Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಿನ್ನೆ ಡಾಂಬರ್, ಇಂದು ಗುಂಡಿ: ಕಲ್ಯಾಣ ಪಥ್‌ಗೆ ಒಂದೇ ದಿನದ ‘ಕಲ್ಯಾಣ’!

ಎ.ವಿ.ಎಸ್.ಆಯುರ್ವೇದ ಕಾಲೇಜಿನಲ್ಲಿಉಚಿತ ಆರೋಗ್ಯ ತಪಾಸಣೆ

ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ :ಶಾಸಕ ಪಾಟೀಲ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜನರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಆದ್ಯತೆ
(ರಾಜ್ಯ ) ಜಿಲ್ಲೆ

ಜನರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಆದ್ಯತೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಿಜೆಪಿ ತೊರೆದ ಸವನಳ್ಳಿ ಮತ್ತು ಗೊಣಸಗಿಯ ಹಲವು ಮುಖಂಡರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡ ಸಚಿವ ಎಂ.ಬಿ.ಪಾಟೀಲ ಹೇಳಿಕೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಹೊಸ ಮತ್ತು ಹಿರಿಯ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ‌.
ರವಿವಾರ ನಗರದಲ್ಲಿ ಬಬಲೇಶ್ವರ ಮತಕ್ಷೇತ್ರದ ಸವನಳ್ಳಿ ಮತ್ತು ಗೊಣಸಗಿ ಗ್ರಾಮದ ಹಲವು ಪ್ರಮುಖರು, ಮುಖಂಡರು ಹಾಗೂ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ಸವನಳ್ಳಿಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಮಮದಾಪುರ ಅವರ ನೇತೃತ್ವದಲ್ಲಿ ಹಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು, ನಮ್ಮ ಮೇಲಿನ ವಿಶ್ವಾಸ ಮತ್ತು ಕ್ಷೇತ್ರದ ಅಭಿವೃದ್ಧಿಯ ಮೇಲಿನ ನಿರೀಕ್ಷೆಗೆ ಸಾಕ್ಷಿಯಾಗಿದೆ.
ಗೊಣಸಗಿಯ 17 ಕುಟುಂಬಗಳು ಒಟ್ಟಾಗಿ ಕಾಂಗ್ರೆಸ್ ಸೇರಿದ್ದು, ಇನ್ನೂ ಹಲವು ಕುಟುಂಬಗಳು ಪಕ್ಷದೊಂದಿಗೆ ಕೈಜೋಡಿಸುವ ವಿಶ್ವಾಸ ವ್ಯಕ್ತಪಡಿಸಿರುವುದು ಸಂತಸ ತಂದಿದೆ.
ಪಕ್ಷಕ್ಕೆ ಸೇರ್ಪಡೆಗೊಂಡ ಎಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಹೊಸ ಹಾಗೂ ಹಿರಿಯ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸೋಣ.
ಸವನಳ್ಳಿಯ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಅಗತ್ಯ ನೀರಿನ ಸೌಲಭ್ಯ ಒದಗಿಸುವುದು ಹಾಗೂ ಗೊಣಸಗಿ ಸೇರಿದಂತೆ ಕ್ಷೇತ್ರದ ಗ್ರಾಮಗಳಿಗೆ ಹೆಚ್ಚಿನ ನೀರು ಹರಿಸಿ ಜನರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಆದ್ಯತೆಯಾಗಿದೆ. ಅಭಿವೃದ್ಧಿಯ ಪಥದಲ್ಲಿ ಬಬಲೇಶ್ವರ ಮತ್ತಷ್ಟು ಮುನ್ನಡೆಯಲಿ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಸಚಿವ ಎಂ.‌ ಬಿ. ಪಾಟೀಲ ಹೇಳಿದರು.
ಶಾಂತಾಬಾಯಿ‌ ಮಮದಾಪುರ ಮಾತನಾಡಿ, ಸವನಳ್ಳಿಯ ಎಲ್ಲ ಸಮಾಜದವರು ಸಚಿವ ಎಂ. ಬಿ. ಪಾಟೀಲ ಅವರ ಕ್ಷೇತ್ರದ ಮೇಲಿನ ವಿಶೇಷ ಕಾಳಜಿ ಹಾಗೂ ಗ್ರಾಮದ ಪ್ರಗತಿಯ ಉದ್ದೇಶವಿಟ್ಟುಕೊಂಡು ಪಕ್ಷ ಸೇರಿದ್ದೇವೆ‌ ಎಂದು ಶಾಂತಾಬಾಯಿಯವರು ಹೇಳಿದರು.
ಈ ಸಂದರ್ಭದಲ್ಲಿ
ಸವನಳ್ಳಿಯ ಸಾಹೇಬಗೌಡ ಬಗಲಿ, ಮಲ್ಲಪ್ಪ ಹಂಡಿ, ಶಿವಾನಂದ ಪಟ್ಟದ, ಸಿದ್ದು ಹಂಡಿ, ಶ್ರೀಶೈಲ ಗಾಣಿಗೇರ, ರಾಜು ಹಂಡಿ, ಸುನಿಲ ಮಮದಾಪುರ ಸೇರಿದಂತೆ ಅನೇಕರು ಪಕ್ಷ ಸೇರಿದರು.
ಇದೇ ಸಂದರ್ಭದಲ್ಲಿ ಗೊಣಸಗಿ ಗ್ರಾಮದ ಹದಿನೇಳು ಕುಟುಂಬಗಳವರು ಸಚಿವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಗ್ರಾಮದ ಹದಿನೇಳು ಕುಟುಂಬಗಳವರು ಒಟ್ಟಾಗಿ ಪಕ್ಷ ಸೇರಿದ್ದಾಗಿ ಹೇಳಿದ ಮುಖಂಡ ಗುರು ಮಾಳಿ, ಇನ್ನೂ ಹತ್ತು ಕುಟುಂಬದವರು ಪಕ್ಷ ಸೇರಲಿದ್ದು, ಇನ್ನು ಮುಂದೆ ಇಡೀ ಗ್ರಾಮ ಎಂ‌. ಬಿ. ಪಾಟೀಲರ ಹಿಂದೆ ಇರಲಿದೆ ಎಂದು ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಗೊಣಸಗಿಯ ಮಲ್ಲಿಕಾರ್ಜುನ ಬಿಜ್ಜರಗಿ, ಶಂಕರ ಮಾಳಿ, ಕಾಶೀನಾಥ ಮುಚ್ಚಂಡಿ, ಹಣಮಂತ ಜಂಬಗಿ, ಲಿಂಗಪ್ಪ ಮಾಳಿ, ಪರಶುರಾಮ ದೊಡ್ಡಮನಿ, ರಾಜಕುಮಾರ ದೊಡ್ಡಮನಿ, ಅಮಸಿದ್ಧ, ಬಸವರಾಜ, ನಿಂಗಪ್ಪ ಹೊನವಾಡ, ಸಿದ್ದು ಜಮಖಂಡಿ, ಪ್ರವೀಣ ದೊಡ್ಡಮನಿ, ಸೋಮಲಿಂಗ ಬಾರಿಗಿಡದ, ಶೀತಲ್ ಬಾಣಿ, ಪರಶುರಾಮ ದೊಡ್ಡಮನಿ, ಹಣಂಮತ ಜುಳಜುಳಿ, ಹಣಂಮತ ಮಾಳಿ ಪಕ್ಷ ಸೇರಿದರು. ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡಣ್ಣವರ್, ಹಿರಿಯ ಮುಖಂಡ ಹಮೀದ್ ಮುಶ್ರಿಫ್ ಮುಂತಾದವರು ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನಿನ್ನೆ ಡಾಂಬರ್, ಇಂದು ಗುಂಡಿ: ಕಲ್ಯಾಣ ಪಥ್‌ಗೆ ಒಂದೇ ದಿನದ ‘ಕಲ್ಯಾಣ’!

ಎ.ವಿ.ಎಸ್.ಆಯುರ್ವೇದ ಕಾಲೇಜಿನಲ್ಲಿಉಚಿತ ಆರೋಗ್ಯ ತಪಾಸಣೆ

ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ :ಶಾಸಕ ಪಾಟೀಲ

ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿ, ಅನುದಾನ ಲ್ಯಾಪ್ಸ್ ಆಗದಿರಲಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಿನ್ನೆ ಡಾಂಬರ್, ಇಂದು ಗುಂಡಿ: ಕಲ್ಯಾಣ ಪಥ್‌ಗೆ ಒಂದೇ ದಿನದ ‘ಕಲ್ಯಾಣ’!
    In (ರಾಜ್ಯ ) ಜಿಲ್ಲೆ
  • ಎ.ವಿ.ಎಸ್.ಆಯುರ್ವೇದ ಕಾಲೇಜಿನಲ್ಲಿಉಚಿತ ಆರೋಗ್ಯ ತಪಾಸಣೆ
    In (ರಾಜ್ಯ ) ಜಿಲ್ಲೆ
  • ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ :ಶಾಸಕ ಪಾಟೀಲ
    In (ರಾಜ್ಯ ) ಜಿಲ್ಲೆ
  • ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿ, ಅನುದಾನ ಲ್ಯಾಪ್ಸ್ ಆಗದಿರಲಿ
    In (ರಾಜ್ಯ ) ಜಿಲ್ಲೆ
  • ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ರೈತರ ಸಾಲ ಮನ್ನಾ, ಜಿಲ್ಲೆಯನ್ನು 371(ಜೆ) ಸೇರ್ಪಡೆಗೊಳಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಬಸ್ ಸೌಲಭ್ಯ, ಬಸ್ ಡಿಪೋ ಸ್ಥಾಪನೆಗೆ ಆಗ್ರಹಿಸಿ ಕರವೇ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ರಾಜಿಸಂಧಾನದಿಂದ ಹಣ-ಸಮಯ ಉಳಿತಾಯ :ನ್ಯಾ.ಹರೀಶ ಎ.
    In (ರಾಜ್ಯ ) ಜಿಲ್ಲೆ
  • ಬರ ನಿರ್ವಹಣೆಯಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಿ
    In (ರಾಜ್ಯ ) ಜಿಲ್ಲೆ
  • ಬಿಜೆಪಿ ರೈತ ಮೋರ್ಚಾ & ಜೆಡಿಎಸ್ ನೇತೃತ್ವದಲ್ಲಿ ಬೃಹತ್ ಹೋರಾಟ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.