Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

’ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಲಕ್ಷ್ಮೀಪುತ್ರ ಕಿರನಳ್ಳಿ ಭಾಜನ

ಸೌಹಾರ್ದ ಸಹಕಾರಿ ಸಂಘಗಳ ಸಾಲ ವಸೂಲಿಗೆ ಒಕ್ಕೂಟದಿಂದ ಪ್ರಯತ್ನ

ಕಡಣಿಯಲ್ಲಿ ವಿವಿಧ ಕಾಮಗಾರಿಗೆ ಶಾಸಕ ಮನಗೂಳಿ ಭೂಮಿ ಪೂಜೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರೈತರಿಂದ ಕಟ್ಟಿದ ಕಾರ್ಖಾನೆಯ ಉಳಿವು ರೈತರ ಕೈಯಲ್ಲಿ
(ರಾಜ್ಯ ) ಜಿಲ್ಲೆ

ರೈತರಿಂದ ಕಟ್ಟಿದ ಕಾರ್ಖಾನೆಯ ಉಳಿವು ರೈತರ ಕೈಯಲ್ಲಿ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷ ಪರಪ್ಪ ಸವದಿ ಅಭಿಮತ

ಉದಯರಶ್ಮಿ ದಿನಪತ್ರಿಕೆ

ಅಥಣಿ: ಕಬ್ಬು ಕೊರತೆಯಿಂದಾಗಿ 2025-26ನೇ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಅರೆಯಲು ಸಾಧ್ಯವಾಗದೆ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ನಿವ್ವಳ ಹಾನಿಯಾಗಿದೆ. ಆದರೂ ತೀವ್ರ ಪೈಪೋಟಿ ನಡುವೆಯೂ ಕಾರ್ಖಾನೆ ಪ್ರಗತಿಯತ್ತ ಸಾಗುತ್ತಿದ್ದು, ಮುಂದಿನ ಹಂಗಾಮಿನಲ್ಲಿ ಕನಿಷ್ಠ 6.33 ಲಕ್ಷ ಟನ್ ಕಬ್ಬು ಪೂರೈಸಿ ಕಾರ್ಖಾನೆಯನ್ನು ಲಾಭದತ್ತ ಕೊಂಡೊಯ್ಯಲು ರೈತರು ಸಹಕರಿಸಬೇಕು ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು
ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ 2025-26ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2025-26ನೇ ಹಂಗಾಮು ನ.10, 2025 ರಂದು ಆರಂಭವಾಗಿ ಫೆ.9, 2026 ರಂದು ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಶೇ.11.51ರಷ್ಟು ಸಕ್ಕರೆ ಇಳುವರಿಯೊಂದಿಗೆ 5.33 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದ್ದು, 6.14 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ
ಕೃಷ್ಣಾ ಕಾರ್ಖಾನೆ ‘ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ’ ಎಂಬ ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP)ಗಿಂತ ಹೆಚ್ಚಿನ ದರವನ್ನು ರೈತರಿಗೆ ನಿಗದಿತ ಅವಧಿಯಲ್ಲಿ ಪಾವತಿಸಲಾಗಿದೆ. ಕಬ್ಬು ಪೂರೈಸಿದ 15 ದಿನಗಳಲ್ಲಿಯೇ ರೈತರ ಖಾತೆಗೆ ಬಿಲ್ ಪಾವತಿಸಲಾಗಿದೆ. ಖಾಸಗಿ ಕಾರ್ಖಾನೆಗಳಿಗಿಂತ ಇಲ್ಲಿ ರೈತರಿಗೆ ನೇರ ಸಂಪರ್ಕ ಮತ್ತು ಸ್ಪಂದನೆ ಸಿಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಎಸ್.ಎ.ವಾಗಮೋಡೆ, ನಿರ್ದೇಶಕರಾದ ಜಿ.ಎಂ.ತೇವರಮನಿ, ಎಸ್.ಡಿ.ನಂದೇಶ್ವರ, ಜಿ.ಎಂ.ಜತ್ತಿ, ಎಸ್.ಜೆ.ಪಾಟೀಲ, ಶ್ರೀಮತಿ ಡಿ.ಎಸ್.ಕುಲಕರ್ಣಿ, ಶ್ರೀಮತಿ ಎಸ್.ಎಸ್.ನಾಯಿಕ, ಎಂ.ಎಂ.ಗೊಟಕಿಂಡಿ, ಎಸ್.ಎಚ್.ನಾಯಿಕ, ಆರ್.ಎ.ಪಟ್ಟಣ, ಎಚ್.ಐ.ಜಗದೇವ, ಪಿ.ಸಿ.ಪಾಟೀಲ, ವಿ.ಎಂ.ಪಾಟೀಲ, ಜಿ.ಎಂ.ಪಾಟೀಲ, ಯುವ ನಾಯಕರಾದ ಚಿದಾನಂದ ಸವದಿ, ಶಿವಕುಮಾರ ಸವದಿ, ಮಲ್ಲೇಶ ಸವದಿ, ರಮೇಶ ಸವದಿ, ಮಲ್ಲೇಶ ಸವದಿ, ವ್ಯವಸ್ಥಾಪಕ ಸುರೇಶ ಠಕ್ಕಣ್ಣವರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ರೈತರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

’ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಲಕ್ಷ್ಮೀಪುತ್ರ ಕಿರನಳ್ಳಿ ಭಾಜನ

ಸೌಹಾರ್ದ ಸಹಕಾರಿ ಸಂಘಗಳ ಸಾಲ ವಸೂಲಿಗೆ ಒಕ್ಕೂಟದಿಂದ ಪ್ರಯತ್ನ

ಕಡಣಿಯಲ್ಲಿ ವಿವಿಧ ಕಾಮಗಾರಿಗೆ ಶಾಸಕ ಮನಗೂಳಿ ಭೂಮಿ ಪೂಜೆ

ಆಚರಣೆಗಳಿಂದ ಹಿಂದುತ್ವ ಬೆಳೆಯುತ್ತದೆ :ಅಪ್ಪು ಪಟ್ಟಣಶೆಟ್ಟಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ’ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಲಕ್ಷ್ಮೀಪುತ್ರ ಕಿರನಳ್ಳಿ ಭಾಜನ
    In (ರಾಜ್ಯ ) ಜಿಲ್ಲೆ
  • ಸೌಹಾರ್ದ ಸಹಕಾರಿ ಸಂಘಗಳ ಸಾಲ ವಸೂಲಿಗೆ ಒಕ್ಕೂಟದಿಂದ ಪ್ರಯತ್ನ
    In (ರಾಜ್ಯ ) ಜಿಲ್ಲೆ
  • ಕಡಣಿಯಲ್ಲಿ ವಿವಿಧ ಕಾಮಗಾರಿಗೆ ಶಾಸಕ ಮನಗೂಳಿ ಭೂಮಿ ಪೂಜೆ
    In (ರಾಜ್ಯ ) ಜಿಲ್ಲೆ
  • ಆಚರಣೆಗಳಿಂದ ಹಿಂದುತ್ವ ಬೆಳೆಯುತ್ತದೆ :ಅಪ್ಪು ಪಟ್ಟಣಶೆಟ್ಟಿ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ ಪಪಂ ಅಧ್ಯಕ್ಷರಾಗಿ ಕಲಾದಗಿ ಅವಿರೋಧ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ಮನವಿ
    In (ರಾಜ್ಯ ) ಜಿಲ್ಲೆ
  • ಜೋಡೆತ್ತಿನ ಕೃಷಿ ಪದ್ಧತಿ ಉಳಿಸಲು ಯೋಜನೆ ರೂಪಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ರೈತರಿಂದ ಕಟ್ಟಿದ ಕಾರ್ಖಾನೆಯ ಉಳಿವು ರೈತರ ಕೈಯಲ್ಲಿ
    In (ರಾಜ್ಯ ) ಜಿಲ್ಲೆ
  • ಎ.ವಿ.ಎಸ್ ಆಯುರ್ವೇದ ಕಾಲೇಜಿನಲ್ಲಿ ವಿಶ್ವ ರೇಬಿಸ್ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ವೃಕ್ಷಥಾನ್ ಹೆರಿಟೇಜ್ ರನ್: ವಿಶೇಷ ಜಾಗೃತಿ ಓಟ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.