ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ಎನ್ ಎಸ್ ಎಸ್ ಘಟಕ ೧ ಮತ್ತು ೨ ರ ಸಹಯೋಗದಲ್ಲಿ ಸೆ.೨೪ ರಂದು ಹಮ್ಮಿಕೊಳ್ಳಲಾಗಿದ್ದ ಎನ್ ಎಸ್ ಎಸ್ ಸಂಸ್ಥಾಪನಾ ದಿನಾಚರಣೆ ಮತ್ತು ‘ಏಕ್ ಮುಟ್ಟಿ ಅನಾಜ್’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ವಿಜಯಪುರದ ಎನ್ ಎಸ್ ಎಸ್ ಜಿಲ್ಲಾ ಸಂಯೋಜಕ ಡಾ. ಗಂಗಾಧರ್ ಅಗಸರ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ತೊಡಗಿಸಿಕೊಂಡು ಸಮಾಜ ಸೇವೆಗೆ ಮುಂದಾಗಬೇಕು. ಸಾಮಾಜಿಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ‘ಏಕ್ ಮುಟ್ಟಿ ಅನಾಜ್’ ಅಭಿಯಾನದಡಿಯಲ್ಲಿ ಆಹಾರ ದವಸ ಧಾನ್ಯಗಳನ್ನು ಸಂಗ್ರಹಿಸಿ ಅಗತ್ಯವಿರುವವರಿಗೆ ವಿತರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎ. ಟಿ ಶ್ರೀನಿವಾಸ್. ಐಕ್ಯೂಎಸಿ ಸಂಯೋಜಕ ಡಾ. ಪಿ. ಎಸ್. ಪಾಟೀಲ್ ಎನ್ ಎಸ್ ಘಟಕ ೧ & ೨ ರ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಮಿಲನ್ ರಾಥೋಡ್, ಡಾ. ತರನ್ನುಮ್ ಜಬೀನ್ ಖಾನ್ ಸೇರಿದಂತೆ ಹಲವರಿದ್ದರು.

