Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಿನ್ನೆ ಡಾಂಬರ್, ಇಂದು ಗುಂಡಿ: ಕಲ್ಯಾಣ ಪಥ್‌ಗೆ ಒಂದೇ ದಿನದ ‘ಕಲ್ಯಾಣ’!

ಎ.ವಿ.ಎಸ್.ಆಯುರ್ವೇದ ಕಾಲೇಜಿನಲ್ಲಿಉಚಿತ ಆರೋಗ್ಯ ತಪಾಸಣೆ

ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ :ಶಾಸಕ ಪಾಟೀಲ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಇಂಡಿ, ಚಡಚಣ & ತಾಳಿಕೋಟೆ ತಾಲೂಕುಗಳನ್ನು ಬರಪೀಡಿತವೆಂದು ಪರಿಗಣಿಸಲು ಕ್ರಮ
(ರಾಜ್ಯ ) ಜಿಲ್ಲೆ

ಇಂಡಿ, ಚಡಚಣ & ತಾಳಿಕೋಟೆ ತಾಲೂಕುಗಳನ್ನು ಬರಪೀಡಿತವೆಂದು ಪರಿಗಣಿಸಲು ಕ್ರಮ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಬರ ನಿರ್ವಹಣೆ ಕೈಪಿಡಿ 2020 ರ ಮೌಲ್ಯಮಾಪನ ಮಾನದಂಡಗಳ ಪ್ರಕಾರ ಇಂಡಿ, ಚಡಚಣ ಮತ್ತು ತಾಳಿಕೋಟೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಪರಿಗಣಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸೋಮವಾರದೊಳಗೆ ಈ ನಾಲ್ಕು ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಅದರ ಆಧಾರದ ಮೇಲೆ ಈ ನಾಲ್ಕು ತಾಲೂಕುಗಳ ಅಂತಿಮ ಅಧಿಸೂಚನೆಯನ್ನು ಸರಕಾರದಿಂದ ಹೊರಡಿಸಲಾಗುವುದು‌ ಎಂದು ತಿಳಿಸಿದ್ದಾರೆ.
ಅಲ್ಲದೇ, ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಹಂತಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುವ ಸಚಿವರು, ನಿರಂತರವಾಗಿ ಮೂರು ವಾರಗಳ ಒಣ ಹವೆ (Dry Spell), ಉಪಗ್ರಹ ದತ್ತಾಂಶ ಮತ್ತು ರಿಮೋಟ್ ಸೆನ್ಸಿಂಗ್ ದತ್ತಾಂಶಗಳ ಆಧಾರಿತ ಪರಿಣಾಮದ ಸೂಚಕಗಳು ಮಾನದಂಡಗಳ ಆಧಾರದ ಮೇಲೆ, ಸರಕಾರದ ಮಟ್ಟದಲ್ಲಿ ಸಮಗ್ರ ಬರ ಮೌಲ್ಯಮಾಪನ (ಮಧ್ಯಮ ಅಥವಾ ತೀವ್ರ ವರ್ಗ) ಮಾಡಿ ಅರ್ಹ ತಾಲೂಕುಗಳನ್ನು ಗುರುತಿಸಲಾಗುತ್ತದೆ.
ಅದನ್ನು ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಚಿವ ಸಂಪುಟ ಉಪ-ಸಮಿತಿಯ ಮುಂದೆ ಮಂಡಿಸಲಾಗುತ್ತದೆ. ಉಪ-ಸಮಿತಿಯು ತಾಲೂಕುಗಳ ಪಟ್ಟಿಯನ್ನು ಅನುಮೋದಿಸಿ, ಮುಂದಿನ ಹಂತವಾದ ಕ್ಷೇತ್ರ ಪರಿಶೀಲನೆಗೆ (Ground Truthing) ಅಧಿಸೂಚನೆ ಹೊರಡಿಸಲಾಗುತ್ತದೆ.
ಅಧಿಸೂಚನೆ ಹೊರಡಿಸಲಾದ ತಾಲೂಕುಗಳಲ್ಲಿ ಕ್ಷೇತ್ರ ಪರಿಶೀಲನೆಯನ್ನು ಗ್ರೌಂಡ್ ಟ್ರೂಥಿಂಗ್ ಆ್ಯಪ್ ಮೂಲಕ ಮಾಡಲಾಗುತ್ತದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಗ್ರೌಂಡ್ ಟ್ರೂಥಿಂಗ್ ಆ್ಯಪ್ ನಿಂದ ಯಾದೃಚ್ಛಿಕವಾಗಿ (random)ಆಯ್ಕೆಯಾದ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ನಾಲ್ಕು ದಿನಗಳೊಳಗೆ ಬೆಳೆ ಹಾನಿ ಮೌಲ್ಯಮಾಪನ ನಡೆಸುತ್ತಾರೆ. ಗ್ರೌಂಡ್ ಟ್ರೂಥಿಂಗ್ ವರದಿಯ ಆಧಾರದ ಮೇಲೆ ತಾಲೂಕನ್ನು ಮಧ್ಯಮ ಅಥವಾ ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗುತ್ತದೆ.‌ ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅಂತಿಮ ಬರ ಅಧಿಸೂಚನೆ_ ಹೊರಡಿಸಲಾಗುತ್ತದೆ.
ನಮ್ಮ ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಪಟ್ಟಿಯಲ್ಲಿರುವ ತಾಲೂಕುಗಳಾದ ವಿಜಯಪುರ, ಕೊಲ್ಹಾರ,ನಿಡಗುಂದಿ, ಬಸವನ ಬಾಗೇವಾಡಿ, ಬಬಲೇಶ್ವರ, ತಿಕೋಟಾ ತಾಲೂಕುಗಳಲ್ಲಿ ಗ್ರೌಂಡ್ ಟ್ರುಥಿಂಗ್ ಕಾರ್ಯ ಮುಕ್ತಾಯಗೊಂಡು ಅಂತಿಮವಾಗಿ ತೀವ್ರ ಬರಪೀಡಿತ ತಾಲೂಕುಗಳೆಂದು ಸರಕಾರದಿಂದ ಅಧಿಸೂಚಿಸಲಾಗಿದೆ.
ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ ಮತ್ತು ಮುದ್ದೇಬಿಹಾಳ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್‌ಗಾಗಿ ಅಧಿಸೂಚಿಸಲಾಗಿದೆ. ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸೋಮವಾರದೊಳಗೆ ಈ ನಾಲ್ಕು ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಅದರ ಆಧಾರದ ಮೇಲೆ ಈ ನಾಲ್ಕು ತಾಲೂಕುಗಳ ಅಂತಿಮ ಅಧಿಸೂಚನೆಯನ್ನು ಸರಕಾರದಿಂದ ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನಿನ್ನೆ ಡಾಂಬರ್, ಇಂದು ಗುಂಡಿ: ಕಲ್ಯಾಣ ಪಥ್‌ಗೆ ಒಂದೇ ದಿನದ ‘ಕಲ್ಯಾಣ’!

ಎ.ವಿ.ಎಸ್.ಆಯುರ್ವೇದ ಕಾಲೇಜಿನಲ್ಲಿಉಚಿತ ಆರೋಗ್ಯ ತಪಾಸಣೆ

ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ :ಶಾಸಕ ಪಾಟೀಲ

ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿ, ಅನುದಾನ ಲ್ಯಾಪ್ಸ್ ಆಗದಿರಲಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಿನ್ನೆ ಡಾಂಬರ್, ಇಂದು ಗುಂಡಿ: ಕಲ್ಯಾಣ ಪಥ್‌ಗೆ ಒಂದೇ ದಿನದ ‘ಕಲ್ಯಾಣ’!
    In (ರಾಜ್ಯ ) ಜಿಲ್ಲೆ
  • ಎ.ವಿ.ಎಸ್.ಆಯುರ್ವೇದ ಕಾಲೇಜಿನಲ್ಲಿಉಚಿತ ಆರೋಗ್ಯ ತಪಾಸಣೆ
    In (ರಾಜ್ಯ ) ಜಿಲ್ಲೆ
  • ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ :ಶಾಸಕ ಪಾಟೀಲ
    In (ರಾಜ್ಯ ) ಜಿಲ್ಲೆ
  • ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿ, ಅನುದಾನ ಲ್ಯಾಪ್ಸ್ ಆಗದಿರಲಿ
    In (ರಾಜ್ಯ ) ಜಿಲ್ಲೆ
  • ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ರೈತರ ಸಾಲ ಮನ್ನಾ, ಜಿಲ್ಲೆಯನ್ನು 371(ಜೆ) ಸೇರ್ಪಡೆಗೊಳಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಬಸ್ ಸೌಲಭ್ಯ, ಬಸ್ ಡಿಪೋ ಸ್ಥಾಪನೆಗೆ ಆಗ್ರಹಿಸಿ ಕರವೇ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ರಾಜಿಸಂಧಾನದಿಂದ ಹಣ-ಸಮಯ ಉಳಿತಾಯ :ನ್ಯಾ.ಹರೀಶ ಎ.
    In (ರಾಜ್ಯ ) ಜಿಲ್ಲೆ
  • ಬರ ನಿರ್ವಹಣೆಯಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಿ
    In (ರಾಜ್ಯ ) ಜಿಲ್ಲೆ
  • ಬಿಜೆಪಿ ರೈತ ಮೋರ್ಚಾ & ಜೆಡಿಎಸ್ ನೇತೃತ್ವದಲ್ಲಿ ಬೃಹತ್ ಹೋರಾಟ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.