ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೀರ್ಘಕಾಲದಿಂದ ಯಾವುದೇ ರೀತಿಯ ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿರುವ ಮುದ್ದೇಬಿಹಾಳ ತಾಲೂಕಿನ ೧೦ ಸಹಕಾರ ಸಂಘಗಳ ನೋಂದಣಿಯನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಮುದ್ದೇಬಿಹಾಳ ತಾಲೂಕಿನ ಸಮಾಪನಾಧಿಕಾರಿಗಳು ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಆರಂಭಿಸಿದ್ದು, ೭ ದಿನಗಳೊಳಗಾಗಿ ಆಕ್ಷೇಪಣೆ ಸಲ್ಲಿಸಲು ಕಾಲಾವಲಾಶ ನೀಡಲಾಗಿದೆ.
ಈ ಸಂಘಗಳು ತಮ್ಮ ಬೈಲಾಗಳ ಉದ್ದೇಶಗಳಂತೆ ಕಾರ್ಯನಿರ್ವಹಿಸದಿರುವುದರಿಂದ, ಇವುಗಳನ್ನು ಸಮಾಪನಗೊಳಿಸಲು ಹಕಾರ ಸಂಘಗಳ ಉಪ ನಿಬಂಧಕರು ಆದೇಶ ಹೊರಡಿಸಿ, ಸಮಾಪನಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.
ಈ ಸಹಕಾರ ಸಂಘಗಳ ಆಸ್ತಿ-ಪಾಸ್ತಿ, ಸಾಲ ಅಥವಾ ಬರತಕ್ಕ ಬಾಕಿ ಹಣದ ಕುರಿತು ಯಾವುದೇ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಆಕ್ಷೇಪಣೆಗಳಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ಈ ಪ್ರಕಟಣೆ ಹೊರಡಿಸಿದ ಏಳು ದಿನಗಳೊಳಗಾಗಿ ಮುದ್ದೇಬಿಹಾಳದ ಸಮಾಪನಾಧಿಕಾರಿಗಳು ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ.
ನಿಗದಿತ ಅವಧಿಯಲ್ಲಿ ಆಕ್ಷೇಪಣೆಗಳು ಬಾರದಿದ್ದರೆ, ನಿಯಮಾನುಸಾರ ಸಂಘಗಳ ನೋಂದಣಿ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು.
ನೋಂದಣಿ ರದ್ದತಿ ಪ್ರಕ್ರಿಯೆಯಲ್ಲಿರುವ ೧೦ ಸಹಕಾರ ಸಂಘಗಳಲಾದ: ಶ್ರೀ ಸೇವಾಲಾಲ್ ಪತ್ತಿನ ಸಹಕಾರ ಸಂಘ ನಿಯಮಿತ, ಮುದ್ದೇಬಿಹಾಳ. ಮುದ್ದೇಬಿಹಾಳ ಗ್ರಾಮೀಣದ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ನಿಯಮಿತ, ಮುದ್ದೇಬಿಹಾಳ. ಮುದ್ದೇಬಿಹಾಳ ತಾಲೂಕಾ ಬಸವೇಶ್ವರ ಶಿಕ್ಷಕರ, ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ, ಮುದ್ದೇಬಿಹಾಳ. ಡಾ. ಅಂಬೇಡ್ಕರ್ ರಾಜ್ಯ ಸರ್ಕಾರಿ ನೌಕರರ ಸಹಕಾರ ಸಂಘ ನಿಯಮಿತ, ಮುದ್ದೇಬಿಹಾಳ. ವಿಶ್ವಕರ್ಮ ಕುಶಲಕರ್ಮಿಗಳ ಸಹಕಾರ ಸಂಘ ನಿಯಮಿತ, ಮುದ್ದೇಬಿಹಾಳ. ಮುದ್ದೇಬಿಹಾಳ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ, ಮುದ್ದೇಬಿಹಾಳ. ವೀರೇಶನಗರ ಮೀನುಗಾರಿಕೆ ಸಹಕಾರ ಸಂಘ ನಿಯಮಿತ, ವೀರೇಶನಗರ, ತಾಲೂಕು: ಮುದ್ದೇಬಿಹಾಳ, ಜಿಲ್ಲೆ: ವಿಜಯಪುರ. ನೆಲಗೇಣ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘ ನಿಯಮಿತ, ಮುದ್ದೇಬಿಹಾಳ, ತಾಲೂಕು: ಮುದ್ದೇಬಿಹಾಳ, ಜಿಲ್ಲೆ: ವಿಜಯಪುರ. ತಂಗಡಗಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ನಿಯಮಿತ, ತಂಗಡಗಿ, ತಾಲೂಕು: ಮುದ್ದೇಬಿಹಾಳ, ಜಿಲ್ಲೆ ವಿಜಯಪುರ. ಸ್ತ್ರೀ ಶಕ್ತಿ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘ ನಿಯಮಿತ, ಮುದ್ದೇಬಿಹಾಳ, ತಾಲೂಕು: ಮುದ್ದೇಬಿಹಾಳ ಸಹಕಾರ ಸಂಘಗಳಿವೆ ಎಂದು ಸಮಾಪನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
