ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿಜಯಪುರ ಕೃಷಿ ಮಹಾವಿದ್ಯಾಲಯವು
ಯಾಂತ್ರೀಕರಣದ ಮೂಲಕ ಸಿರಿಧಾನ್ಯ ಉತ್ಪಾದನೆ ಮತ್ತು ಸಂಸ್ಕರಣೆಗೆ ಪುನಶ್ಚೇತನ ಯೋಜನೆಯಡಿ ತಾತ್ಕಾಲಿಕ ಹುದ್ದೆಯ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಆಹ್ವಾನಿಸಿದೆ.
ಟೆಕ್ನಿಕಲ್,ಫೀಲ್ಡ್ ಅಸಿಸ್ಟೆಂಟ್ ತಾಂತ್ರಿಕ-ಕ್ಷೇತ್ರ ಸಹಾಯಕ ತಾತ್ಕಾಲಿಕ ಒಂದು ಹುದ್ದೆಗಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಥವಾ ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವೀಧರರಿಗೆ ಆದ್ಯತೆ ನೀಡಲಾಗುವುದು.
ನೇರ ಸಂದರ್ಶನ: ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಗಳು, ಮೂಲ ಪ್ರತ್ರಿಗಳು, ದೃಢೀಕೃತ ನಕಲು ಪ್ರತಿ ಹಾಗೂ ಇತ್ತೀಚಿನ ೨ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಸೆ. ೨೯ ರಂದು ಬೆಳಿಗ್ಗೆ ೧೦.೩೦ಕ್ಕೆ ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರ ಕಚೇರಿಯಲ್ಲಿ ನ ನಡೆಯಲಿರುವ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಯಾವುದೇ ಅರ್ಜಿಗಳನ್ನು ಮುಂಚಿತವಾಗಿ ಕಳುಹಿಸುವ ಅಗತ್ಯವಿರುವುದಿಲ್ಲ ಎಂದು ಕೃಷಿ ಮಹಾವಿದ್ಯಾಲಯ,ಎಂಜಿನಿಯರಿಂಗ್ ವಿಭಾಗದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
