ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವನಬಾಗೇವಾಡಿ ಪಟ್ಟಣದ ವಜ್ರ ಹನುಮಾನ ನಗರ, ಕೇಶವ ನಗರ ಹಾಗೂ ರಾಧಾಕೃಷ್ಣ ನಗರಗಳ ಕೇಂದ್ರ ಬಿಂದುವಾಗಿರುವ ರಾಘವೇಂದ್ರ ಕುಲಕರ್ಣಿ ಲೇಔಟ್‌ನಲ್ಲಿನ ಸಿಎ ಸೈಟ್‌ಗಳನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವ ಕ್ರಮವನ್ನು ಖಂಡಿಸಿ, ಅವುಗಳನ್ನು ಎಲ್ಲಾ ಸಾರ್ವಜನಿಕರ ಬಳಕೆಗೆ ಮೀಸಲಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಖ್ಯ ಅಧಿಕಾರಿ ಪವಾರ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಸಿ.ಎ. ಸೈಟ್ ನಂಬರ:1878 ಕ/156 ಚೇರ್ಮನ್ ಗುರ್ಜಿ ಕಟ ಮುಸ್ಲಿಂ ಜಮಾತ ಬಸವನಬಾಗೇವಾಡಿ ಇವರಿಗೆ ಲೀಸ್ ಮೇಲೆ ಕೊಡಲು ಆಕ್ಷೇಪಣೆ ಇರುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದ್ದು, ಬೇಡಿಕೆ ಈಡೇರದಿದ್ದರೆ ಮೂರು ನಗರಗಳ ಸಾರ್ವಜನಿಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಸಿಎ ಸೈಟ್‌ಗಳ ಮಾಲೀಕರು ಹಾಗೂ ಸ್ಥಳೀಯ ಹಿರಿಯರು, ಅಶೋಕ ಹಾರಿವಾಳ, ಶಿವನಗೌಡ ಬಿರಾದಾರ, ರಾಘವೇಂದ್ರ ಕುಲಕರ್ಣಿ, ಮಲ್ಲು ಪಟ್ಟಣಶೆಟ್ಟಿ, ರಾಘು ಬಾವಿಕಟ್ಟಿ, ಈರಣ್ಣ ಪತ್ತಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

