ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪ್ರಸಕ್ತ ವರ್ಷದ ಕಬ್ಬಿಗೆ 5500 ನಿಗದಿ ಮಾಡುವದು, ಎಂ.ಎಸ್.ಪಿ ಜಾರಿಗೊಳಿಸುವದು, 100ರಷ್ಟು ಎತಿಸಾಲ ಖರಿದಿಸುವಂತೆ ಆಗ್ರಹಿಸಿ ರೈತರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ರೈತ ಸಂಘದ ಗೌರವ ಅಧ್ಯಕ್ಷ ಶಶಿಧರ ನಾಯ್ಯೋಡಿ ಹೇಳಿದರು.
ಶನಿವಾರ ಪಟ್ಟಣದಲ್ಲಿ ರೈತರ ಸಭೆಯ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ, ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ಮಹಾರಾಷ್ಟ್ರದ ಕಬ್ಬು ಬೆಳಗಾರ ಸಂಘದ ಅಧ್ಯಕ್ಷ ರಾಜು ಶೆಟ್ಟಿ ನೇತೃತ್ವದಲ್ಲಿ ಸಾವಿರಾರು ಸಂಖ್ಯೆ ರೈತರೊಂದಿಗೆ ಇದೆ ತಿಂಗಳು 29ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಪ್ರತಿಭಟನೆಯಲ್ಲಿ ಆಲಮೇಲ ತಾಲೂಕಿನಿಂದ ಸುಮಾರು ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಮಾಂತೇಶ ಕತ್ತಿ, ಮಹೇಶ ಹೊನ್ನಳ್ಳಿ, ಇಮ್ರಾನ ಯಲಗಾರ, ರಾಜಕುಮಾರ ಮೇತ್ರಿ, ಬಾಳು ಕುಂಬಾರ, ರಾಮು ಲಾವಟೆ, ಈರಪ್ಪ ಮೇಟಿ, ಶಿವಯೋಗಿ ಕತ್ತಿ, ನಬಿ ಜಮಾದಾರ, ನಿಂಬೋಜಿ ಚೋರಮಲ್ಲ, ಶರಣು ತಳವಾರ, ದೇವಿಂದ್ರ ಮಾಡ್ಯಾಳ, ಪಂಡಿತ ಲಾವಟೆ, ಸೋಮು ಆಸಂಗಿಹಾಳ, ಅಂಬೋಜಿ ಬಂಡಗಾರ, ರಾಜು ಬಿರಾದಾರ ಮುಂತಾದವರು ಇದ್ದರು.

