ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಜೋಡಗುಡಿ ಹತ್ತಿರ ಇಂಡಿ ವಿಜಯಪುರ ರಾಜ್ಯ ಹೆದ್ದಾರೆ ಮತ್ತು ಅಕ್ಕಲಕೋಟ ವಿಜಯಪುರ ಹೆದ್ದಾರಿ ಯನ್ನು ಬಂದು ಮಾಡಿ ಭಾರತೀಯ ಕಿಸಾನ ಸಂಘದ ವತಿಯಿಂದ ಅನಿರ್ದಿಷ್ಟ ಸಮಯದವರೆಗೆ ಬಂದ್ ಮಾಡಲಾಗುವದೆಂದು ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ ಮಾಜಿ ಅಧ್ಯಕ್ಷ ಗುರುನಾಥ ಬಗಲಿ ಹೇಳಿದರು.
ನಗರದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಭಾರತೀಯ ಕಿಸಾನ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇಂಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಸರಕಾರ ಘೋಷಿಸಬೇಕು, ತಾಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ತುಂಬಬೇಕು ಅಲ್ಲಿಯವರೆಗೆ ಹೋರಾಟ ಮಾಡಲಾಗುವುದೆಂದು ಬಗಲಿ ಹೇಳಿದರು.
ಇನ್ನೋರ್ವ ಮುಖಂಡ ಮಲ್ಲನಗೌಡ ಪಾಟೀಲ ಮಾತನಾಡಿ, ಎನ್ ಟಿ ಪಿಸಿ ಯಲ್ಲಿ ಉತ್ಪಾದನೆಯಾಗುವ ಎಲ್ಲ ವಿದ್ಯುತ್ ಮಹಾರಾಷ್ಟ್ರ ಮತ್ತು ಮುಂಬಯಿ ಪ್ರದೇಶಕ್ಕೆ ಮಾರುತ್ತಾರೆ. ಕರ್ನಾಟಕ ವಿಜಯಪುರ ಮತ್ತು ಇನ್ನಿತರ ಜಿಲ್ಲೆಗಳಿಗೆ ಅನುಕೂಲವಾಗಲೆಂದು ಎನ್ ಟಿ ಪಿ ಸಿ ಮಾಡಿದ್ದು ಇಲ್ಲಿಯ ಅನೇಕ ರೈತರ ಜಮೀನು ಹಾಳಾಗಿದೆ, ಆದರೆ ವಿದ್ಯುತ್ ಮಾತ್ರ ಬೇರೆ ರಾಜ್ಯಕ್ಕೆ ನೀಡುವುದು ಕರ್ನಾಟಕ ರೈತರ ದುರ್ದೈವ ಎಂದರು.
ಶಂಕರೆಪ್ಪ ರೂಗಿ ತಡವಲಗಾ, ಈರಪ್ಪ ಗೋಟ್ಯಾಳ ತಡವಲಗಾ, ಪ್ರಕಾಶ ಬಿರಾದಾರ ಲಮಾಣಿ ಹಟ್ಟಿ, ಎಸ್.ಟಿ.ಪಾಟೀಲ ನಾದ, ಶಿವರಾಯ ಬಿರಾದಾರ, ಮಹಿಬೂಬ ಮುಲ್ಲಾ, ಚಿದಾನಂದ ಮದರಿ ಮತ್ತಿತರಿದ್ದರು.

