Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅ.೭ರಿಂದ ರೈತರಿಗೆ ಸಾವಯವ ಕೃಷಿ ಉಚಿತ ತರಬೇತಿ

ಹಿರಿಯರ ಜೀವನಾನುಭವ ಸದೃಢ ಸಮಾಜ ನಿರ್ಮಾಣಕ್ಕೆ ಅಗತ್ಯ

ಆಲಮಟ್ಟಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಆಗ್ರಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ವಠಾರ – ವಿಸ್ತಾರ – ವಿಹಾರ
ವಿಶೇಷ ಲೇಖನ

ವಠಾರ – ವಿಸ್ತಾರ – ವಿಹಾರ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಡತನದಿಂದ ಹರಿದ ಬಟ್ಟೆ ಹಾಕುತ್ತಿದ್ದ ದಿನಗಳಿಂದ ಅತೀ ಹೆಚ್ಚು ಹಣ ಕೊಟ್ಟು ಹರಿದ ಬಟ್ಟೆ ಕೊಂಡುಕೊಳ್ಳುವ ಟ್ರೆಂಡ್ ಬಂದಿದೆ. ಮೊದಲು ಬೇನೆ ಬಂದ ತಕ್ಷಣ ಕೊಡುತ್ತಿದ್ದ ಗಿಡಮೂಲಿಕೆಗಳು ಇವಾಗ ಸ್ಟ್ಯಾಂಡರ್ಡ್ ಆಯುರ್ವೇದಿಕ್ ಔಷಧಿಯಾಗಿದೆ. ಗಾಯವಾದ ತಕ್ಷಣ ಹಾಕುತ್ತಿದ್ದ ಮಣ್ಣು, ಇವಾಗ ಮಡ್ ತೆರಪಿಯಾಗಿದೆ.

– ರಶ್ಮಿ .ಕೆ. ವಿಶ್ವನಾಥ್.
ಮೈಸೂರು

ಉದಯರಶ್ಮಿ ದಿನಪತ್ರಿಕೆ

‘ವಠಾರ’ ಎಂಬ ಪದ ಈವಾಗಿನ ಎಷ್ಟೋ ಜನರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾಗಿ ವಠಾರದ ಬಗ್ಗೆ ವಿವರಿಸುವಾಗ ಮಾಡ್ರನ್ ವಠಾರ ‘ಅಪಾರ್ಟ್ಮೆಂಟ್’ಗಳನ್ನು ಉದಾಹರಿಸಿ ಹೇಳಬಹುದು.
ಹಾಗೆ ನೋಡಿದರೆ ‘ಅಪಾರ್ಟ್ಮೆಂಟ್’ ‘ವಠಾರ’ದ ಜೀವಂತಿಕೆಯನ್ನ ತರಲಾರದು. ಆದರೂ ಸ್ವಲ್ಪ ಸಮೀಕರಿಸಬಹುದು.
ಅನಂತನಾಗ್ ನಟನೆಯ “ಗೌರಿ ಗಣೇಶ” ಚಿತ್ರವನ್ನ ನೋಡಿದವರಿಗಾದರೆ ವಠಾರದ ಬಗ್ಗೆ ಅರಿವಿರುತ್ತದೆ. ಒಂದೇ ಓಣಿಯಲ್ಲಿ ಸಾಗಿದರೆ ರಸ್ತೆಬದಿಯ ಮರಗಳಂತೆ, ಎದುರು -ಬದರಿಗೆ ಕಟ್ಟಿರುವ ಗುಡಿಸಲುಗಳಿಗಿಂತ ಸ್ವಲ್ಪ ಉತ್ಕೃಷ್ಣ ಮಟ್ಟದ ಸಾಲು ಮನೆಗಳು. ಅಷ್ಟೂ ಮನೆಗಳಿಗೆ ಒಂದೇ ಅಂಗಳದಂತಿರುವ ಓಣಿ. ಆ ವಠಾರದವರಿಗೆಲ್ಲ ಅದೇ ರಹದಾರಿ. ಅಲ್ಲಿಗೆಲ್ಲ ಸಿಸಿ ಕ್ಯಾಮೆರಾಗಳನ್ನು ಹಣ ಕೊಟ್ಟು ಹಾಕಿಸುವುದೇನು ಬೇಡ. ಬೇಡದ ಬೇಕಾದ ಎಲ್ಲಾ ವಿಷಯಗಳನ್ನು ಸೆರೆಹುಡಿದು, ಅದಕ್ಕೆ ಸ್ವಲ್ಪ ಮಸಾಲವನ್ನು ಸಹ ಸೇರಿಸಿ ರವಾನಿಸುವ ಮನುಷ್ಯ ಸಿಸಿ ಕ್ಯಾಮರಾಗಳೇ ಬೇಕಾದಷ್ಟು ಇರುತ್ತಿದ್ದವು. ಎಲ್ಲಾ ಕೆಲಸ ಮುಗಿಸಿ ಹೆಂಗಳೆಯರೆಲ್ಲ ಒಟ್ಟಿಗೆ ಕುಳಿತರೆಂದರೆ ಮುಗಿಯಿತು. ಅಲ್ಲಿ ಎಲ್ಲಾ ವಿಷಯಗಳು ಮಾತಿಗೆ ಬಂದು ವಿಮರ್ಶೆಗಳು ಸಹ ಆಗಿಬಿಡುತ್ತಿದ್ದವು. ಎಲ್ಲಿಗೇ ಹೋಗಬೇಕೆಂದರು ಅಲ್ಲಿಯೇ ಜೊತೆ ಸಿಕ್ಕಿಬಿಡುತ್ತಿತ್ತು. ಖಾರದ ಪುಡಿ, ಸಕ್ಕರೆ, ಈರುಳ್ಳಿ ಈ ರೀತಿಯ ಮೂಲ ಸಾಮಾಗ್ರಿಗಳಿಂದ ಹಿಡಿದು, ಹಣಕಾಸಿನವರೆಗೂ ಲೇವಾದೀವಿ ನಡೆಯುತ್ತಿತ್ತು.
ಅದೇ ಇವಾಗಿನ ಅಪಾರ್ಟ್ಮೆಂಟ್
ಅವಾಗ ಜಾಗಶ್ರೀಮಂತಿಕೆ ಹೆಚ್ಚಿದ್ದರಿಂದ ವಠಾರದಲ್ಲಿ ಮನೆಗಳು ಒಂದರ ಪಕ್ಕ ಒಂದಿರುತ್ತಿದ್ದವು. ಅಬ್ಬಬ್ಬಾ ಎಂದರೆ ಒಂದರ ಮನೆಮುಂದೆ ರಂಗೋಲಿ ಹಾಕಲು ಬಾಗಿಲು ತೊಳೆದ ನೀರು ಮತ್ತೊಂದು ಮನೆಯಮುಂದೆ ಹೋಗಿದ್ದಿರಬಹುದು ಅಷ್ಟೆ. ಬೇರೆ ತೊಂದರೆಯೇನಿಲ್ಲ.


ಆದರೆ ಇವಾಗ ಜನಶ್ರೀಮಂತಿಕೆ ಹೆಚ್ಚಾಗಿ, ಜಾಗದಾರಿದ್ರ್ಯ ಬಂದಿರುವುದರಿಂದ ಅಪಾರ್ಟ್ಮೆಂಟ್’ ಗಳು ಬಂದವು. ಇಲ್ಲಿ ಒಂದರ ಮೇಲೆ ಒಂದು, ಒಂದರ ಮೇಲೆ ಒಂದು ಮನೆಗಳು. ಅಪಾರ್ಟ್ಮೆಂಟ್’ ಗಳಿಗೆ ಲಿಫ್ಟೇ ರಹದಾರಿ. ಅವರ ಮನೆಯಲ್ಲಿ ನಲ್ಲಿ ಕೆಲಸ ಮಾಡಿಸಿದರೆ ಇವರ ಮನೆ ಕ್ರ್ಯಾಕ್. ಇವರ ಮನೆ ಮನೆಯಲ್ಲಿ ಕೆ ಇ ಬಿ ವಯರಿಂಗ್ ಮಾಡಿಸಿದರೆ ಅವರ ಮನೆಯಲ್ಲಿ ಕ್ರ್ಯಾಕ್.
ವಠಾರದಲ್ಲಿ ಕುಡುಕ ಗಂಡಂದಿರಿದ್ದರೆ ಅವ ಹೆಂಡತಿಯೊಂದಿಗೆ ಜಗಳ ಮಾಡಿದಾಗ ವಠಾರಕ್ಕೆಲ್ಲ ಕಿರಿಕಿರಿ. ಅದನ್ನ ನೋಡಿ ಎಂಜಾಯ್ ಮಾಡಿಕೊಂಡೋ ಇಲ್ಲ ಗೊಣಗಿಕೊಂಡೋ ಹೋಗಿ ಮಲಗುತ್ತಿದ್ದರು. ಅಪಾರ್ಟ್ಮೆಂಟ್’ ನಲ್ಲಿ ಸ್ಟ್ಯಾಂಡರ್ಡ್ ಮಂದಿ ಅಲ್ವಾ ಹಾಗಾಗಿ ಯಾರಾದರೂ ಪಾರ್ಟಿ ಮಾಡಿ ಗಲಾಟೆ ಮಾಡಿದರೆ ಸ್ಟ್ಯಾಂಡರ್ಡ್ ಆಗಿ ಹೋಗಿ ಕಂಪ್ಲೇಂಟ್ ಮಾಡುತ್ತಾರೆ ಅಷ್ಟೆ.
ವಠಾರದಲ್ಲಿ ಓನರ್ ಬಾಡಿಗೆ ಹಣ ಕೇಳಲು ಬರುತ್ತಿದ್ದ. ಅಪಾರ್ಟ್ಮೆಂಟ್ ನಲ್ಲಿ ಬಿಲ್ಡರ್ ಮೇಂಟೈನೆನ್ಸ್ ಹಣ ಕೇಳುತ್ತಾರೆ.
ಅಲ್ಲಿ ಎಲ್ಲರೂ ಕೂತು ಹರಟುವ ಗ್ರೂಪ್ ಇರುತಿತ್ತು. ಸಿಕ್ಕಿದಾಗಲೆಲ್ಲ ಮೀಟಿಂಗ್.
ಇಲ್ಲಿ ಜಸ್ಟ್ ವಾಟ್ಸಪ್ಪ್ ಗ್ರೂಪ್. ಒಬ್ಬರಿಗೊಬ್ಬರು ಸಿಗಬೇಕು ಎಂದರೇನೇ ದಿನ ಗಂಟೆ ಘಳಿಗೆ ಎಲ್ಲವೂ ಗ್ರೂಪ್ನಲ್ಲೇ ತೀರ್ಮಾನಿಸಲ್ಪಡುತ್ತವೆ.
ವಠಾರದ ಬಡವರಿಗೆ ಹಣ ಕಡಿಮೆ ಇದ್ದು ಸಮಯ ಹೆಚ್ಚಿದ್ದಿದ್ದರಿಂದ ಕಣ್ಣಿಗೆ ಕಣ್ಣು, ಮಾತಿಗೆ ಮಾತು ಸಂಧಿಸುತ್ತಿದ್ದವು.


ಅಪಾರ್ಟ್ಮೆಂಟ್ ಗಳಲ್ಲಿ ಉಲ್ಟಾಪರಿಸ್ಥಿತಿ. ಅವರು ಸಮಯವನ್ನೇ ಹಣವಾಗಿ ಪರಿವರ್ತಿಸುತ್ತಿರುತ್ತಾರೆ. ಹಾಗಾಗಿ ಇಲ್ಲಿ ವಾಟ್ಸ್ ಆಪ್ ಗ್ರೂಪ್ ಗಳು ಮಾತಾಡಿ ಅಸೋಸಿಯೇಷನ್ ಮೀಟಿಂಗ್ ಗಳಲ್ಲಿ , ಲೇಡಿಸ್ ಕ್ಲಬ್ ಗಳಲ್ಲಿ ಓಬ್ಬರಿಗೊಬ್ಬರು ಸಂದಿಸಲು ಸಮಯ ನಿಗದಿಮಾಡಿಕೊಡುತ್ತವೆ.
ವಠಾರದಲ್ಲಿ 500-1000 ದುಡಿಯುವ ಬಡವರಿರುತ್ತಿದ್ದರು. ಅಪಾರ್ಟ್ಮೆಂಟ್’ ನಲ್ಲಿ ಮತ್ತಷ್ಟು ಶೂನ್ಯಗಳನ್ನು ಸೇರಿಸಿಕೊಂಡು 500000-600000 ದುಡಿಯುವ ಶ್ರೀಮಂತರೆ ಹೆಚ್ಚು. ಗೇಟನ್ನು ಕಾಯುವ ಸೆಕ್ಯೂರಿಟಿಯಿಂದ ಹಿಡಿದು ಮಾತು ಬಾರದ ಸಿಸಿ ಕ್ಯಾಮರಾಗಳತನಕ ಎಲ್ಲರ ಮನೆಯ ಆಗಮನ ನಿರ್ಗಮನ, ಆಗಮಿಸುವವರು ನಿರ್ಗಮಿಸುವವರು ಎಲ್ಲರಿಗೂ ಗೊತ್ತು. ಆದರೆ ಎಲ್ಲಿ ಏನೇ ಎಡವಟ್ಟು ನಡೆದರು ಯಾರೂ ಬಾಯಿಬಿಡುವುದಿಲ್ಲ. “ದೊಡ್ಡವರ ಮನೆಯ ವಿಷಯ ನಮಗ್ಯಾಕೆ” ಎನ್ನುವ ಎಚ್ಚರಿಕೆ. ಯಾವುದಾದರು ಅಚಾತುರ್ಯ ಸಂಭವಿಸಿ ಪೊಲೀಸ್ ವರೆಗೂ ವಿಷಯ ಹೋದಾಗ ಮಾತ್ರ ಹಾರ್ಡ್ ಡಿಸ್ಕ್ ನ್ನ ಎತ್ತಿರದಿದ್ದರೆ ಸಿಸಿ ಕ್ಯಾಮರಾಗಳು ಯಾವುದೇ ಮುಲಾಜಿಲ್ಲದೆ ತಮಗೆ ತಿಳಿದಿದ್ದನ್ನ ಹೇಳಿಬಿಡುತ್ತವೆ.
ತಲೆಮಾರಿನಿಂದ ತಲೆಮಾರಿಗೆ ವಿಹಾರ ಮಾಡಹೋದರೆ ಬದಲಾವಣೆಗಳೇನು? ಅದೆ. ಜಸ್ಟ್ ಅದೆ. ರೂಪ ರೂಪಗಳನ್ನು ದಾಟಿ ರೂಪಾಂತರವಾಗಿ ಮತ್ತಲ್ಲಿಗೇ ಬಂದುನಿಲ್ಲುವ ವೇಷ ಭೂಷಣಗಳು.
ಅರಿವೆಯನ್ನೇ ಕಂಡುಹಿಡಿಯದಿದ್ದ ಕಾಲದಲ್ಲಿ, ಮೊದಲಿಗೆ ಮನುಷ್ಯ ಬೆತ್ತಲೆ ಓಡಾಡುತ್ತಿದ್ದ. ಮೈ ಮುಚ್ಚಿಕೊಳ್ಳಬೇಕು ಎಂದೆನಿಸಿದಾಗ ನಂತರ ಮರದ ಎಲೆಗಳನ್ನು ವಸ್ತ್ರ ಮಾಡಿಕೊಂಡು ಅದಾದ ನಂತರ ಬಟ್ಟೆಯನ್ನು ಕಂಡುಕೊಂಡ.
ಮೊದಲಿಗೆ ಸ್ತನಗಳನ್ನಷ್ಟೇ ಮುಚ್ಚಿಕೊಳ್ಳುತ್ತಿದ್ದ ಕುಪ್ಪಸ ನಂತರ ತುಂಬುತೋಳಿನ ಉದ್ದಕ್ಕೂ ಬಂದು ಪೂರಾ ಮುಚ್ಚಿಕೊಂಡಿತು. ಹೊಸ ಡಿಸೈನ್ ಎಂಬ ಹೆಸರಿನಲ್ಲಿ ಅರ್ಧತೋಳು, ಮೆಗಾ ಸ್ಲೀವ್ಸ್, ಸ್ಲೀವ್ ಲೆಸ್, ಕಾಲರ್ ಲೆಸ್ ಹೀಗೆ ಎಲ್ಲಾ ರೂಪಂತರಗಳನ್ನು ಹೊಂದಿ ನ್ಯೂ ಟ್ರೆಂಡ್ ಎಂಬ ಹೆಸರಿನಲ್ಲಿ ಮತ್ತೆ ಮೊದಲಿನ ತುಂಬುತೋಳಿಗೆ ಬಂದುನಿಂತಿದೆ. ಪುರುಷರು ಪೂರಾ ಮುಚ್ಚಿಕೊಂಡು ಮಹಿಳೆಯರು ಅರ್ಧ ಬಿಚ್ಚಿಕೊಂಡು ನಟಿಸುವುದು ಜಾಹಿರಾತು – ಚಲನಚಿತ್ರಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆಧುನಿಕತೆಯ ಹೆಸರಿನಲ್ಲಿ ಮಹಿಳೆ, ಮತ್ತೆ ಆದಿಮಾನವನ ಬಟ್ಟೆರಹಿತ ಹಂತಕ್ಕೆ ಹೋಗುತ್ತಿದ್ದಾಳೆ.
ಹಾಗೆಯೇ ಸಿಂಧೂರವು ಕೂಡಾ. ಮೊದಲಿಗೆ ದೊಡ್ಡ ಸಿಂಧೂರ ಲಾಲಾಟವನ್ನ ಸಿಂಗಾರಗೊಳಿಸುತ್ತಿತ್ತು. ನಂತರ ಅಕಾರಗಳು ಬದಲಾಗಿ ಸಣ್ಣದಾಗಿ ದೊಡ್ಡದಾಗಿ ಮತ್ತೆ ದೊಡ್ಡ ಗಾತ್ರದ ತಿಲಕವೇ ಟ್ರೆಂಡ್ ಆಗಿಬಿಟ್ಟಿದೆ.
ಹಳೆಯ ವಯರ್ ಬ್ಯಾಗಿಗೆ ಮರದ ಹಿಡಿ ಹಾಕಿ ಹೊಸದು ಎನ್ನುತ್ತಾರೆ. ಹಳೆಯ ಮಣ್ಣಿನ ಮಡಿಕೆಯ ಪದ್ಧತಿಗೆ ಮತ್ತೆ ಹಿಂದುರುಗಿ ಪಾಟ್ ಕುಕ್ಕರ್ ಮಾಡಿದ್ದಾರೆ.
ಬಡತನದಿಂದ ಹರಿದ ಬಟ್ಟೆ ಹಾಕುತ್ತಿದ್ದ ದಿನಗಳಿಂದ ಅತೀ ಹೆಚ್ಚು ಹಣ ಕೊಟ್ಟು ಹರಿದ ಬಟ್ಟೆ ಕೊಂಡುಕೊಳ್ಳುವ ಟ್ರೆಂಡ್ ಬಂದಿದೆ.
ಮೊದಲೇ ಬೇನೆ ಬಂದ ತಕ್ಷಣ ಕೊಡುತ್ತಿದ್ದ ಗಿಡಮೂಲಿಕೆಗಳು ಇವಾಗ ಸ್ಟ್ಯಾಂಡರ್ಡ್ ಆಯುರ್ವೇದಿಕ್ ಔಷಧಿಯಾಗಿದೆ. ಗಾಯವಾದ ತಕ್ಷಣ ಹಾಕುತ್ತಿದ್ದ ಮಣ್ಣು, ಇವಾಗ ಮಡ್ ತೆರಪಿಯಾಗಿದೆ.
ಮೊದಲಿಗೆ ಬರಿಗಾಲಲ್ಲಿ ನಡೆಯುತ್ತಿದ್ದ ಮನುಷ್ಯ, ನಂತರ ಚಪ್ಪಲಿ ಹಾಕಿದ. ನಂತರ ಶೂ ಅದೂ ಇದೂ ಬಂದವು. ನಂತರ ಸೈಕಲ್, ಸ್ಕೂಟರ್, ಕಾರು ವಿಮಾನ ಎಲ್ಲವನ್ನೂ ಹತ್ತಿದ. ಆದರೆ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಮತ್ತೆ ಬರಿಗಾಲಲ್ಲಿ ನಡೆಯಬೇಕಾದ ಪರಿಸ್ಥಿತಿ ಬಂದೇಬಿಟ್ಟಿತು.
ಮತ್ಯಾವುದು ಹೊಸತು. ಮತ್ತೇನು ಹೊಸತು
ಎಷ್ಟೇ ವಿಹರಿಸಿಬಂದರು ಎಲ್ಲವೂ ಅದೆ.
ಅವುಗಳಿಗೆ ಕೊಡುತ್ತಿರುವ ಹೆಸರು ಮಾತ್ರ ಹೊಸತು ಅಷ್ಟೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅ.೭ರಿಂದ ರೈತರಿಗೆ ಸಾವಯವ ಕೃಷಿ ಉಚಿತ ತರಬೇತಿ

ಹಿರಿಯರ ಜೀವನಾನುಭವ ಸದೃಢ ಸಮಾಜ ನಿರ್ಮಾಣಕ್ಕೆ ಅಗತ್ಯ

ಆಲಮಟ್ಟಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಆಗ್ರಹ

ಕಬ್ಬಿನ ಗದ್ದೆಯ ಮರೆಯಲ್ಲಿ ಗಾಂಜಾ ಬೆಳೆ! ಆರೋಪಿ ಬಂಧನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅ.೭ರಿಂದ ರೈತರಿಗೆ ಸಾವಯವ ಕೃಷಿ ಉಚಿತ ತರಬೇತಿ
    In (ರಾಜ್ಯ ) ಜಿಲ್ಲೆ
  • ಹಿರಿಯರ ಜೀವನಾನುಭವ ಸದೃಢ ಸಮಾಜ ನಿರ್ಮಾಣಕ್ಕೆ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಕಬ್ಬಿನ ಗದ್ದೆಯ ಮರೆಯಲ್ಲಿ ಗಾಂಜಾ ಬೆಳೆ! ಆರೋಪಿ ಬಂಧನ
    In (ರಾಜ್ಯ ) ಜಿಲ್ಲೆ
  • ಸಾಮಾಜಿಕ ಭದ್ರತಾ ಪಿಂಚಣಿ ಪುನರಾರಂಭಕ್ಕೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಸೌಹಾರ್ದ ಸಮಾಜ ನಿರ್ಮಾಣಕ್ಕೆ ಗಾಂಧಿ ಮಾರ್ಗವೇ ದಾರಿದೀಪ
    In ವಿಶೇಷ ಲೇಖನ
  • ಹ್ಯಾಂಡ್‌ಬಾಲ್‌: ಸತತ 3ನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಬೆವರಿನ ಅನ್ನದ ಮಹತ್ವ
    In ವಿಶೇಷ ಲೇಖನ
  • ವಠಾರ – ವಿಸ್ತಾರ – ವಿಹಾರ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 01,2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.