Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎನ್ನೆಸ್ಸೆಸ್ ಸಂಸ್ಥಾಪನಾ ದಿನಾಚರಣೆ & ‘ಏಕ್ ಮುಟ್ಟಿ ಅನಾಜ್’ ಅಭಿಯಾನಕ್ಕೆ ಚಾಲನೆ

ಆರೋಗ್ಯ ರಕ್ಷಣೆಯಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಅನನ್ಯ

ಕೋರ್ಟ್ ಗೆ ಅಲೆದಾಡಿ ನೆಮ್ಮದಿ ಕಳೆದುಕೊಳ್ಳಬೇಡಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಚುನಾವಣಾ ಆಯುಕ್ತ ದಲಿತರಾಗಿರುವುದು ಕಾಂಗ್ರೆಸ್ ಅಸಹನೆಗೆ ಕಾರಣ
(ರಾಜ್ಯ ) ಜಿಲ್ಲೆ

ಚುನಾವಣಾ ಆಯುಕ್ತ ದಲಿತರಾಗಿರುವುದು ಕಾಂಗ್ರೆಸ್ ಅಸಹನೆಗೆ ಕಾರಣ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆರೋಪ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಂದ್ರಕುಮಾರ ಓರ್ವ ದಲಿತ ಪ್ರತಿಭಾವಂತ ಅಧಿಕಾರಿ. ಓರ್ವ ದಲಿತ ವ್ಯಕ್ತಿ ಮುಖ್ಯ ಚುನಾವಣಾ ಆಯುಕ್ತರಾಗಿರುವುದು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ಅವರ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅವರು, ಈ ಹಿಂದೆ ಬಾಬು ಜಗಜೀವನರಾಂ ಅವರು ಪ್ರಧಾನಿಯಾಗುತ್ತಾರೆ ಎಂದು ಸಹಿಸಿಕೊಳ್ಳದೇ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು, ಈಗ ದಲಿತ ಸಮುದಾಯದ ವ್ಯಕ್ತಿ ಈ ಉನ್ನತ ಹುದ್ದೆಯಲ್ಲಿ ಕೂರುವುದು ಅವರಿಗೆ ಸರಿ ಇರಲಿಲ್ಲ, ದಲಿತ ಅಷ್ಟೇ ಮುಸಲ್ಮಾನರೂ ಉನ್ನತ ಹುದ್ದೆಯಲ್ಲಿರಬಾರದು ಎನ್ನುವುದು ಕಾಂಗ್ರೆಸ್‌ನ ಕೀಳುಮಟ್ಟದ ಮನಸ್ಥಿತಿ, ಹೀಗಾಗಿಯೇ ಜ್ಞಾನೇಂದ್ರಕುಮಾರ್ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದರು.
ನ್ಯಾಯಾಲಯದಲ್ಲಿಯೂ ಬೇರೆ ಬೇರೆ ಪೀಠ ಇರುತ್ತದೆ, ಒಂದು ಪೀಠ ಇನ್ನೊಂಧು ತೀರ್ಪು, ಇನ್ನೊಂದು ಪೀಠ ಇನ್ನೊಂದು ತೀರ್ಪು ನೀಡುತ್ತದೆ, ಇದು ಅಭಿಪ್ರಾಯ, ಅದೇ ರೀತಿ ಚುನಾವಣಾ ಆಯುಕ್ತರ ಅಭಿಪ್ರಾಯ ಬೇಧ ಇರಬಹುದು ಎಂದರು.
ಅಲ್ಪಸಂಖ್ಯಾತ ಮುಸ್ಲಿಂರು ಹಾಗೂ ದಲಿತ ಬಾಂಧವರು ಕೇವಲ ಕಾಂಗ್ರೆಸ್ ವೋಟ್ ಬ್ಯಾಂಕ್, ನಿಜಕ್ಕೂ ಈ ದೇಶದ ಮುಸಲ್ಮಾನಿರಿಗೆ ಹಾಗೂ ದಲಿತರಿಗೆ ಅನ್ಯಾಯವಾಗಿದ್ದು ಕಾಂಗ್ರೆಸ್‌ನಿಂದ ಎಂದರು.
ಓರ್ವ ಪ್ರತಿಭಾವಂತ ವಿದ್ಯಾರ್ಥಿ, ಅಸ್ಪೃಶ್ಯ ಸಮುದಾಯದಿಂದ ಬಂದ ವ್ಯಕ್ತಿ ಚುನಾವಣಾ ಆಯೋಗದಂತಹ ಶ್ರೇಷ್ಠ ಹುದ್ದೆಯಲ್ಲಿರುವುದು ಕಾಂಗ್ರೆಸ್‌ಗೆ ಸಹನೆಯಾಗುತ್ತಿಲ್ಲ ಎಂದರು.
ಚುನಾವಣಾ ಆಯೋಗದ ಆಯುಕ್ತರ ಮೇಲೆ ವಿನಾಕಾರಣ ಆರೋಪ ಹೊರೆಸಿವ ಮೂಲಕ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧೀ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಇರಿಸುವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುವಲ್ಲಿ ತೊಡಗಿದ್ದಾರೆ, ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿರದೇ ಹೋಗಿದ್ದರೆ ನೀವು ಹೇಗೆ ಗೆದ್ದಿರಿ? ನಿಮ್ಮ ಸಹೋದರಿ ವೈಯನಾಡಿನಲ್ಲಿ ಹೇಗೆ ಗೆದ್ದರು? ಎಂದು ಪ್ರಶ್ನಿಸಿದರು.
ಕೆಲಸಕ್ಕೆ ಬಾರದ ಕ್ರೇಜ್ರಿವಾಲ್ ಈ ಕಾಂಗ್ರೆಸ್‌ನವರ ಜೋಡಿ ಕೂಡಿದ್ದಾರೆ, ಈ ಹಿಂದೆ ನವದೆಹಲಿ, ಪಂಜಾಬ್‌ನಲ್ಲಿ ಆಪ್ ಹೇಗೆ ಗೆದ್ದಿತು? ಇದನ್ನು ಸಹ ಅವರು ಬಹಿರಂಗಪಡಿಸಬೇಕು ಎಂದರು.
ವಿದೇಶ ಪೌರತ್ವದ ಭೂತ ಈ ನಕಲಿ ಗಾಂಧೀ ಕುಟುಂಬದ ಸದಸ್ಯರಿಗೆ ಬೆನ್ನು ಹತ್ತಿದೆ, ಇದನ್ನು ಡೈವೇರ್ಟ್ ಮಾಡುವ ಉದ್ದೇಶದಿಂದ ಈ ಎಲ್ಲ ವಿಷಯಗಳನ್ನು ಅವರು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ದೂರಿದರು.

ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ

ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ೧೮ ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಿದ್ದೇವೆ ಎಂದು ಬಿಜೆಪಿ ಪಾಲಿಕೆ ಸದಸ್ಯರು ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ಅಸಂಬದ್ಧವಾಗಿ ನಡೆದುಕೊಂಡಿರುವುದು ಯಾರೇ ಆಗಲಿ ಅದು ತಪ್ಪು, ಆದರೆ ನಮ್ಮ ಪಕ್ಷದಿಂದ ಇ ನಡೆ ಅನುಸರಿಸಲಿಲ್ಲ. ಅದು ಪಕ್ಷದ ನಿಲುವಲ್ಲ, ಮೋಸದಾಟ ಯಾರೇ ಮಾಡಿದರೂ ಸಹ ಅದು ತಪ್ಪು, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಆದರೆ ನಮ್ಮ ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ, ಅಷ್ಟೂ ಮೀರಿ ಯಾರೇ ಇರಲಿ ಅವರು ಸಂವಿಧಾನದಿಂದ ದೊಡ್ಡವರೇನಲ್ಲ ಎಂದು ಸಂಸದ ಕಾರಜೋಳ ಪ್ರತಿಕ್ರಿಯೆ ನೀಡಿದರು.

ಪ್ರತಿ ಜಿಲ್ಲೆಗೆ ೧೦೦ ಕೋಟಿ ರೂ. ಪ್ಯಾಕೇಜ್ ಘೋಷಿಸಿ

“ಬರ ನಿರ್ವಹಣೆಯನ್ನು ನಿಭಾಯಿಸುವಲ್ಲಿ ಸರ್ಕಾರ ಯವ ತಯಾರಿಯೂ ಮಾಡಿಕೊಂಡಿಲ್ಲ, ನೀರಿಲ್ಲ, ವಿದ್ಯುತ್ ಇಲ್ಲ, ಮೇವಿಲ್ಲ, ಕೂಡಲೇ ಲೋಡಶೆಡ್ಡಿಂಗ್ ನಿಲ್ಲಿಸಿ ವಿದ್ಯುತ್ ಸಮರ್ಪಕ ಪೂರೈಕೆಗೆ ಆದ್ಯತೆ ನೀಡಿ, ಕೂಡಲೇ ಪ್ರತಿ ಜಿಲ್ಲೆಗೆ ೧೦೦ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಇದರಲ್ಲಿ ಗೋಶಾಲೆ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಸಾಧ್ಯ.”

– ಗೋವಿಂದ ಕಾರಜೋಳ
ಚಿತ್ರದುರ್ಗ ಸಂಸದರು

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎನ್ನೆಸ್ಸೆಸ್ ಸಂಸ್ಥಾಪನಾ ದಿನಾಚರಣೆ & ‘ಏಕ್ ಮುಟ್ಟಿ ಅನಾಜ್’ ಅಭಿಯಾನಕ್ಕೆ ಚಾಲನೆ

ಆರೋಗ್ಯ ರಕ್ಷಣೆಯಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಅನನ್ಯ

ಕೋರ್ಟ್ ಗೆ ಅಲೆದಾಡಿ ನೆಮ್ಮದಿ ಕಳೆದುಕೊಳ್ಳಬೇಡಿ

ಕುಸ್ತಿ ಅಖಾಡದಲ್ಲಿ ಚಿಕ್ಕಪಡಸಲಗಿ ಶಾಲೆ ವಿದ್ಯಾರ್ಥಿಗಳ ಸಾಧನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎನ್ನೆಸ್ಸೆಸ್ ಸಂಸ್ಥಾಪನಾ ದಿನಾಚರಣೆ & ‘ಏಕ್ ಮುಟ್ಟಿ ಅನಾಜ್’ ಅಭಿಯಾನಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಆರೋಗ್ಯ ರಕ್ಷಣೆಯಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಅನನ್ಯ
    In (ರಾಜ್ಯ ) ಜಿಲ್ಲೆ
  • ಕೋರ್ಟ್ ಗೆ ಅಲೆದಾಡಿ ನೆಮ್ಮದಿ ಕಳೆದುಕೊಳ್ಳಬೇಡಿ
    In (ರಾಜ್ಯ ) ಜಿಲ್ಲೆ
  • ಕುಸ್ತಿ ಅಖಾಡದಲ್ಲಿ ಚಿಕ್ಕಪಡಸಲಗಿ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಕೇಂದ್ರ ಸಚಿವರ ಮನೆ ಎದುರು ಪ್ರತಿಭಟನೆ :ಪೂಜಾರಿ
    In (ರಾಜ್ಯ ) ಜಿಲ್ಲೆ
  • ಚಿಮ್ಮಲಗಿ ಪಶ್ಚಿಮ ಕಾಲುವೆಯಲ್ಲಿ ಅಕ್ರಮ ಪಂಪ್‌ಸೆಟ್ ಹಾವಳಿ
    In (ರಾಜ್ಯ ) ಜಿಲ್ಲೆ
  • ಸೆ.೨೯ ರಂದು ಕೇಂದ್ರ ಸಚಿವ ಜೋಶಿ ಮನೆಗೆ ಮುತ್ತಿಗೆ
    In (ರಾಜ್ಯ ) ಜಿಲ್ಲೆ
  • ಚಡಚಣವನ್ನು ತೀವ್ರ ಬರವೆಂದು ಘೋಷಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಪೋಷಿಸಿ :ಕರ್ನಲ್ ವಂಶಿ
    In (ರಾಜ್ಯ ) ಜಿಲ್ಲೆ
  • ಪ್ರವಾಸೋದ್ಯಮದಿಂದ ಉದ್ಯೋಗಾವಕಾಶ ಸೃಷ್ಟಿ :ಎಡಿಜಿಪಿ ಆರ್.ಹಿತೇಂದ್ರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.