ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ಡಿಪೋ-೩ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ವಿಜಯಪುರ–ಬಳ್ಳಾರಿ ನಡುವೆ ನೂತನ ನಾನ್ ಎ.ಸಿ. ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲಾಗಿದೆ.
ಸೆಪ್ಟೆಂಬರ್ ೧೭ರಿಂದ ಸೇವೆ ಆರಂಭವಾಗಿದ್ದು, ವಿಜಯಪುರದಿಂದ ಪ್ರತಿದಿನ ಬೆಳಿಗ್ಗೆ ೧೦ ಗಂಟೆಗೆ ಹೊರಡುವ ಬಸ್ ಸಂಜೆ ೬ ಗಂಟೆಗೆ ಬಳ್ಳಾರಿ ತಲುಪಲಿದೆ. ಬಸ್ ಪ್ರಯಾಣದ ದರವನ್ನು ಪ್ರತಿ ಪ್ರಯಾಣಿಕರಿಗೆ ರೂ.೬೬೦ ಎಂದು ನಿಗದಿಪಡಿಸಲಾಗಿದೆ.
ಪ್ರಯಾಣಿಕರಿಗೆ ಆರಾಮದಾಯಕ, ಸ್ವಚ್ಛ ಹಾಗೂ ಸುರಕ್ಷಿತ ಪ್ರಯಾಣದ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೆಕೆಆರ್‌ಟಿಸಿ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅವರು ಮನವಿ ಮಾಡಿದ್ದಾರೆ.
