ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಧರಣಿ ಸತ್ಯಾಗ್ರಹ ಮುಂದುವರೆದಿದೆ.
ಮಂಗಳವಾರ ಮಹಿಳಾ ಬಿಜೆಪಿ ಕಾರ್ಯಕರ್ತೆಯರು ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು.
ಮಹಿಳಾ ಮೋರ್ಚಾ ಅಧ್ಯಕ್ಷೆ ಬಸಮ್ಮ ಮರಡಿ, ವಿಜಯಲಕ್ಷ್ಮಿ ರೂಗಿಮಠ, ಗೀತಾ ರಾಠೋಡ, ಸುಧಾ ಕುಂಬಾರ, ಅಶ್ವಿನಿ ಕೊಟಗೊಂಡ ಶ್ರೀದೇವಿ ಕುಲಕಣಿ, ಶ್ರೀದೇವಿ ನಾವಿ ಮಾತನಾಡಿ, ಜಿಲ್ಲೆಯ ವಿಜಯಪುರ, ಕೋಲಾರ ಮತ್ತು ನಿಡಗುಂದಿ ತಾಲೂಕುಗಳನ್ನು ಬರ ಪೀಡಿತ ತಾಲೂಕು ಗಳಾಗಿ ಘೋಷಿಸಿರುವದು ಹಿನ್ನೆಲೆಯಲ್ಲಿ ಭೌಗೋಳೀಕವಾಗಿ ಸಮೀಪದಲ್ಲಿರುವ ಹಾಗೂ ಸಮಾನ ಹವಾಮಾನ ಪರಿಸ್ಥಿತಿಗಳನ್ನು ಹೊಂದಿರುವ ಇಂಡಿ ತಾಲೂಕಿನಲ್ಲಿ ಮಳೆಯ ಕೊರತೆ ಮತ್ತು ಕೃಷಿ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಮರುಪರಿಶೀಲಿಸುವದು ಅಗತ್ಯವಾಗಿದೆ. ಇಂಡಿ ತಾಲೂಕಿನ ರೈತರು ಎದುರಿಸುತ್ತಿರುವ ಬೆಳೆ ಪರಿಸ್ಥಿತಿ ಮಣ್ಣಿನ ತೇವಾಂಶ ಕೊರತೆ ಬಿತ್ತನೆ ಹಾಗೂ ಬೆಳೆ ಸ್ಥಾಪನೆಯ ಮೇಲಿನ ಪರಿಣಾಮ ಮತ್ತು ಸ್ಥಳೀಯವಾಗಿ ಕಂಡು ಬಂದಿರುವ ಒಣಹವೆಯ ಅವಧಿಗಳನ್ನು ಪರಿಗಣಿಸಿ ತಾಲೂಕನ್ನು ಪರಿಗಣಿಸಬೇಕು ಎಂದರು.
ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣಿ, ದೇವೆಂದ್ರ ಕುಂಬಾರ, ಶಂಕರಗೌಡ ಪಾಟೀಲ, ಬಾಳು ಮುಳಜಿ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ, ಸಂತೋಷ ಪಾಟೀಲ, ರಾಮಸಿಂಗ ಕನ್ನೊಳ್ಳಿ, ಮಹೇಶ ಹೂಗಾರ, ಮಲ್ಲು ಗುಡ್ಲ, ರಾಜಕುಮಾರ ಸಗಾಯಿ, ಶಿವಯೋಗಿ ರೂಗಿಮಠ, ಪ್ರಶಾಂತ ಗವಳಿ, ಪ್ರಶಾಂತ ಲಾಳಸಂಗಿ, ಮಂಜು ದೇವರ, ಶ್ರೀಶೈಲಗೌಡ ಪಾಟೀಲ, ಮಲ್ಲು ಪಡನೂರ ಈರಣ್ಣಗೌಡ ಪಾಟೀಲ, ಜೆಟ್ಟು ಮರಡಿ, ಮಹೇಶ ಹೂಗಾರ ಮತ್ತಿತರಿದ್ದರು.

