Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ

ಅ.೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ

ತಾಲೂಕಾಧ್ಯಕ್ಷರಾಗಿ ಸುಂಗಠಾಣ ಆಯ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»’ಶ್ರಮದ ಅನ್ನ’ದ ಪರಿಕಲ್ಪನೆ ಪಾಲಿಸಬೇಕಿದೆ
ವಿಶೇಷ ಲೇಖನ

’ಶ್ರಮದ ಅನ್ನ’ದ ಪರಿಕಲ್ಪನೆ ಪಾಲಿಸಬೇಕಿದೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಸಂತೋಷ್ ರಾವ್ ಪೆರ್ಮುಡ.ಪಟ್ರಮೆ ಗ್ರಾಮ ಮತ್ತು ಅಂಚೆ,ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ದೇಶವು ಜಾಗತಿಕವಾಗಿ ಅಭಿವೃದ್ಧಿಯೆಡೆಗೆ ಸಾಗುತ್ತಿದ್ದಂತೆ ಮನುಷ್ಯನ ಆಯಸ್ಸು ಪ್ರತಿದಿನವೂ ಕಡಿಮೆಯಾಗುತ್ತಾ ಹೋಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಸಮರ್ಪಕ ಜೀವನಶೈಲಿ.


ಸಾಮಾಜಿಕವಾಗಿ ಬೆಳೆದಂತೆ, ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿ ಮತ್ತು ದಿನ ದಿನವೂ ಬದಲಾಗುತ್ತಿರುವ ಹವಾಮಾನದ ಕಾರಣದಿಂದ ಮನುಷ್ಯನ ಆರೋಗ್ಯ ಮತ್ತು ಜೀವಿತಾವಧಿಯು ಕಡಿಮೆಯಾಗುತ್ತಿದೆ. ಹಿಂದೆ 40-50 ವರ್ಷ ದಾಟಿದವರು ತಮ್ಮ ಪೋಷಕರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿದ್ದರೆ, ಇಂದು ಅದೇ ವಯಸ್ಸಿನ ಹೆತ್ತವರು ತಮ್ಮ ಮಕ್ಕಳನ್ನು ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ಮಕ್ಕಳಂತೂ ಬಾಲ್ಯದಿಂದಲೇ ಟಿ.ವಿಯ ದಾಸರಾಗಿ ತಮ್ಮ ಆರೋಗ್ಯವನ್ನು ಎಳವೆಯಿಂದಲೇ ಕಳೆದುಕೊಳ್ಳುತ್ತಿದ್ದಾರೆ. ಇದು ‘ದುಡ್ಡು ಕೊಟ್ಟು ಮಾರಿಯನ್ನು ಮನೆಗೆ ಕರೆತಂದಂತೆ.’ ಒಂದೆರಡು ಗಂಟೆಗಳ ಕಾಲ ನಿರಂತರವಾಗಿ ಟಿ.ವಿಯ ಮುಂದೆ ಕುಳಿತಿರುವುದು ಮತ್ತು ಒಂದು ಸಿಗರೇಟನ್ನು ಸೇದುವುದೂ ಸಮಾನ ಎಂದು ಮತ್ತು ನಿರಂತರವಾಗಿ ನಾಲ್ಕು ಗಂಟೆ ಕುಳಿತಲ್ಲೇ ಕುಳಿತಿದ್ದರೆ ಆತನ ಜೀವನದ ಇಪ್ಪತ್ತು ನಿಮಿಷ ಆಯಸ್ಸು ಕಡಿಮೆಯಾದಂತೆ ಎಂದು ಹೃದ್ರೋಗ ತಜ್ಞ ಡಾ.ಮಂಜುನಾಥ್ ಹೇಳುತ್ತಾರೆ.
ಮೊಬೈಲ್, ಟಿವಿ ಮತ್ತು ಕಂಪ್ಯೂಟರ್‌ನ ಅತಿಯಾದ ಗೀಳು ಒಂದು ರೀತಿಯಲ್ಲಿ ಖಾಯಿಲೆಯಲ್ಲದೆ ಇನ್ನೇನೂ ಅಲ್ಲ. ಇದೊಂದು ಖಾಯಿಲೆಯೆಂದು ಬಹುತೇಕ ರಾಷ್ಟ್ರಗಳು ಈಗಾಗಲೇ ಘೋಷಿಸಿವೆ. ಇದು ಭಾರತ ದೇಶದಲ್ಲಿ ಅತ್ಯಂತ ವೇಗವಾಗಿ ಹಬ್ಬುತ್ತಿದೆ. ಮಹಿಳೆಯರ ಜೀವಾಂಗ ರಚನೆ ಮತ್ತು ಜೀವಶಾಸ್ತ್ರದ ಪ್ರಕಾರ ಬಹುತೇಕ ಮಹಿಳೆಯರಿಗೆ ಹೃದಯ ಸಂಬಂಧಿ ರೋಗಗಳು ಬರುವುದಿಲ್ಲವೆಂದು ವಿಜ್ಞಾನ ಹೇಳುತ್ತದೆ. ಆದರೆ ಇಂದಿನ ಜೀವನ ಶೈಲಿ, ಆಹಾರ ಕ್ರಮಗಳು ಮತ್ತು ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡದ ಕಾರಣದಿಂದ ಮಹಿಳೆಯರಿಗೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದೆ. ಪಟ್ಟಣಗಳಲ್ಲಷ್ಟೇ ಬೀಡು ಬಿಟ್ಟಿದ್ದ ಹೃದಯಾಘಾತ ಮತ್ತು ಸಕ್ಕರೆ ಕಾಯಿಲೆಗಳು ಇಂದು ಹಳ್ಳಿಗಳಲ್ಲೂ ವ್ಯಾಪಿಸಿರುವುದು ದುರಂತವಲ್ಲದೆ ಮತ್ತೇನಲ್ಲ.
ಇಂದು ಪಟ್ಟಣಗಳಲ್ಲಂತೂ ವಾಯು ಮಾಲಿನ್ಯ ಮತ್ತು ಜಲಮಾಲಿನ್ಯದ ಪ್ರಭಾವವನ್ನು ಹೇಳತೀರದು. ಈ ಕಾರಣಗಳಿಂದ ನಿತ್ಯ ಪ್ರಾಪಂಚಿಕವಾಗಿ ಲೆಕ್ಕವಿಲ್ಲದಷ್ಟು ಮಕ್ಕಳು ಸಾಯುತ್ತಿದ್ದಾರೆ. ದೇಶದ ರಾಜಧಾನಿಯಾದ ದೆಹಲಿಯನ್ನಂತೂ ವಾಯಮಾಲಿನ್ಯದ ಕಾರಣದಿಂದ ಗ್ಯಾಸ್ ಛೇಂಬರ್ ಎಂದು ಸುಪ್ರೀಂ ಕೋರ್ಟ್ ಜರೆದಿದ್ದು ನಮಗೆಲ್ಲ ಗೊತ್ತೇ ಇದೆ. ನಮ್ಮ ದೇಶವು ಶ್ರಮರಹಿತ ಜೀವನದಿಂದಾಗಿ ಮತ್ತು ದೇಹಕ್ಕೆ ದೈಹಿಕ ವ್ಯಾಯಾಮಗಳಿಲ್ಲದೇ ಮಧುಮೇಹ ಖಾಯಿಲೆಯ ರಾಜಧಾನಿಯಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಜೀವನ ಶೈಲಿಯು ಹೀಗೇ ಮುಂದುವರೆದರೆ ಹೃದಯಾಘಾತದ ರಾಜಧಾನಿಯೂ ಆಗಿ ಹೊರಹೊಮ್ಮಲಿದೆ.
ಇಂದಿನ ಪೀಳಿಗೆ ‘ಕಡಿಮೆ ಶ್ರಮ ಹೆಚ್ಚಿನ ಸಂಬಳ’ಎನ್ನುವ ವ್ಯವಸ್ಥೆಗೆ ಜೋತುಬಿದ್ದಿದ್ದು, ಇದರಿಂದಾಗಿ ಒತ್ತಡದ ಕೆಲಸಗಳ ಹಿಂದೆ ಬಿದ್ದು ಗಳಿಸಿದ ಹಣವನ್ನೆಲ್ಲಾ ಆರೋಗ್ಯ ಸರಿಪಡಿಸಿಕೊಳ್ಳಲು ವ್ಯಯಿಸುತ್ತಿರುವುದು ದುರಂತವೇ ಸರಿ. ಬದಲಿಗೆ ಗಾಂಧೀಜಿ ಬೋಧಿಸಿ ಅನುಷ್ಠಾನಿಸಿದ ‘ಶ್ರಮದ ಅನ್ನ’ದ ಪರಿಕಲ್ಪನೆಯನ್ನು ನಾವೆಲ್ಲರೂ ಪಾಲಿಸಬೇಕಿದೆ. ಬೆವರು ಹರಿಸಿ ದುಡಿದರೆ ಮಾತ್ರ ಆ ದಿನ ತಾನು ಊಟ ಮಾಡುವೆ ಎಂಬ ನಿಯಮವನ್ನು ಪಾಲಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಮನುಷ್ಯನು ಆಲಸಿಯಾಗದೇ ಫಾಸ್ಟ್’ಫುಡ್ ವ್ಯಾಮೋಹದಿಂದ ಹೊರಬಂದು ದೇಹಕ್ಕೆ ಅಗತ್ಯವಿರುವ ಎಲ್ಲ ಪೋಷಕಾಂಶಗಳಿರುವ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು, ಅತಿಯಾದ ಮಾಂಸಾಹಾರವೂ ದೇಹಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ಅರಿಯಬೇಕು. ಇದ್ದದ್ದರಲ್ಲಿ ಖುಷಿಯಾಗಿ ಜೀವಿಸಿ ಎಲ್ಲರೊಂದಿಗೆ ಸಹಬಾಳ್ವೆ ನಡೆಸುತ್ತಾ, ಸರಳ ಜೀವನದ ಮೂಲಕ ತಕ್ಕಮಟ್ಟಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ

ಅ.೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ

ತಾಲೂಕಾಧ್ಯಕ್ಷರಾಗಿ ಸುಂಗಠಾಣ ಆಯ್ಕೆ

ಗುಬ್ಬೇವಾಡದ ಬಾಲಕ ಕಾಣೆ: ಪ್ರಕರಣ ದಾಖಲು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ
    In (ರಾಜ್ಯ ) ಜಿಲ್ಲೆ
  • ಅ.೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ
    In (ರಾಜ್ಯ ) ಜಿಲ್ಲೆ
  • ತಾಲೂಕಾಧ್ಯಕ್ಷರಾಗಿ ಸುಂಗಠಾಣ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಗುಬ್ಬೇವಾಡದ ಬಾಲಕ ಕಾಣೆ: ಪ್ರಕರಣ ದಾಖಲು
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿನಿಯರು ಸ್ವಾವಲಂಬಿಗಳಾಗಿ ಉತ್ತಮ ಬದುಕು ಕಟ್ಟಿಕೊಳ್ಳಲಿ
    In (ರಾಜ್ಯ ) ಜಿಲ್ಲೆ
  • ಸೆ.೨೫ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಯುರ್ವೇದವು ಗ್ರಾಮಗಳಿಗೂ ತಲುಪಲಿ :ಡಾ.ಸಂಬಣ್ಣಿ
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆಯಲ್ಲಿ ೨೧ ದಿನಗಳ ರೈತರ ಧರಣಿ ಹಿಂಪಡೆತ
    In (ರಾಜ್ಯ ) ಜಿಲ್ಲೆ
  • ಸೆ.೨೮ ರಂದು ರಾಠೋಡ ಜಾತ್ರಾಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಪೌರ ಕಾರ್ಮಿಕರ ಪಾತ್ರ ಮಹತ್ವದ್ದು :ಕೋಳಶೆಟ್ಟಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.