ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕರ್ನಾಟಕ ನೀರಾವರಿ ನಿಗಮ ನಿಯಮಿತ ಹಾಗೂ ಭೀಮಾ ಏತ ನೀರಾವರಿ ಸೊನ್ನ ಬ್ಯಾರೇಜ್ ಹಿನ್ನೀರಿನ ಭಾದ್ಯತ ಸ್ಥಳವಾದ ಕಡಣಿ ಗ್ರಾಮದಲ್ಲಿ ನಾಲ್ಕು ಮೂಲಭೂತ ಸೌಕರ್ಯಗಳಿಗೆ ಸುಮಾರು 2 ಕೋಟಿ 50 ಲಕ್ಷ ರೂಪಾಯಿಗಳ ಕಾಮಗಾರಿಗಳಿಗೆ ಶಾಸಕ ಅಶೋಕ ಮನಗೂಳಿ ಭವ್ಯ ಮೆರವಣಿಗೆ ಮೂಲಕ ಆಗಮಿಸಿ ಭೂಮಿ ಪೂಜೆ ನೆರವೇರಿಸಿದರು.
ನಂತರ ಶಾಸಕ ಮನಗೂಳಿ ಶ್ರೀ ಗಜಾನನ ಮಹಾಮಂಡಳಿಯವರಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಆಲಮೇಲ ಜನತೆಗೆ ಎರಡು ಗ್ಯಾರಂಟಿಗಳನ್ನು ಕೊಟ್ಟಿದ್ದೇನೆ ಒಂದು ತೋಟಗಾರಿಕೆ ಕಾಲೇಜು. ಎರಡನೇದು ಕಡಣಿಯ ಬ್ಯಾರೇಜ್ ನೀಡುವ ಮೂಲಕ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದ ಅವರು ಪಿ ಕೆಪಿಎಸ್ ಕಟ್ಟಡಕ್ಕೆ ರೂ.5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಕಡಣಿ ಗ್ರಾಮದ ಮಹಿಳೆಯರು ತಮ್ಮ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಬಯಲು ಶೌಚಾಲಯಕ್ಕೆ ಹೋಗಲು ಹೆಣ್ಣು ಮಕ್ಕಳಿಗೆ ಬಹಳ ತೊಂದರೆ ಇದೆ ಕೂಡಲೇ ಶಾಸಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ನಮಗೆ ಶೌಚಾಲಯಕ್ಕೆ ಹೋಗಲು ಅನುಕೂಲ ಮಾಡಿಕೊಡಬೇಕೆಂದು ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿಕೊಂಡರು
ಇದೇ ವೇಳೆ ಮಹಿಳೆಯರು ಕುಡಿಯುವ ನೀರು, ಬಯಲು ಶೌಚಾಲಯ ಬೇಡಿಕೆ ಕುರಿತ ಮನವಿಗೆ ಸ್ಪಂದಿಸಿದ ಶಾಸಕರು ಬೇಗ ಈಡೇರಿಸುವ ಭರವಸೆ ನೀಡಿದರು.
ಆಲಮೇಲ್ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್ ಸುಂಬಡ, ರಮೇಶ ಬಂಟನೂರ, ಗಂಗಾಧರ ಶ್ರೀಗಿರಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ
ಬಸವರಾಜ ತಾವರಗೇರಿ ಮಾಜಿ ತಾಪಂ ಸದಸ್ಯ ಕಮಲಾಕರ ಕತ್ತಿ, ಗುತ್ತಿಗೆದಾರ ವೀರಭದ್ರ ಕತ್ತಿ, ಹನುಮಂತ್ರಾಯ ಕಳಸಗೊಂಡ, ಕೇದಾರ್ನಾಥ ಕತ್ತಿ, ಸಾತನಗೌಡ ಬಿರಾದಾರ, ಮಲ್ಲು ಪ್ಯಾಟಿ, ಶರಣಪ್ಪ ನಾಟಿಕಾರ, ಸುರೇಶ ಪೂಜಾರಿ, ಪರಶುರಾಮ್ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

