Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎನ್ನೆಸ್ಸೆಸ್ ಸಂಸ್ಥಾಪನಾ ದಿನಾಚರಣೆ & ‘ಏಕ್ ಮುಟ್ಟಿ ಅನಾಜ್’ ಅಭಿಯಾನಕ್ಕೆ ಚಾಲನೆ

ಆರೋಗ್ಯ ರಕ್ಷಣೆಯಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಅನನ್ಯ

ಕೋರ್ಟ್ ಗೆ ಅಲೆದಾಡಿ ನೆಮ್ಮದಿ ಕಳೆದುಕೊಳ್ಳಬೇಡಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಂತ–ಶರಣರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ
(ರಾಜ್ಯ ) ಜಿಲ್ಲೆ

ಸಂತ–ಶರಣರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಭಕ್ತಿ–ಆಧ್ಯಾತ್ಮದ ಸಂಗಮದಲ್ಲಿ ಬಾಡಗಿ ಜಾತ್ರಾ ಮಹೋತ್ಸವ | ಇಂಚಗೇರಿ ಮಠದ ಸ.ಸ. ಪ್ರಭುಜಿ ಮಹಾರಾಜ ಕರೆ

ಉದಯರಶ್ಮಿ ದಿನಪತ್ರಿಕೆ

ಬಾಗಲಕೋಟೆˌ (ಜಮಖಂಡಿ): ಬಾಹುಸಾಹೇಬ ಮಹಾರಾಜರ ಹೇಳಿದಂತೆ, ನಾಮ ತೆಗೆದುಕೊಳ್ಳಬೇಕು, ನಿಯಮಗಳನ್ನು ಪಾಲಿಸಬೇಕು. ಸದ್ಗುರುವಿಗೆ ಶರಣಾಗಬೇಕು, ಸದ್ಗುರುವಿನಿಂದ ಉಪದೇಶ ಪಡೆದುಕೊಳ್ಳಬೇಕು ಹಾಗೂ ಸದ್ಗುರುಗಳು ಹೇಳಿದ ಮಾರ್ಗದಲ್ಲಿ ನಡೆಯಬೇಕು. ಎಂದು ಇಂಚಗೇರಿ ಮಠದ ಸ.ಸ. ಪ್ರಭುಜಿ ಮಹಾರಾಜರು ಹೇಳಿದರು.
ಸಮೀಪದ ಬಾಡಗಿ ಗ್ರಾಮದಲ್ಲಿ ಸಿದ್ದಪುರುಷ, ಮಹಾನ್ ಧನ್ವಂತರಿ ಶ್ರೀ ಸ.ಸ. ಚನ್ನಸಂಗಮೇಶ್ವರ ಮಹಾರಾಜರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಸುವಿಚಾರ ಹಾಗೂ ರಥೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಂತ–ಶರಣರು ತಮ್ಮ ಬದುಕಿನ ಮೂಲಕ ಸಮಾಜಕ್ಕೆ ಸನ್ಮಾರ್ಗ ತೋರಿಸಿದ್ದಾರೆ. ಅವರ ವಚನ ಹಾಗೂ ತತ್ವಗಳನ್ನು ಕೇವಲ ಕೇಳುವುದಕ್ಕೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿ, ಗುರುಗಳು ತೋರಿಸುವ ಮಾರ್ಗವನ್ನು ನಂಬಿಕೆಯಿಂದ ಅನುಸರಿಸುವುದೇ ನಿಜವಾದ ಶರಣಾಗತಿ ಎಂದರು.
ಅಥಣಿ ಮಾಜಿ ಶಾಸಕ ಶಹಾಜಾನಂದ ಡೊಂಗರಗಾಂವ ಮಾತನಾಡಿ, ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯ ಆಶಯದಂತೆ ದೇಶದ ಗಡಿಯಲ್ಲಿ ನಿಂತು ರಾಷ್ಟ್ರವನ್ನು ರಕ್ಷಿಸುತ್ತಿರುವ ಸೈನಿಕರು ಹಾಗೂ ದೇಶದ ಅನ್ನದಾತರಾದ ರೈತರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಶಿಕ್ಷಕ ಬಿ. ಕೆ. ಮುಧೋಳ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬಾಡಗಿ ಮಠದ ಸಿದಲಿಂಗ ಸಾದು ಮಹಾರಾಜರು, ಚಿಕ್ಕಾಲಗುಂಡಿ ಮಠದ ಶಿವಶರಣಾನಂದ ಸ್ವಾಮೀಜಿ, ಕಕಮರಿ ಮಠದ ಆತ್ಮಾನಂದ ಸ್ವಾಮೀಜಿ, ಮಾಜಿ ಶಾಸಕ ಮಹೇಶ್ ಕುಮಟಳ್ಳಿ, ಬಾಗಲಕೋಟೆ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ನಿರ್ದೇಶಕ ಸಿದ್ಧರಾಮೇಶ್ವರ ಉಕ್ಕಲಿ, ಬಾಗಲಕೋಟೆ ಜಿಲ್ಲೆಯ ಉಪ ನಿರ್ದೇಶಕ ಮಲ್ಲನಗೌಡ ಝರೆ, ಸಿದ್ದು ಹಳ್ಳಿ, ಚನ್ನಪ್ಪ ನ್ಯಾಮಗೌಡ, ವಿಠ್ಠಲ ಮುಧೋಳ, ಗುರಪ್ಪ ನ್ಯಾಮಗೌಡ, ಮಹಾಂತೇಶ ಮಮದಾಪೂರ, ವೈದ್ಯರು, ಸೈನಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಾಜಿ ಹಾಗೂ ಹಾಲಿ ಸೈನಿಕರಿಗೆ ಸನ್ಮಾನ

ದೇಶದ ಗಡಿ ಕಾಯುವ ಮೂಲಕ ರಾಷ್ಟ್ರದ ಭದ್ರತೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಹಾಲಿ ಹಾಗೂ ಮಾಜಿ ಸೈನಿಕರನ್ನು ಗೌರವಿಸುವ ಸನ್ಮಾನ ಸಮಾರಂಭವು ಜಾತ್ರಾ ಮಹೋತ್ಸವದ ಅಂಗವಾಗಿ ಗೌರವ ಹಾಗೂ ಹೆಮ್ಮೆಯ ವಾತಾವರಣದಲ್ಲಿ ನಡೆಯಿತು.
ದೇಶಸೇವೆ ಸಲ್ಲಿಸುತ್ತಿರುವ ಹಾಗೂ ಸಲ್ಲಿಸಿ ನಿವೃತ್ತರಾದ ವೀರಯೋಧರಿಗೆ ಗೌರವ ಸಲ್ಲಿಸಿ, ಅವರ ತ್ಯಾಗ, ಸೇವೆ ಹಾಗೂ ಸಾಹಸವನ್ನು ಸ್ಮರಿಸಲಾಯಿತು.

“ರೈತನೆಂದರೆ ಇಡೀ ಸಮಾಜಕ್ಕೆ ಅನ್ನ ನೀಡುವ ಅನ್ನದಾತ. ಬಿಸಿಲು, ಮಳೆ, ಗಾಳಿ ಎನ್ನದೆ ಮಣ್ಣಿನೊಂದಿಗೆ ಬೆವರು ಸುರಿಸಿ ಬೆಳೆ ಬೆಳೆಯುವ ರೈತನ ಬದುಕಿಗೂ ಗೌರವ ನೀಡಿ. ಮಕ್ಕಳ ಭವಿಷ್ಯಕ್ಕೆ ನೌಕರಿಯಷ್ಟೇ ಮುಖ್ಯವಲ್ಲ; ದುಡಿಮೆ, ಸ್ವಾಭಿಮಾನ, ಜವಾಬ್ದಾರಿ ಮತ್ತು ನೆಲದ ನಂಟು ಕೂಡ ಮುಖ್ಯ. ಆದ್ದರಿಂದ ಮನೆಗೆ ಹೆಣ್ಣು ಕೇಳಲು ಬಂದಾಗ, ರೈತನನ್ನೂ ಗೌರವದಿಂದ ಪರಿಗಣಿಸಿ—ರೈತನಿಗೆ ಹೆಣ್ಣು ಕೊಡಿ, ರೈತನ ಬದುಕಿಗೆ ಬೆಂಬಲವಾಗಿ ನಿಲ್ಲಿ.”

– ಶಶಿಕಾಂತ ಗೂರುಜಿ
ರಾಜ್ಯ ರೈತ ಸಂಘದ ಗೌರವಾಧ್ಯಕ್ಷರು

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎನ್ನೆಸ್ಸೆಸ್ ಸಂಸ್ಥಾಪನಾ ದಿನಾಚರಣೆ & ‘ಏಕ್ ಮುಟ್ಟಿ ಅನಾಜ್’ ಅಭಿಯಾನಕ್ಕೆ ಚಾಲನೆ

ಆರೋಗ್ಯ ರಕ್ಷಣೆಯಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಅನನ್ಯ

ಕೋರ್ಟ್ ಗೆ ಅಲೆದಾಡಿ ನೆಮ್ಮದಿ ಕಳೆದುಕೊಳ್ಳಬೇಡಿ

ಕುಸ್ತಿ ಅಖಾಡದಲ್ಲಿ ಚಿಕ್ಕಪಡಸಲಗಿ ಶಾಲೆ ವಿದ್ಯಾರ್ಥಿಗಳ ಸಾಧನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎನ್ನೆಸ್ಸೆಸ್ ಸಂಸ್ಥಾಪನಾ ದಿನಾಚರಣೆ & ‘ಏಕ್ ಮುಟ್ಟಿ ಅನಾಜ್’ ಅಭಿಯಾನಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಆರೋಗ್ಯ ರಕ್ಷಣೆಯಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಅನನ್ಯ
    In (ರಾಜ್ಯ ) ಜಿಲ್ಲೆ
  • ಕೋರ್ಟ್ ಗೆ ಅಲೆದಾಡಿ ನೆಮ್ಮದಿ ಕಳೆದುಕೊಳ್ಳಬೇಡಿ
    In (ರಾಜ್ಯ ) ಜಿಲ್ಲೆ
  • ಕುಸ್ತಿ ಅಖಾಡದಲ್ಲಿ ಚಿಕ್ಕಪಡಸಲಗಿ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಕೇಂದ್ರ ಸಚಿವರ ಮನೆ ಎದುರು ಪ್ರತಿಭಟನೆ :ಪೂಜಾರಿ
    In (ರಾಜ್ಯ ) ಜಿಲ್ಲೆ
  • ಚಿಮ್ಮಲಗಿ ಪಶ್ಚಿಮ ಕಾಲುವೆಯಲ್ಲಿ ಅಕ್ರಮ ಪಂಪ್‌ಸೆಟ್ ಹಾವಳಿ
    In (ರಾಜ್ಯ ) ಜಿಲ್ಲೆ
  • ಸೆ.೨೯ ರಂದು ಕೇಂದ್ರ ಸಚಿವ ಜೋಶಿ ಮನೆಗೆ ಮುತ್ತಿಗೆ
    In (ರಾಜ್ಯ ) ಜಿಲ್ಲೆ
  • ಚಡಚಣವನ್ನು ತೀವ್ರ ಬರವೆಂದು ಘೋಷಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಪೋಷಿಸಿ :ಕರ್ನಲ್ ವಂಶಿ
    In (ರಾಜ್ಯ ) ಜಿಲ್ಲೆ
  • ಪ್ರವಾಸೋದ್ಯಮದಿಂದ ಉದ್ಯೋಗಾವಕಾಶ ಸೃಷ್ಟಿ :ಎಡಿಜಿಪಿ ಆರ್.ಹಿತೇಂದ್ರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.