೨೬೩೭ ಪ್ರಕರಣ ಇತ್ಯರ್ಥ | ಒಂದು ಕೋಟಿ ೭೧ ಲಕ್ಷ ರೂ. ಹಣ ಸಂದಾಯ | ಹಿರಿಯ ದಿವಾನಿ ನ್ಯಾಯಾಧೀಶ ಕೋಟಪ್ಪ ಕಾಂಬಳೆ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ವರ್ಷದ ಮೂರನೆಯ ಲೋಕ ಅದಾಲತನಲ್ಲಿ ವೈವಾಹಿಕ ಪ್ರಕರಣವನ್ನು ಇತ್ಯರ್ಥ ಪಡಿಸಲಾಗಿದೆ. ಪುಂಡಲೀಕ ತಮ್ಮಣ್ಣ ರೂಗಿಯವರು ತಮ್ಮ ಸಂಗಾತಿ ಭಾರತಿಯವರೊಂದಿಗೆ ಮರುಜೀವನ ನಡೆಸಲು ಕೊಟೆಪ್ಪ ಕಾಂಬಳೆ ಹಿರಿಯ ದಿವಾನಿ ನ್ಯಾಯಾಧೀಶರು ಸತಿ ಪತಿ ಒಂದುಗೂಡಿಸಿದರು.
ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ೨೬೩೭ ಪ್ರಕರಣಗಳು ಇತ್ಯರ್ಥ ಗೊಂಡಿವೆ ಮತ್ತು ಒಂದು ಕೋಟಿ ೭೧ ಲಕ್ಷ ರೂ ಸರಕಾರಕ್ಕೆ ಸಂದಾಯವಾಗಿದೆ ಎಂದು ಹಿರಿಯ ದಿವಾನಿ ನ್ಯಾಯಾಧೀಶ ಕೋಟಪ್ಪ ಕಾಂಬಳೆ ತಿಳಿಸಿದರು.
ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜಿ ಮೂಲಕ ನ್ಯಾಯ ಇತ್ಯರ್ಥದಿಂದ ನ್ಯಾಯಾಲಯಗಳಿಗೆ ಅಲೆದಾಟ ತಪ್ಪುತ್ತದೆ. ಪರಸ್ಪರ ಸೌಹಾರ್ಧ ಬೆಳೆಯುತ್ತದೆ. ಸಾರ್ವಜನಿಕರು ಸಹ ರಾಜಿ ಸಂಧಾನಕ್ಕೆ ಆದ್ಯತೆ ನೀಡಿ ಪ್ರಕರಣ ಇತ್ಯರ್ಥದ ಮೂಲಕ ನೆಮ್ಮದಿ ಜೀವನ ನಡೆಸಲು ಮುಂದೆ ಬರಬೇಕು ಎಂದರು.
ದಿವಾಣಿ ನ್ಯಾಯಾಧೀಶರು ಸುನೀಲಕುಮಾರ ಎಮ್.ಎಸ್, ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ವಿಕಾಶ ದಳವಾಯಿ ಇವರ ಸಮ್ಮುಖದಲ್ಲಿ ರೂಗಿ ದಂಪತಿಗಳು ಒಂದಾಗಿ ಪರಸ್ಪರ ಹೂ ಮಾಲೆ ಹಾಕಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು.
ಪಿ.ಜೆ.ಹಂಜಗಿ, ಎಮ್,ಎಮ್ ಕುಲಕರ್ಣಿ, ಸಹಾಯಕ ಸರಕಾರಿ ಅಭಿಯೋಜಕ ರಾಖಿ ಕಟ್ಟಿಮನಿ, ಎಸ್.ಆರ್.ಬಿರಾದಾರ, ಬಿ.ಎಸ್.ತಳವಾರ, ಆರ್.ಎಮ್ ಪಾಟೀಲ, ಡಿ.ಎಸ್. ಹಾಲಕವಡಿ, ವಿ.ಜಿ.ಗಾಯಕವಾಡ, ಶ್ರೀಮತಿ ಪಿ.ಬಿ.ಬಬಲೇಶ್ವರ, ಎಸ್.ಎಮ್ ಬಬಲಾದ ಮತ್ತಿತರಿದ್ದರು.

