ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಹಿನ್ನೆಲೆಯಲ್ಲಿ ಸೆ.೧೭ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಕನಕದಾಸ ಬಡಾವಣೆಯ ಈಜುಕೊಳದ ಬಳಿಯ ಒಳಾಂಗಣ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರಿಗಾಗಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತಿಯಿರುವ ಹಿರಿಯ ನಾಗರಿಕರು ನಿಗದಿತ ದಿನದಂದು ಆಧಾರ್ ಕಾರ್ಡ್,ಹಿರಿಯ ನಾಗರಿಕರ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬಹುದು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
೬೦ ರಿಂದ ೭೦ ವರ್ಷದೊಳಗಿನವರಿಗೆ ಮ್ಯೂಸಿಕಲ್ ಚೇರ್, ೬೦ರಿಂದ ೬೯ ವರ್ಷದವರು ಹಾಗೂ ೭೦ ವರ್ಷ ಮೇಲ್ಪಟ್ಟವರಿಗೆ ಬಿರುಸಿನ ನಡಿಗೆ ಮತ್ತು ಬಕೆಟ್‌ಗೆ ಬಾಲ್ ಎಸೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಸ್ಪರ್ಧೆಗಳ ಅಂಗವಾಗಿ ೬೦ರಿಂದ ೭೦ ವರ್ಷದವರು ಹಾಗೂ ೭೦ ವರ್ಷ ಮೇಲ್ಪಟ್ಟವರಿಗೆ ಗಾಯನ ಸ್ಪರ್ಧೆ ಮತ್ತು ಇದೇ ವಯೋಮಾನದವರಿಗೆ ಏಕಪಾತ್ರಾಭಿನಯ ಸ್ಪರ್ಧೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಸಂಯೋಜಕಿ ಪ್ರತಿಭಾ (ಮೊ: ೯೬೦೬೧೫೧೧೪೯), ವಿಜಯಪುರ ತಾಲೂಕು ಪಂಚಾಯತಿಯ ರವಿ ರಾರೋಡ (ಮೊ: ೯೦೩೫೫೫೩೩೩೭), ಇಂಡಿ ತಾಲೂಕು ಪಂಚಾಯತಿಯ ಪರಶುರಾಮ ಭೋಸಲೆ (ಮೊ: ೯೯೭೨೪೪೧೪೬೪), ಸಿಂದಗಿ ತಾಲೂಕು ಪಂಚಾಯತಿಯ ಮುತ್ತುರಾಜ ಸಾತಿಹಾಳ (ಮೊ: ೯೯೮೦೦೧೯೬೩೫), ಮುದ್ದೇಬಿಹಾಳ ತಾಲೂಕು ಪಂಚಾಯತಿಯ ಎಸ್.ಕೆ. ಘಾಟಿ (ಮೊ: ೯೭೪೦೬೮೨೯೭೯) ಹಾಗೂ ಬಸವನ ಬಾಗೇವಾಡಿ ತಾಲೂಕು ಪಂಚಾಯತಿಯ ಶ್ರೀಲೀಲಾ ಬಿರಾದಾರ (ಮೊ: ೮೭೨೨೧೩೫೬೬೦) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಕಟಣೆ ತಿಳಿಸಿದೆ.
