Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಿನ್ನೆ ಡಾಂಬರ್, ಇಂದು ಗುಂಡಿ: ಕಲ್ಯಾಣ ಪಥ್‌ಗೆ ಒಂದೇ ದಿನದ ‘ಕಲ್ಯಾಣ’!

ಎ.ವಿ.ಎಸ್.ಆಯುರ್ವೇದ ಕಾಲೇಜಿನಲ್ಲಿಉಚಿತ ಆರೋಗ್ಯ ತಪಾಸಣೆ

ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ :ಶಾಸಕ ಪಾಟೀಲ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹಡಲಸಂಗದ ಅಭಿವೃದ್ಧಿಗೆ ಪಾಟೀಲರ ‘ಪವರ್ ಪಂಚ್’
(ರಾಜ್ಯ ) ಜಿಲ್ಲೆ

ಹಡಲಸಂಗದ ಅಭಿವೃದ್ಧಿಗೆ ಪಾಟೀಲರ ‘ಪವರ್ ಪಂಚ್’

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಹಡಲಸಂಗ ಗ್ರಾಮದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲ

ಉದಯರಶ್ಮಿ ದಿನಪತ್ರಿಕೆ

ಚಡಚಣ: ಇಂಡಿ ವಿಧಾನಸಭಾ ಕ್ಷೇತ್ರದ ಹಡಲಸಂಗ ಗ್ರಾಮವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದು, ಗ್ರಾಮೀಣ ಭಾಗದ ಜನರ ಅಗತ್ಯಗಳಿಗೆ ಸ್ಪಂದಿಸಿ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಹಡಲಸಂಗ ಗ್ರಾಮದ ವಿಜಯನಗರ ತಾಂಡಾದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕ.ವಿ.ಪ್ರ.ನಿ.ನಿ.) ವತಿಯಿಂದ 110/11 ಕೆ.ವಿ. ವಿದ್ಯುತ್ ಉಪಕೇಂದ್ರ ಕಾಮಗಾರಿಗೆ ಚಾಲನೆ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.
ವಿಜಯನಗರ ಪ್ರಕಾಶ ಮಹಾರಾಜ ಹಾಗೂ ಧರ್ಮ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಸೊನಕನಹಳ್ಳಿ, ಹಡಲಸಂಗ, ಜಿಗಜಿಣಗಿ, ಸಾತಲಗಾಂವ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ನೀರು, ವಿದ್ಯುತ್, ಶಿಕ್ಷಣ ಮತ್ತು ಉತ್ತಮ ರಸ್ತೆ ಸಂಪರ್ಕದ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದರು. ಜನರ ಬಹುದಿನಗಳ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕಾಮಗಾರಿಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಜನರ ಆಶಯಗಳನ್ನು ಈಡೇರಿಸುವುದು ಜನಪ್ರತಿನಿಧಿಯಾಗಿ ನನ್ನ ಕರ್ತವ್ಯವಾಗಿದೆ ಎಂದು ಹೇಳಿದರು.
ಹಡಲಸಂಗದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯಿಂದ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ. ಇದರ ಜತೆಗೆ ಹಡಲಸಂಗ–ಸೊನಕನಹಳ್ಳಿ ರಸ್ತೆ ಸುಧಾರಣೆ ಕಾಮಗಾರಿ ಲೋಕಾರ್ಪಣೆ, ಶ್ರೀ ಸಾಬರಭದ್ರ ದೇವಸ್ಥಾನದ ಬಳಿ ಹಾಗೂ ಶ್ರೀ ವಿಠ್ಠಲ ದೇವಸ್ಥಾನದ ಬಳಿ ಸಮುದಾಯ ಭವನಗಳ ನಿರ್ಮಾಣಕ್ಕೆ ಭೂಮಿಪೂಜೆ, ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ದೇವಸ್ಥಾನಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ, ಶಿಕ್ಷಣ ಕ್ಷೇತ್ರದ ಪ್ರಗತಿ, ರಸ್ತೆ ಸುಧಾರಣೆ ಹಾಗೂ ಕೆರೆಗಳ ಅಭಿವೃದ್ಧಿ ಸೇರಿದಂತೆ ಗ್ರಾಮಗಳ ಮೂಲಸೌಕರ್ಯ ಮತ್ತು ಸಾರ್ವಜನಿಕರ ಅಗತ್ಯಗಳಿಗೆ ಸಂಬಂಧಿಸಿದ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಪ್ರಮುಖ ಆದ್ಯತೆಯಾಗಿದೆ. ಜನರ ಅಗತ್ಯಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ, ವಿದ್ಯುತ್ ಇಲಾಖೆ ಅಧಿಕಾರಿ ರಮೇಶ ಪವಾರ, ಬಿ.ಎಸ್. ಕವಲಗಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪ್ರಶಾಂತ ಕಾಳೆ, ಬಿ.ಸಿ. ಸಾವಕಾರ, ಶಿವಯೋಗೇಪ್ಪ ಚನಗೊಂಡ, ಸಿದ್ದಪ್ಪ, ಎಸ್.ಎ. ಬಿರಾದಾರ, ಜಗದೀಶ ಜಾಧವ, ಎಸ್.ಎಸ್. ಪಾಟೀಲ, ಎ.ಇ.ಇ. ಸಂದೀಪ, ಗುತ್ತಿಗೆದಾರ ಗಚ್ಚಿನಮಠ, ಭೀಮಣ್ಣ ಗಡ್ಡದ, ಕಾಂತಾ ರೀಸಾಲ್ದಾರ, ಸಂತೋಷಗೌಡ ಪಾಟೀಲ, ಮಲ್ಲೇಶ ಡೋಣಗಿ, ರಾಜು ಗೂಗವಾಡ, ಭೀಮ ಪವಾರ, ಶೇಖರ ನಾಯಕ, ವಿನೋದ ಶಹಾಪುರ, ವಿದ್ಯುತ್ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನಿನ್ನೆ ಡಾಂಬರ್, ಇಂದು ಗುಂಡಿ: ಕಲ್ಯಾಣ ಪಥ್‌ಗೆ ಒಂದೇ ದಿನದ ‘ಕಲ್ಯಾಣ’!

ಎ.ವಿ.ಎಸ್.ಆಯುರ್ವೇದ ಕಾಲೇಜಿನಲ್ಲಿಉಚಿತ ಆರೋಗ್ಯ ತಪಾಸಣೆ

ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ :ಶಾಸಕ ಪಾಟೀಲ

ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿ, ಅನುದಾನ ಲ್ಯಾಪ್ಸ್ ಆಗದಿರಲಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಿನ್ನೆ ಡಾಂಬರ್, ಇಂದು ಗುಂಡಿ: ಕಲ್ಯಾಣ ಪಥ್‌ಗೆ ಒಂದೇ ದಿನದ ‘ಕಲ್ಯಾಣ’!
    In (ರಾಜ್ಯ ) ಜಿಲ್ಲೆ
  • ಎ.ವಿ.ಎಸ್.ಆಯುರ್ವೇದ ಕಾಲೇಜಿನಲ್ಲಿಉಚಿತ ಆರೋಗ್ಯ ತಪಾಸಣೆ
    In (ರಾಜ್ಯ ) ಜಿಲ್ಲೆ
  • ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ :ಶಾಸಕ ಪಾಟೀಲ
    In (ರಾಜ್ಯ ) ಜಿಲ್ಲೆ
  • ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿ, ಅನುದಾನ ಲ್ಯಾಪ್ಸ್ ಆಗದಿರಲಿ
    In (ರಾಜ್ಯ ) ಜಿಲ್ಲೆ
  • ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ರೈತರ ಸಾಲ ಮನ್ನಾ, ಜಿಲ್ಲೆಯನ್ನು 371(ಜೆ) ಸೇರ್ಪಡೆಗೊಳಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಬಸ್ ಸೌಲಭ್ಯ, ಬಸ್ ಡಿಪೋ ಸ್ಥಾಪನೆಗೆ ಆಗ್ರಹಿಸಿ ಕರವೇ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ರಾಜಿಸಂಧಾನದಿಂದ ಹಣ-ಸಮಯ ಉಳಿತಾಯ :ನ್ಯಾ.ಹರೀಶ ಎ.
    In (ರಾಜ್ಯ ) ಜಿಲ್ಲೆ
  • ಬರ ನಿರ್ವಹಣೆಯಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಿ
    In (ರಾಜ್ಯ ) ಜಿಲ್ಲೆ
  • ಬಿಜೆಪಿ ರೈತ ಮೋರ್ಚಾ & ಜೆಡಿಎಸ್ ನೇತೃತ್ವದಲ್ಲಿ ಬೃಹತ್ ಹೋರಾಟ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.