ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿವಗಿರಿ ಶಾಖೆಯ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಆಗಸ್ಟ್ ೧೬ರಂದು ಬೆಳಿಗ್ಗೆ ೯ರಿಂದ ಸಂಜೆ ೫ರವರೆಗೆ ಕಿರಾಣಾ ಬಜಾರ್ ಮತ್ತು ಎಲ್.ಬಿ.ಎಸ್. ಫೀಡರ್‌ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಳೆ ಆನಂದ್ ಎಲೆಕ್ಟ್ರಿಕಲ್ಸ್ ವತಿಯಿಂದ ಲಿಂಕ್ ಲೈನ್ ಕಾಮಗಾರಿ ಕೈಗೊಳ್ಳಲು ಲೈನ್ ಕ್ಲಿಯರೆನ್ಸ್ ನೀಡಬೇಕಿರುವುದರಿಂದ ಇಂಡಿ ರಸ್ತೆ, ಬಿಜ್ಜರಗಿ ಮೋಟಾರ್ಸ್, ಜ್ಯೋತಿ ಪೋಲ್ ಫ್ಯಾಕ್ಟರಿ, ಬೊಂಬಾಳ ಅಗಸಿ, ಎ.ಪಿ.ಎಂ.ಸಿ., ಗಣಪತಿ ಚೌಕ್, ಎಲ್.ಬಿ.ಎಸ್. ಮಾರುಕಟ್ಟೆ, ರಜಪೂತ್ ಗಲ್ಲಿ, ಕೆ.ಹೆಚ್.ಬಿ. ಹಂಚಿನಾಳ ಹಾಗೂ ವಿಜಯ್ ಟೈರ್ಸ್ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ, ವಿಜಯಪುರ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
