Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಸಪ್ರಶ್ನೆ: ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ಸಾಧನೆ

ಸಮಾಜವನ್ನು ಒಗ್ಗೂಡಿಸುವ ಶಕ್ತಿ ಧರ್ಮಕ್ಕಿದೆ :ರಂಭಾಪುರಿಶ್ರೀ

ಮಕ್ಕಳ ಆನಲೈನ್ ಹಾಜರಾತಿ ದಾಖಲಿಸುವಲ್ಲಿ ನಿರ್ಲಕ್ಷ್ಯ ಬೇಡ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಶರಣರ ವೃತಾಚಾರಗಳು
ವಿಶೇಷ ಲೇಖನ

ಶರಣರ ವೃತಾಚಾರಗಳು

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ

ಉದಯರಶ್ಮಿ ದಿನಪತ್ರಿಕೆ

ಶರಣರು ೧೨ನೇ ಶತಮಾನದಲ್ಲಿ ಶರಣ ಕ್ರಾಂತಿಯನ್ನು ಮಾಡಿದರು. ಅವರು ರಚಿಸಿದ ವಚನಗಳು ಕ್ರಾಂತಿಯ ವಿಚಾರಗಳನ್ನು ಹೊಂದಿವೆ. ಶರಣರಲ್ಲಿ ಎಲ್ಲಾ ಜಾತಿಯ ಜನರು ಇದ್ದರು. ಮೇಲ್ವರ್ಗದ ಜನರು ಹಾಗು ಕೆಳವರ್ಗದ ಜನರು ಎಲ್ಲರೂ ಒಟ್ಟಿಗೆ ಸೇರಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಅವರಲ್ಲಿ ಪ್ರಮುಖರು ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಉರಿಲಿಂಗ ಪೆದ್ದಿ, ಸೂಳೆ ಸಂಕವ್ವ ಪ್ರಮುಖರು. ಇವರೆಲ್ಲರು ಸಹಸ್ರಾರು ಸಂಖ್ಯೆಯಲ್ಲಿ ವಚನಗಳನ್ನು ಬರೆದಿದ್ದಾರೆ.
ಎಲ್ಲರನ್ನೂ ಸಮಾನವಾಗಿ ಕಾಣುವ, ಸರ್ವರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವ ಧರ್ಮ ಶರಣ ಧರ್ಮವಾಗಿದೆ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು. ಶರಣ ಧರ್ಮವು ಉದಾರ, ವೈಚಾರಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದು, ರೂಢಿಗತವಾಗಿ ಲಿಂಗಾಯತ, ವೀರಶೈವ ಧರ್ಮ ಎಂದು ಕರೆಯುವ ಬದಲಿಗೆ ಶರಣ ಧರ್ಮ ಎನ್ನುವುದೇ ಸೂಕ್ತ’ ಎಂದು ಕವಿ ಚನ್ನವೀರ ಕಣವಿ ಅಭಿಪ್ರಾಯಪಟ್ಟರು.
ಈ “ಶರಣ” ಪದವು ಸಕಲ ಜೀವಜಂತುಗಳನ್ನೂ ಸಮಸ್ತ ಸೃಷ್ಟ ಜಗತ್ತನ್ನೂ ನಿರ್ದೇಶಿಸುತ್ತದೆ. ಪರಶಿವನಲ್ಲಿ ಪ್ರಪ್ರಥಮದಲ್ಲಿ ಕಾಣಬಂದ ‘ಅಸ್ಮಿತಾ’ ಸ್ಫುರಣೆಗೆ ‘ಶರಣ’ ಎಂಬ ಹೆಸರಿದೆ. ಇದುವೆ ಸೃಷ್ಟಿಯ ಪ್ರಥಮತತ್ತ್ವ. ಆದ್ದರಿಂದ “ಶರಣ” ಪದವು ಸಮಸ್ತ ವಿಶ್ವದರ್ಶಕ.
ಏನೇನೂ ಇಲ್ಲದ ಪರಮಸತ್ಯದಿಂದ ಮೊಟ್ಟಮೊದಲು ಸ್ಪುರಿಸಿದುದು ಪರಶಿವ. ಆ ಪರಶಿವನಿಗೇ ಶರಣ ಎಂಬ ಭಿನ್ನಾಭಿಧಾನ. ಆ ಶರಣಸ್ಫುರಣೆ ಭಕ್ತನಲ್ಲಿ ಕಾಣಬರುವುದರಿಂದ ಇವನಿಗೂ ಶರಣ ಎಂಬ ಶಬ್ದ. ಒಟ್ಟಿನಲ್ಲಿ ಏನೂ ಇಲ್ಲದ ವಸ್ತುವಿನಿಂದ ಈ ಶರಣನು ಉದಿಸಿದ. ಶರಣ ಪರಿಪೂರ್ಣ ಸಮಗ್ರತೆಯ ಪ್ರತಿನಿಧಿ.
ಇಂತಹ ವೈಚಾರಿಕ ಮನೋಭೂಮಿಕೆಯುಳ್ಳ ಶರಣರು ಶುಷ್ಕ ಆಚರಣೆಗಳನ್ನು ವೃತಗಳನ್ನು ಹೇಗೆ ಒಪ್ಪಿಕೊಂಡಾರು ಎನ್ನುವುದು ಬಹುತೇಕರ ಪ್ರಶ್ನೆ? ಶರಣರ ವ್ರತಾಚಾರ ಎಂದರೆ ನೈತಿಕವಾದ, ಸತ್ಯಶುದ್ಧವಾದ ಮತ್ತು ನುಡಿದಂತೆ ನಡೆಯುವ ಜೀವನ ನಡೆಸುವುದೇ ವ್ರತವಾಗಿದೆ.
ಶರಣರು ತೋರಿದ ಪ್ರಮುಖ ಐದು ಆಚಾರಗಳುಶರಣರ ಸಂಸ್ಕೃತಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸತ್ಪ್ರವರ್ಟನೆಗೆ ಈ ಕೆಳಗಿನ ಆಚಾರಗಳನ್ನು ಮುಖ್ಯವಾಗಿ ಪಾಲಿಸಲು ತಿಳಿಸಲಾಗಿದೆ.
ಲಿಂಗಾಚಾರ ಇಷ್ಟಲಿಂಗದೊಂದಿಗೆ ನಿತ್ಯವೂ ಅನುಸಂಧಾನ ನಡೆಸುವುದು ಮತ್ತು ಭಕ್ತಿಯಲ್ಲಿ ದೃಢವಾಗಿರುವುದು.
ಸದಾಚಾರ
ಸತ್ಯಶುದ್ಧ ಕಾಯಕ ಮಾಡುವುದು, ಅನ್ಯರ ಸೊತ್ತನ್ನು ಬಯಸದೇ ಇರುವುದು ಹಾಗೂ ನೈತಿಕತೆ ಉಳಿಸಿಕೊಳ್ಳುವುದು.
ಶಿವಾಚಾರ
ಎಲ್ಲ ಜೀವಿಗಳಲ್ಲಿಯೂ ಶಿವನನ್ನು ಕಾಣುತ್ತಾ ಸಮಾನತೆಯಿಂದ ನಡೆದುಕೊಳ್ಳುವುದು.
ವ್ರತ ಹೋದಾಗಳೇ ಇಷ್ಟಲಿಂಗದ
ಕಳೆ ನಷ್ಟವವ್ವಾ
ಅವರು ಲಿಂಗವಿದ್ದ ಭವಿಗಳು!
ಅದು ಹೇಗೆಂದಡೆ; ಪ್ರಾಣವಿಲ್ಲದ ದೇಹದಂತೆ
ಉರಿಲಿಂಗಪೆದ್ದಿಗಳರಸ ಬಲ್ಲ
ನೊಲ್ಲನವ್ವ.
ಇದು ಶರಣ ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಶರಣೆ ಕಾಳವ್ವೆಯವರು ವ್ರತದ ಬಗ್ಗೆ ಅಭಿಮಾನದಿಂದ ಬರೆದ ವಚನ. ಈ ವಚನದಲ್ಲಿ ಆಕೆ ವ್ರತಸ್ಥನು ಇಷ್ಟಲಿಂಗದ ಸಾಕ್ಷಿಯಾಗಿ ನಡೆದುಕೊಳ್ಳಬೇಕು ವ್ರತಕ್ಕೂ, ಪರಮಾತ್ಮನಿಗೂ ಇರುವುದು ನಿಕಟವಾದ ಸಂಬಂಧ. ವ್ರತ ತಪ್ಪಿ ನಡೆದರೆ ಅದು ಪ್ರಾಣವಿಲ್ಲದ ದೇಹವಿದ್ದಂತೆ ಎಂದು ಹೇಳಿದ್ದಾಳೆ. “ವ್ರತವೆಂಬುದು ನಾಯಕ ರತ್ನ. ವ್ರತವೆಂಬುದು ಸುಪ್ಪಾಣಿಯ ಮುತ್ತು. ವ್ರತವೆಂಬುದು ಸುಯಿದಾನ…” ಇದೇ ರೀತಿಯಾಗಿ ಅನೇಕ ವಚನಗಳಲ್ಲಿ ವ್ರತದ ಮಹತಿಯನ್ನು ಒತ್ತಿ ಒತ್ತಿ ಹೇಳಿದ್ದಾರೆ ಕಾಳವ್ವೆ ತಾಯಿ.
ಶರಣರ ಪ್ರಕಾರ, ನೈತಿಕವಾದ, ಸತ್ಯಶುದ್ಧವಾದ ಬದುಕೇ ವ್ರತ. ನುಡಿದಂತೆ ನಡೆಯುವದೇ ವ್ರತ. ವ್ರತವೆಂದರೆ ಶೀಲ. ಯಾವುದಾದರೂ ಒಂದು ವ್ರತವನ್ನು ಆಚರಿಸುವದೆಂದರೆ ಅದರ ಮೇಲಿನ ಆಶೆಯನ್ನು ತ್ಯಜಿಸಿದರೆ ಆತ್ಮಶುದ್ದವಾಗುತ್ತ ಹೋಗುತ್ತದೆ. ಶರಣರು “ತಾವು ವ್ರತಿಗಳೆಂದು ಹೇಳದಿಹುದೇ ವ್ರತ.
ಅಕ್ಕಮ್ಮ ಕೆಳಜಾತಿಯಿಂದ ಬಂದ ದಿಟ್ಟ ಶರಣೆ. ವ್ರತದ ಬಗ್ಗೆ ಅವಳ ನಿಷ್ಠೆ ವಿಶೇಷವಾಗಿತ್ತು.
“ವ್ರತವೆಂದರೇನು ಮನೋವಿಕಾರಿಸುವದಕ್ಕೆ ಕಟ್ಟಿದ ಗೊತ್ತು; ತನ್ನ ಸ್ವಕಾರ್ಯದಿಂದ ಮಾಡುವ ‘ಭಕ್ತನ ವ್ರತವೇ ವ್ರತ’ ಎಂದಿದ್ದಾಳೆ. ಶರಣೆ ಕಾಲಕಣ್ಣಿಯ ಕಾಮವ್ವೆಯು “ವ್ರತಭ್ರಷ್ಟರ ನಿಟ್ಟೋರಿಸುವೆ, ತುರತುರನೆ ತೂರುವೆ” ಎಂಬ ವಚನದಲ್ಲಿ ತತ್ವ ನಿಷ್ಠೆಯಿಲ್ಲದ ವ್ರತಭ್ರಷ್ಟರನ್ನು ನಿಷ್ಠುರವಾಗಿ ಖಂಡಿಸಿರುತ್ತಾಳೆ.
ಮಹಾಮಾನವತಾವಾದಿ ಬಸವಣ್ಣನವರ ಸಪ್ತಸೂತ್ರಗಳನ್ನೊಳಗೊಂಡ ಈ ವಚನದಲ್ಲಿ ಒಂದೊಂದು ಸೂತ್ರವು ಒಂದೊಂದು ವ್ರತದಂತೆ ಗೋಚರವಾಗುತ್ತವೆ.
“ಕಳಬೇಡ! ಕೊಲಬೇಡ!
ಹುಸಿಯ ನುಡಿಯಲು ಬೇಡ!
ಮುನಿಯಬೇಡ! ಅನ್ಯರಿಗೆ ಅಸಹ್ಯ ಪಡಬೇಡ!
ಇದಿರು ಹಳಿಯಲು ಬೇಡ! ತನ್ನ ಬಣ್ಣಿಸಬೇಡ!
ಇದೇ ಅಂತರಂಗ ಶುದ್ಧಿ,


ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ”
ಶುದ್ಧ ಜೀವನದ ಇಂಥ ಸಪ್ತಸೂತ್ರಗಳೇ ನಾವು ಹಿಡಿದುಕೊಳ್ಳಬೇಕಾದ ವ್ರತಗಳು ಎಂದು ಮನದಟ್ಟುವಂತೆ ಹೇಳಿರುತ್ತಾರೆ.
ಕಸಗೂಡಿಸುವ ಕಾಯಕದ ಶರಣೆ ಸತ್ಯಕ್ಕ ಆತ್ಮಗೌರವದ ಪ್ರತೀಕವಾಗಿದ್ದವರು. “ಅಳಿಮನದಿ, ಪರ ದ್ರವ್ಯಕ್ಕೆ ಆಶೆ ಪಡದೇ, ಲಂಚದ ಆಮಿಷಕ್ಕೆ ಬಲಿ ಬೀಳಲಾರೆ” ಎಂದು ಹೇಳುವ ಮೂಲಕ ಅದನ್ನೇ ತನ್ನ ವ್ರತವಾಗಿ ಸ್ವೀಕರಿಸಿದ್ದಳು. ಶರಣೆ ರೇಚವ್ವೆ-“ಬಂಜೆ ಆವಿಂಗೆ ಕ್ಷೀರವುಂಟೇ? ವ್ರತಹೀನರ ಬೆರೆಯಲುಂಟೇ?” ಎನ್ನುವ ಮೂಲಕ ವ್ರತಾಚಾರದ ಬಗ್ಗೆ ತನ್ನ ನಿಷ್ಠೆಯನ್ನು ವ್ಯಕ್ತಪಡಿಸುತ್ತಾರೆ.
ಶರಣೆ ಸೂಳೆ ಸಂಕವ್ವೆಯು
“ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ” ಎಂದು ಹೇಳುವಲ್ಲಿ ಈಗ ತಾನು ಪರಮಾತ್ಮನನ್ನು ಒತ್ತೆ ಹಿಡಿದಿದ್ದು, ಮತ್ತೊಬ್ಬರನ್ನು ಒತ್ತೆ ಹಿಡಿಯಲಾರೆ ಎಂದು ಹೀಗೆ ಒಬ್ಬನಿಗೆ ಆಳಾಗಿ ಇನ್ನೊಬ್ಬರ ನೆನೆಯುವ ಭಕ್ತೆ ತಾನಾದರೆ ತನ್ನ ಹಿಂದ ವೃತ್ತಿಯಲ್ಲಿ ವೇಶ್ಯೆಯರಿಗೆ ಸೂಳೆಯರಿಗೆ ಕೊಡುವ ಶಿಕ್ಷೆ ತನಗೂ ಮತ್ತೆ ಕೊಡಬಹುದು ಎಂದೆನ್ನುತ್ತ ತನ್ನ ಇಷ್ಟ ಲಿಂಗ ನಿಷ್ಠೆಯನ್ನು ತೋರುತ್ತಾಳೆ. ತಾನು ಹಿಡಿದ ವ್ರತದ ಬಗ್ಗೆ ಖಡಾಖಂಡಿತವಾಗಿ ಹೇಳಿರುತ್ತಾರೆ.
ಶರಣೆ ಅಕ್ಕಮ್ಮ ತನ್ನ ಅನೇಕ ವಚನಗಳಲ್ಲಿ ವ್ರತದ ಮಹತ್ವ ಸಾರಿದ್ದಾರೆ:
“ವ್ರತ ಶುದ್ಧವಾಗಿ ನಡೆವಾತನೇ ಎನಗೆ ಅಧೀನದರಸು” ಎಂದು ಶರಣ ಏಲೇಶ್ವರ ಕೇತಯ್ಯನವರು ಹೇಳಿದ್ದಾರೆ. ಮಾನವನು ವ್ರತ ಶುದ್ಧನಾಗಿರಬೇಕು. ವ್ರತವನ್ನು ಇಂದ್ರಿಯನಿಗ್ರಹ ಹಾಗೂ ಆಧ್ಯಾತ್ಮಿಕ ಪ್ರಗತಿಗಾಗಿ ಆಚರಿಸಬೇಕು. ನಿಜವಾದ ವ್ರತಸ್ಥನೆಂದರೆ ಅನುಗ್ರಹ ಹಾಗೂ ಅನುಭಾವದಿಂದ ಕೂಡಿದವನಾಗಿರಬೇಕು. ಶರಣರು, “ಪರಧನವನೊಲ್ಲದಿಪ್ಪುದೇ ವ್ರತ, ಪರ ಸ್ತ್ರೀಯರ ಕೂಡದಿಪ್ಪುದೇ ಶೀಲ” ಎಂದು ಹೇಳಿರುತ್ತಾರೆ. ಶರಣ ಎಳೆಗಾರ ಕಾಮಣ್ಣನವರು ತಮ್ಮ ವಚನದಲ್ಲಿ ಎಲೆಗೂ ವ್ರತಕ್ಕೂ ಹೋಲಿಕೆ ಮಾಡಿ ವ್ರತಭ್ರಷ್ಟರೆಂದರೆ ಎಲ್ಲೂ ಸಲ್ಲದವರು ಎಂದು ಹೇಳಿದ್ದಾರೆ.
ಶರಣೆ ಮುಕ್ತಾಯಕ್ಕನು ತನ್ನ ವಚನದಲ್ಲಿ ”ಹಿಡಿದ ವ್ರತ ಬಿಡದಿರಲು ಅದೇ ಮಹಾಜ್ಞಾನದಾಚರಣೆ”ಯೆಂದು ವ್ರತದ ಮಹತ್ವವನ್ನು ಹೇಳಿರುತ್ತಾರೆ. ಶರಣೆ ಮಸಣಮ್ಮ ‘ಕಾಗೆ ನಾಯ ತಿಂದವರಿಲ್ಲ; ವ್ರತಭ್ರಷ್ಟನ ಕೂಡಿದವರಿಲ್ಲ…” ಎಂಬ ವಚನದಲ್ಲಿ ಕೊಟ್ಟ ಕಾಗೆ, ನಾಯಿಗಳ ಈ ದೃಷ್ಟಾಂತ ವ್ರತಹೀನ, ವ್ರತಭ್ರಷ್ಟರನ್ನು ಉದ್ದೇಶಿಸಿ ಮಾತನಾಡುತ್ತದೆ.
ಶರಣೆ ಗಂಗಮ್ಮ, ಧರ್ಮದ ತಳಹದಿಯ ಮೇಲೆ ಸತ್ಯ, ಶುದ್ಧ, ನಡೆ ನುಡಿಯುವ ವ್ರತವು ಪ್ರಾಣಕ್ಕಿಂತ ಮಿಗಿಲಾದದ್ದು ಎಂದು ವ್ರತದ ಮಹಿಮೆಯನ್ನು ಹೇಳುತ್ತಾರೆ.
ಶರಣ ಮಾದಾರ ಚೆನ್ನಯ್ಯನವರು ಕೂಡ ಇದನ್ನೇ “ನುಡಿದಂತೆ ನಡೆ, ನಡೆದಂತೆ ನುಡಿ” ಎಂದು ಮಾರ್ಮಿಕವಾಗಿ ತಿಳಿಸುತ್ತಾರೆ.
ಶರಣರು ತೋರಿದ ಪ್ರಮುಖ ಐದು ಆಚಾರಗಳು ಶರಣರ ಸಂಸ್ಕೃತಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸತ್ಪ್ರವರ್ಟನೆಗೆ ಈ ಕೆಳಗಿನ ಐದು ಆಚಾರಗಳನ್ನು ಮುಖ್ಯವಾಗಿ ಪಾಲಿಸಲು ತಿಳಿಸಲಾಗಿದೆ.


ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ‌.
ಇವತ್ತು ವೃತ ನೇಮ ಶೀಲ ಎನ್ನುವ ಶರಣರ ವಚನಗಳಲ್ಲಿನ ಪದಗಳನ್ನು ಇಂದಿನ ವೃತ ನೇಮ ಪೂಜೆ ಇತ್ಯಾದಿ ಕರ್ಮಠ ಆಚರಣೆಗೆ ಹೋಲಿಸುತ್ತಾರೆ. ಬಹುತೇಕ ವಚನಕಾರರು ವೃತ ನೇಮ ಅಂತರಂಗದ ಶುದ್ಧಿಗೆ ಲಿಂಗ ಯೋಗ ಜಂಗಮ ಸೇವೆ ಅರಿವಿನ ಬೆರಗಿನ ಶೋಧಕ್ಕೆ ಹಾತೊರೆಯುತ್ತಿದ್ದರು. ತಾನು ಶುದ್ಧ ಮನ ಶುದ್ಧ ಭಾವ ಶುದ್ಧ ಚಿತ್ ಶುದ್ಧವಾಗಿಸಿ ಪರಿಶುದ್ಧ ಕಾಯಕದಿಂದ ಬಂದ ಕಾರೆಯ ತಪ್ಪಲವನ್ನು ಪ್ರಸಾದ ಮಾಡಿ ಸ್ವೀಕರಿಸಿದರು ಶರಣರು.
ಅನೇಕ ಸಂಶೋಧಕರು ವೃತ ನೇಮ ಎಂದ ಕೂಡಲೇ ವೈದಿಕ ವ್ಯವಸ್ಥೆಯ ಆಚರಣೆಗಳೆಂದು ಗ್ರಹಿಸುತ್ತಾರೆ, ಕೆಲವರಂತೂ ವೃತ ನೇಮದವರೆಂದರೆ ತಳ ಸಮುದಾಯದ ಪನ್ಯಾಂಗಣೆಯರು ಎಂತಲೂ ಭಾವಿಸುತ್ತಾರೆ. ಕಾಯವೇ ಕೈಲಾಸ ಶ್ರಮವೇ ತಪ ಜಪ ಎಂದರಿತ ಶರಣರ ವೃತ ಮಹಾಮಾನವನ ಪಥ.

ಆಕರ

ಸಂಕೀರ್ಣ ವಚನ ಸಂಪುಟಗಳು
ಬಸವಣ್ಣನವರ ವಚನ ಸಂಪುಟ
ಬಯಲು ಬ್ಲಾಗ್ 2018

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಸಪ್ರಶ್ನೆ: ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ಸಾಧನೆ

ಸಮಾಜವನ್ನು ಒಗ್ಗೂಡಿಸುವ ಶಕ್ತಿ ಧರ್ಮಕ್ಕಿದೆ :ರಂಭಾಪುರಿಶ್ರೀ

ಮಕ್ಕಳ ಆನಲೈನ್ ಹಾಜರಾತಿ ದಾಖಲಿಸುವಲ್ಲಿ ನಿರ್ಲಕ್ಷ್ಯ ಬೇಡ

ಅಪ್ಪ ಕುಟುಂಬಕ್ಕೆ ಆಲದ ಮರವಿದ್ದಂತೆ: ನಟ ಅಶೋಕ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಸಪ್ರಶ್ನೆ: ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಸಮಾಜವನ್ನು ಒಗ್ಗೂಡಿಸುವ ಶಕ್ತಿ ಧರ್ಮಕ್ಕಿದೆ :ರಂಭಾಪುರಿಶ್ರೀ
    In (ರಾಜ್ಯ ) ಜಿಲ್ಲೆ
  • ಮಕ್ಕಳ ಆನಲೈನ್ ಹಾಜರಾತಿ ದಾಖಲಿಸುವಲ್ಲಿ ನಿರ್ಲಕ್ಷ್ಯ ಬೇಡ
    In (ರಾಜ್ಯ ) ಜಿಲ್ಲೆ
  • ಅಪ್ಪ ಕುಟುಂಬಕ್ಕೆ ಆಲದ ಮರವಿದ್ದಂತೆ: ನಟ ಅಶೋಕ
    In (ರಾಜ್ಯ ) ಜಿಲ್ಲೆ
  • ಅರ್ಹ ಮತದಾರರಿಗೆ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ
    In (ರಾಜ್ಯ ) ಜಿಲ್ಲೆ
  • ಡಿ.೧೩ಕ್ಕೆ ‘ವೃಕ್ಷಥಾನ್ ಹೆರಿಟೇಜ್ ರನ್’: ೩೦ ಸಾವಿರ ನೋಂದಣಿ ಗುರಿ
    In (ರಾಜ್ಯ ) ಜಿಲ್ಲೆ
  • ನಿನ್ನೆ ಡಾಂಬರ್, ಇಂದು ಗುಂಡಿ: ಕಲ್ಯಾಣ ಪಥ್‌ಗೆ ಒಂದೇ ದಿನದ ‘ಕಲ್ಯಾಣ’!
    In (ರಾಜ್ಯ ) ಜಿಲ್ಲೆ
  • ಎ.ವಿ.ಎಸ್.ಆಯುರ್ವೇದ ಕಾಲೇಜಿನಲ್ಲಿಉಚಿತ ಆರೋಗ್ಯ ತಪಾಸಣೆ
    In (ರಾಜ್ಯ ) ಜಿಲ್ಲೆ
  • ಕಾರ್ಖಾನೆ ಉಳಿವಿಗೆ ಶಕ್ತಿಮೀರಿ ಪ್ರಯತ್ನ :ಶಾಸಕ ಪಾಟೀಲ
    In (ರಾಜ್ಯ ) ಜಿಲ್ಲೆ
  • ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿ, ಅನುದಾನ ಲ್ಯಾಪ್ಸ್ ಆಗದಿರಲಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.