ಉದಯರಶ್ಮಿ ದಿನಪತ್ರಿಕೆ
ಇಂಡಿ: ರೈತರಿಗೆ ನಿರಂತರ ಹಗಲು ಹೊತ್ತು ಏಳು ತಾಸು ವಿದ್ಯುತ್ ಆಗ್ರಹಿಸಿ ಇಂದು ರೈತರು ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ಶಿರಶ್ಯಾಡದ ರೈತ ಮುಖಂಡ ಬಾಳು ಮುಳಜಿ ಮಾತನಾಡಿ, ವಿದ್ಯುತ್ ಸರಬರಾಜಿನಲ್ಲಿ ಪದೇ ಪದೇ ವ್ಯತ್ಯಯ ಉಂಟಾಗಿ ರೈತರಿಗೆ ತೊಂದರೆ ಯಾಗುತ್ತಿದೆ. ಅದಲ್ಲದೆ ರಾತ್ರಿ ಮೂರು ಗಂಟೆಯಿಂದ ಬೆಳಗ್ಗೆ ೧೦ ಗಂಟೆಯ ವರೆಗೆ ವಿದ್ಯುತ್ ನೀಡುವದರಿಂದ ರೈತರಿಗೆ ತೊಂದರೆ ಅನುಭವಿಸಬೇಕಾಗುತ್ತದೆ. ರಾತ್ರಿ ೧೦ ಗಂಟೆಯ ನಂತರ ಸಿಂಗಲ್ ಫೇಜ್ ವಿದ್ಯುತ ನೀಡುವದರಿಂದ ಮತ್ತು ಅನೇಕ ಕಡೆ ವಿದ್ಯುತ ವ್ಯತ್ಯಯ ಮಾಡುವದರಿಂದ ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗುತ್ತಿದೆ. ವಿದ್ಯುತ ವ್ಯವಸ್ಥೆ ಸರಿಯಾಗಿ ಮಾಡಬೇಕೆಂದು ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.
ರೈತರು ಬರಗಾಲ ಎದುರಿಸುತ್ತಿದ್ದು ಮಳೆಯಿಲ್ಲದೆ ತೊಂದರೆಯಲ್ಲಿದ್ದಾರೆ. ಕೃಷ್ಣಾ ಕಾಲುವೆ ನೀರು ಬಿಡಬೇಕಂದರೆ ವಿದ್ಯುತ್ ತೊಂದರೆ ರೈತರು ಅನುಭವಿಸುತ್ತಿದ್ದಾರೆ ಎಂದರು.
ಅಧಿಕಾರಿ ಘಟನಾ ಸ್ಥಳಕ್ಕೆ ಬಂದು ನಿರಂತರ ಹಗಲು ಏಳು ಗಂಟೆ ವಿದ್ಯುತ್ ನೀಡುವ ಭರವಸೆಯ ಮೇರೆಗೆ ಕಚೇರಿಯ ಬೀಗ ತೆಗೆದರು.
ಸುಮಾರು ೫೦೦ ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅನೀಲಗೌಡ ಬಿರಾದಾರ, ಭೀಮಾಶಂಕರ ಮಸಳಿ, ಅಶೋಕ ಅಕಲಾದಿ, ಪ್ರಶಾಂತ ಲಾಳಸಂಗಿ, ಮಲ್ಲು ದೇವರ, ರಾಮು ಮೇತ್ರಿ, ರಾಜು ಕಟಕದೊಂಡ, ಮೋಹನ ಮೇತ್ರಿ, ಕುಮಾರ ಪ್ರಚಂಡಿ, ಬಾಗೇಶ ಎಚ್, ಪ್ರಶಾಂತ ಅವಟಿ, ಜ್ಯೋತಿಬಾ ಕದಮ್, ದಶರಥ ಕದಮ, ಇರಸಂಗಪ್ಪ ನೂಲೂರ ಮತ್ತಿತರಿದ್ದರು.

