ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ವೀರಶೈವ ಲಿಂಗಾಯತ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿ ೨೦೨೬-೨೭ನೇ ಸಾಲಿನ ಸರಕಾರಿ ಕೋಟಾದಲ್ಲಿ ಸರಕಾರಿ/ಖಾಸಗಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಓದಲು ಪ್ರವೇಶ ಪಡೆದ ಅಭ್ಯರ್ಥಿಗಳಿಗಾಗಿ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಮ್.ಬಿ.ಬಿ.ಎಸ್. ವಿದ್ಯಾರ್ಥಿಗೆ ೧ ಲಕ್ಷ ರೂಪಾಯಿ ಒಬ್ಬರಿಗೆ ಹಾಗೂ ಇಂಜಿನಿಯರಿಂಗ್ ಕಾಲೇಜಿದಲ್ಲಿ ಪ್ರವೇಶ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ೫೦ ಸಾವಿರ ರೂಪಾಯಿ ಒಬ್ಬರಂತೆ ಒಟ್ಟು ೩ ಜನರಿಗೆ ಪ್ರತಿವರ್ಷ ಧನಸಹಾಯವನ್ನು ನೀಡಲಾಗುತ್ತದೆ. ಇದರ ಪ್ರಯೋಜನವನ್ನು ಪಡೆಯಬಯಸುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಸ್ವವಿವರಗಳನ್ನು ಒಳಗೊಂಡ ಎಲ್ಲ ಮಾಹಿತಿಯನ್ನು ಹೊಂದಿದ ಅರ್ಜಿಯನ್ನು ಅಕ್ಟೋಬರ್ ೧೫ರ ಒಳಗಾಗಿ (೧೫-೧೦-೨೦೨೬) ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಸಜ್ಜನ ಲೆಔಟ್ ಬಂಜಾರಾ ಕಾಲೇಜ ಎದುರುಗಡೆ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ೯೯೭೨೮೯೩೯೯೮, ೯೪೪೮೨೭೯೨೫೦ ಹಾಗೂ ೯೯೦೦೫೮೨೫೧೭ ಸಂಪರ್ಕಿಸಬಹುದಾಗಿದೆ ಎಂದು ವಿ.ಸಿ. ನಾಗಠಾಣ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವಿಜಯಪುರ ತಿಳಿಸಿದ್ದಾರೆ.
