ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೃಕ್ಷ ಅಭಿಯಾನ ಪ್ರತಿಷ್ಠಾನದ ಅಂಗವಾಗಿ ಐತಿಹಾಸಿಕ ವಿಜಯಪುರ ನಗರದಲ್ಲಿ ಡಿಸೆಂಬರ್ 13ರಂದು ನಡೆಯಲಿರುವ 7ನೇ ಆವೃತ್ತಿಯ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಂಗಳೂರಿನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಮತ್ತು ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ ಸದಸ್ಯರು ಪ್ರಮೋಷನ್ ಹಾಗೂ ನೋಂದಣಿ ಜಾಗೃತಿ ಅಭಿಯಾನ ನಡೆಸಿದರು.
ಬೆಂಗಳೂರು ಜಿಕೆವಿಕೆ ಕ್ಯಾಂಪಸ್, ಕಬ್ಬನ್ ಪಾರ್ಕ್, ಶಾಂಕಿ ಟ್ಯಾಂಕ್ ಏರಿಯಾ ಮತ್ತು ಆಡುಗೋಡಿ ಪೊಲೀಸ್ ಮೈದಾನದಲ್ಲಿ ವಿಸಿಜಿ ತಂಡ ಮತ್ತು ವೃಕ್ಷಥಾನ್ ಸಮಿತಿ ಸದಸ್ಯರು ಸ್ಥಳೀಯರನ್ನು ಭೇಟಿ ಮಾಡಿ, ವಿಜಯಪುರ ವೃಕ್ಷಥಾನ್ ಹೆರಿಟೇಜ್ ರನ್ ಕುರಿತು ಮಾಹಿತಿ ನೀಡಿ, ವಿಜಯಪುರದಲ್ಲಿ ನಡೆಯುವ ಈ ಓಟದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಈ ಜಾಗೃತಿ ಅಭಿಯಾನಕ್ಕೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರು ಭಾಗದಿಂದ ಹೆಚ್ಚಿನ ಸಂಖ್ಯೆಯ ಓಟಗಾರರು ಈ ಬಾರಿ ಭಾಗವಹಿಸುತ್ತಾರೆಂಬ ಭರವಸೆ ಇದೆ ಎಂದು ವೃಕ್ಷಥಾನ್ ರನ್ ಸಮಿತಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

