಿ, ಕಣ್ಣಿಗೆ ಗಾಗಲ್ಸ್ ಏರಿಸಿ ನಿಂತಿದ್ದ ನನ್ನ ಆ ಸ್ಟೈಲಿಶ್ ಲುಕ್ ಮತ್ತು ಕೈಗೆ ಕಟ್ಟಿದ್ದ ರಗಡ್ ವಾಚ್ ನಿನ್ನ ಕಣ್ಣುಗಳನ್ನೂ ನನ್ನತ್ತ ಸೆಳೆಯುವಂತೆ ಮಾಡಿತ್ತು ಅಲ್ವಾ?
ನಮ್ಮಿಬ್ಬರ ಕಣ್ಣುಗಳು ಮೊದಲ ಬಾರಿಗೆ ಸಂಧಿಸಿದಾಗ ಇಡೀ ಜಗತ್ತೇ ಒಂದು ಕ್ಷಣ ಸ್ತಬ್ಧವಾದಂತಾಗಿತ್ತು. ಆ ತೀಕ್ಷ್ಣ ನೋಟದ ಚಕಮಕಿಯಲ್ಲಿ ಮಾತುಗಳಿಗಿಂತ ಭಾವನೆಗಳೇ ಹೆಚ್ಚು ಮೌನವಾಗಿ ಸಂವಹನ ನಡೆಸಿದವು. ನಂತರ ಪ್ರೀತಿಯ ಆ ಆರಂಭಿಕ ಅಳುಕಿನಿಂದಾಗಿ, ಒಬ್ಬರನ್ನೊಬ್ಬರು ಕದ್ದುಮುಚ್ಚಿ ನೋಡುವ ಆ ಸೌಂದರ್ಯವೇ ಅದ್ಭುತವಾಗಿತ್ತು. ನಾನು ನೋಡುವುದು ನಿನಗೆ ತಿಳಿಯುತ್ತಿದ್ದಂತೆ ನೀನು ನಾಚಿ ತಲೆತಗ್ಗಿಸುವುದು, ಮತ್ತೆ ನೀನು ಕಣ್ಣೆತ್ತಿ ನೋಡುವಾಗ ನಾನು ಬೇರೆಡೆ ಮುಖ ತಿರುಗಿಸುವ ನಮ್ಮಿಬ್ಬರ ಪ್ರೇಮದ ಕಣ್ಣಾಮುಚ್ಚಾಲೆ ಆ ಅಪರಿಚಿತ ಭೇಟಿಗೆ ಹೊಸ ಮೆರುಗನ್ನು ನೀಡಿತ್ತು. ನೀನು ನನ್ನನ್ನು ನೋಡಿದ ಆ ಒಂದು ಕ್ಷಣ, ನಾವಿಬ್ಬರು ಒಬ್ಬರಿಗೊಬ್ಬರಿಗಾಗಿಯೇ ಹುಟ್ಟಿದವರು ಎಂಬ ಅನುಭೂತಿ ನನ್ನ ಇಡೀ ಜೀವಾತ್ಮಕ್ಕೆ ತಟ್ಟಿತ್ತು.
ನಿನ್ನ ಆ ಮೊದಲ ಭೇಟಿಯ ನಂತರ ನಾನಂತೂ ನನ್ನ ನಿಯಂತ್ರಣದಲ್ಲೇ ಇರಲಿಲ್ಲ. ಆಫೀಸಿನಲ್ಲಿ ಕಂಪ್ಯೂಟರ್ ಪರದೆಯತ್ತ ನೋಡುತ್ತಿದ್ದರೆ ಅಲ್ಲಿ ನಿನ್ನದೇ ಮುಖ ಮೂಡಿಬರುತ್ತಿತ್ತು. ಗೆಳೆಯರೆಲ್ಲ ಗಂಭೀರವಾಗಿ ಮಾತನಾಡುತ್ತಿದ್ದರೆ, ನಾನು ಮಾತ್ರ ಗಲ್ಲಕ್ಕೆ ಕೈಕೊಟ್ಟು, ನೀನು ಬಸ್ ಹತ್ತುವಾಗ ನಿನ್ನ ಮುಂಗುರುಳು ಗಾಳಿಗೆ ತೇಲುತ್ತಿದ್ದ ಆ ಸುಂದರ ದೃಶ್ಯವನ್ನು ಹಗಲುಗನಸು ಕಾಣುತ್ತಾ ಕುಳಿತಿರುತ್ತಿದ್ದೆ. ಕಾಫಿ ಕಪ್ ಹಿಡಿದರೆ ಅದರಲ್ಲಿ ನಿನ್ನ ಕಣ್ಣುಗಳ ಪ್ರತಿಬಿಂಬ! ಈ ನನ್ನ ಹಗಲುಗನಸುಗಳ ಹುಚ್ಚುತನವನ್ನು ಕಂಡು ನನ್ನ ಗೆಳೆಯರಂತೂ ನನ್ನನ್ನು ಕಾಡದೇ ಬಿಡುತ್ತಿರಲಿಲ್ಲ. “ನಮ್ಮ ಗಂಭೀರ ಸಿಂಹ ಇಷ್ಟು ಬೇಗ ಪ್ರೀತಿಯ ಬಲೆಯಲ್ಲಿ ಬಿದ್ದು ಬೆಕ್ಕಾಗಿಯೇ ಹೋಯಿತಲ್ಲ!” ಎಂದು ಸಿಕ್ಕಸಿಕ್ಕಾಗಲೆಲ್ಲಾ ಕಾಲೆಳೆಯುತ್ತಿದ್ದರು. ರಾಣಿ ಅಂತ ತಾವೇ ನಿನಗೆ ಹೆಸರಿಟ್ಟರು. ನಿನ್ನ ಹೆಸರೇಳಿ ಅವರು ಚುಡಾಯಿಸುವಾಗಲೆಲ್ಲಾ ನನ್ನ ಮುಖದಲ್ಲಿ ಮೂಡುತ್ತಿದ್ದ ಆ ಕಳ್ಳನಗು ನನ್ನ ಗೆಳೆಯರಿಗೆ ದೊಡ್ಡ ಹಬ್ಬವಾಗಿರುತ್ತಿತ್ತು.


ವಿಧಿಯ ಆಟ ಎಷ್ಟು ಅದ್ಭುತ ಅಲ್ವಾ? ಅದೇ ಕಾಕತಾಳೀಯ ಎಂಬಂತೆ ನಾವು ಮತ್ತೆ ಸುಂದರ ಉದ್ಯಾನವನದಲ್ಲಿ ಮುಖಾಮುಖಿಯಾದೆವು. ಸುತ್ತಲೂ ಹಸಿರಿನ ಹಾಸಿಗೆ, ತಂಗಾಳಿಗೆ ತೂಗುತ್ತಿದ್ದ ಹೂವುಗಳು, ಚಿಲಿಪಿಲಿಗುಟ್ಟುತ್ತಿದ್ದ ಹಕ್ಕಿಗಳು… ಎಲ್ಲವೂ ನಮ್ಮ ಭೇಟಿಯನ್ನೇ ಸಂಭ್ರಮಿಸುತ್ತಿರುವಂತಿತ್ತು. ಉದ್ಯಾನವನದಲ್ಲಿದ್ದ ಜನರು ತಮ್ಮದೇ ಪ್ರಪಂಚದಲ್ಲಿದ್ದರೆ, ನನ್ನ ಕಣ್ಣುಗಳು ಮಾತ್ರ ಕೇವಲ ನಿನ್ನನ್ನೇ ಹುಡುಕುತ್ತಿದ್ದವು. ಆ ಪ್ರಕೃತಿಯ ಮಡಿಲಿನಲ್ಲಿ, ಇನ್ನು ತಡೆಯಲಾರದೆ ನನ್ನ ಹೃದಯದ ಗೂಡಿನಲ್ಲಿದ್ದ ಪ್ರೀತಿಯನ್ನು ನಿನ್ನ ಮುಂದೆ ಬಿಚ್ಚಿಟ್ಟೆ. ನೀನು ಏನೂ ಮಾತನಾಡದೆ, ನಿನ್ನ ಕೆನ್ನೆಗಳು ಕೆಂಪಾಗುತ್ತಿರಲು, ನಾಚಿಕೆಯಿಂದ ತಲೆ ತಗ್ಗಿಸಿ ಮೌನವಾಗಿಯೇ ನನ್ನ ಪ್ರೀತಿಯನ್ನು ಒಪ್ಪಿಕೊಂಡ ಆ ಕ್ಷಣ ನನ್ನ ಬದುಕಿನ ಅತ್ಯಂತ ಖುಷಿಯ ಕ್ಷಣ. ನಮ್ಮ ಈ ಪ್ರೇಮದ ವಿಷಯ ನಿನ್ನ ಗೆಳತಿಯರಿಗೂ ತಿಳಿದಾಗ, ಅವರೂ ನಿನ್ನನ್ನು ಬಿಡಲಿಲ್ಲ. “ಅಪರಿಚಿತನಿಗೆ ಹೃದಯ ಕೊಟ್ಟು ಬಂದೆಯಾ?” ಎಂದು ನಿನ್ನ ಕೈ ಹಿಡಿದು ಎಳೆಯುತ್ತಾ, ನನ್ನ ಹೆಸರನ್ನು ನಿನ್ನ ಕಿವಿಯಲ್ಲಿ ಪಿಸುಗುಟ್ಟುತ್ತಾ ನಿನ್ನ ಮುಖದ ಮೇಲಿನ ನಾಚಿಕೆಯನ್ನು ದುಪ್ಪಟ್ಟು ಮಾಡುತ್ತಿದ್ದರು.
ನಂತರ ನಮ್ಮ ಪ್ರೇಮದ ಪಯಣ ಮತ್ತೊಂದು ಹಂತಕ್ಕೆ ತಲುಪಿತು. ನಗರದ ಗಿಜಿಗುಟ್ಟುವ ಗದ್ದಲದಿಂದ ದೂರ, ಪ್ರಶಾಂತವಾದ ಆ ಹೊರವಲಯದ ನಿರ್ಜನ ಜಾಗದಲ್ಲಿ ನಮ್ಮ ಮುಂದಿನ ಭೇಟಿ ನಿಶ್ಚಯವಾಗಿತ್ತು. ಅಲ್ಲಿ ಪ್ರಕೃತಿಯ ಮೌನ ಮಾತ್ರ ನಮಗೊಂದು ಆಸರೆಯಾಗಿತ್ತು. ಅಲ್ಲಿ ನಾವಿಬ್ಬರೂ ಹತ್ತಿರ ಬಂದಾಗ, ನನ್ನ ಕೈಗಳು ನಿನ್ನ ಮೃದುವಾದ ಹಸ್ತವನ್ನು ಮೊದಲ ಬಾರಿಗೆ ಸ್ಪರ್ಶಿಸಿದವು. ಆ ಮೊದಲ ಸ್ಪರ್ಶದಲ್ಲಿ ನನ್ನ ಇಡೀ ದೇಹದಲ್ಲಿ ಮಿಂಚು ಹರಿದಂತಾಗಿತ್ತು. ನಿನ್ನ ಮೃದುವಾದ ಉಸಿರು ನನ್ನ ಕೆನ್ನೆಗೆ ತಾಗುತ್ತಿರಲು, ನಿನ್ನ ಹೆಗಲ ಮೇಲೆ ನನ್ನ ಕೈಯಿಟ್ಟು, ನಿನ್ನ ಮುಖವನ್ನು ಹತ್ತಿರಕ್ಕೆಳೆದು ನಿನ್ನ ಹಣೆಗೊಂದು ಕೆನ್ನೆಗೆರಡು ಮೃದುವಾದ ಮುತ್ತಿಕ್ಕಿದ ಆ ಹಗುರ ಪ್ರಣಯದ ಕ್ಷಣಗಳು ಇಂದಿಗೂ ನನ್ನನ್ನು ರೋಮಾಂಚನಗೊಳಿಸುತ್ತವೆ.


ಅಲ್ಲಿಂದ ಶುರುವಾಗಿದ್ದು ನಮ್ಮ ಪ್ರೇಮ ಸಂದೇಶಗಳ ಸರಮಾಲೆ. ಹಗಲು-ರಾತ್ರಿ ಎನ್ನದೆ ಮೊಬೈಲ್ ಪರದೆಯ ಮೇಲೆ ನಿನ್ನ ಪ್ರೀತಿಯ ಮೆಸೇಜ್‌ಗಳಿಗಾಗಿ ಕಾಯುವುದೇ ಒಂದು ಮಧುರ ಹವ್ಯಾಸವಾಗಿಹೋಯಿತು. ಪ್ರತಿಯೊಂದು ಶಬ್ದದಲ್ಲೂ ನಿನ್ನ ಪ್ರೀತಿ, ನಿನ್ನ ಮುನಿಸು, ನಿನ್ನ ಕಾಳಜಿ ನನಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು.
ನಾವು ಅನುಭವಿಸಿದ ಆ ನಿಜವಾದ ಪ್ರೀತಿ ಕೇವಲ ಆಕರ್ಷಣೆಯಾಗಿರಲಿಲ್ಲ; ಅದು ಎರಡು ಆತ್ಮಗಳು ಒಂದಕ್ಕೊಂದು ಬೆಸೆದುಕೊಂಡ ಅಲೌಕಿಕ ಅನುಭೂತಿ. ನಿನ್ನ ಕಣ್ಣುಗಳ ನಿಶ್ಯಬ್ದ ಪ್ರಪಂಚದಲ್ಲಿ ನನ್ನ ಇಡೀ ಅಸ್ತಿತ್ವಕ್ಕೆ ನೆಮ್ಮದಿಯ ತಂಗಾಳಿ ಬೀಸಿದಂತಾಗಿತ್ತು. ಮೌನದಲ್ಲೂ ಪ್ರತಿಯೊಂದು ಭಾವನೆಯನ್ನು ಗ್ರಹಿಸುವ, ಮಾತಿಲ್ಲದೆಯೇ ಮನದ ಆಳವನ್ನು ಅರಿಯುವ ಆ ಅದ್ಭುತ ಶಕ್ತಿ ನಮಗೆ ಆ ನಿಜವಾದ ಪ್ರೀತಿಯಿಂದಲೇ ಲಭಿಸಿತು. ನಮ್ಮ ಹುಸಿ ಮುನಿಸು, ಆ ಮುನಿಸಿನ ನಂತರದ ಅತಿಯಾದ ಕಾಳಜಿ, ಪ್ರತಿಯೊಂದು ಕಷ್ಟದಲ್ಲೂ ಹೆಗಲಾಗಿ ನಿಲ್ಲುವ ಆ ಭರವಸೆ—ಇವೆಲ್ಲವೂ ನಮ್ಮ ಪ್ರೀತಿಯನ್ನು ಜಗತ್ತಿನ ಅತ್ಯಂತ ಪವಿತ್ರವಾದ ಭಾವನೆಯನ್ನಾಗಿ ಪರಿವರ್ತಿಸಿತು. ಈ ಪ್ರೇಮವು ನನ್ನನ್ನು ಹೆಚ್ಚು ಜವಾಬ್ದಾರಿಯುತನನ್ನಾಗಿ ಮತ್ತು ನಿನ್ನನ್ನು ನನ್ನ ಬದುಕಿನ ಪರಮ ಸತ್ಯವನ್ನಾಗಿ ಮಾಡಿದೆ.
ಬಸ್ ನಿಲ್ದಾಣದ ಆ ಅಪರಿಚಿತ ಭೇಟಿಯಿಂದ ಆರಂಭವಾದ ನಮ್ಮ ಈ ಪಯಣ, ಇಂದು ಜೀವನದ ಅತಿ ದೊಡ್ಡ ನಿರ್ಧಾರಕ್ಕೆ ಬಂದು ನಿಂತಿದೆ. ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ, ನನ್ನ ಉಸಿರಿನ ಕೊನೆಯವರೆಗೂ ನಿನ್ನ ಜೊತೆಯಾಗಿ, ನಿನ್ನ ಕೈ ಹಿಡಿದು ಮುನ್ನಡೆಯಲು ನಾನು ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ. ನಿನ್ನನ್ನು ನನ್ನ ಅರ್ಧಾಂಗಿನಿಯನ್ನಾಗಿ, ನನ್ನ ಸಂಸಾರದ ದೇವತೆಯನ್ನಾಗಿ ಬರಮಾಡಿಕೊಳ್ಳುವ ಆ ಶುಭ ಘಳಿಗೆಗಾಗಿ ನನ್ನ ಹೃದಯ ಬಡಿತ ಕ್ಷಣಕ್ಷಣವೂ ಕಾಯುತ್ತಿದೆ.
ಜನ್ಮಜನ್ಮಕ್ಕೂ ನಿನ್ನವನೇ ಆಗಿರುವ,
ನಿನ್ನ ಪ್ರೀತಿಯ ಹುಡುಗ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ

ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ

ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ

ಅ.೭ರಂದು ವಿಜಯಪುರಕ್ಕೆ ಎನ್‌ಪಿಎಸ್ ಸಂಚಯ ಯಾತ್ರೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ
    In (ರಾಜ್ಯ ) ಜಿಲ್ಲೆ
  • ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ
    In (ರಾಜ್ಯ ) ಜಿಲ್ಲೆ
  • ಅ.೭ರಂದು ವಿಜಯಪುರಕ್ಕೆ ಎನ್‌ಪಿಎಸ್ ಸಂಚಯ ಯಾತ್ರೆ
    In (ರಾಜ್ಯ ) ಜಿಲ್ಲೆ
  • ಪೂರ್ವಭಾವಿ ಸಭೆ: ಕನ್ನಡಹಬ್ಬ ಅದ್ದೂರಿ ಆಚರಣೆಗೆ ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಕಾಲುವೆಗಳಿಗೆ ನಿರಂತರ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ೩೭೧ಜೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ
    In (ರಾಜ್ಯ ) ಜಿಲ್ಲೆ
  • ಬಯಲಾಟವನ್ನು ನಾಡಕಲೆಯಾಗಿ ಘೋಷಿಸಿ :ಮೇತ್ರಿ
    In (ರಾಜ್ಯ ) ಜಿಲ್ಲೆ
  • ದೆಹಲಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆಗೆ ಕೆಯುಡಬ್ಲ್ಯೂಜೆ ಖಂಡನೆ
    In (ರಾಜ್ಯ ) ಜಿಲ್ಲೆ
  • ವಿಶೇಷಚೇತನರ ವಿವಿಧ ಯೋಜನೆಗಳಿಗೆ ಆನ್‌ಲೈನ್ ಅರ್ಜಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.