ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಇಸ್ಲಾಮಿಕ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನೀಯರನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಉಪನಿರ್ದೇಶಕ(ಅಭಿವೃದ್ಧಿ) ಎಸ್.ಎಸ್.ಮುಜಾವರ್ ಸನ್ಮಾನಿಸಿದರು.
ಸಿಂದಗಿ ಪಟ್ಟಣದ ಮೀರಜ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಅಗಸ್ಟ್ ೧ ರಂದು ಬಿಜಾಪೂರ ಮಹಮ್ಮದಿಯಾ ನಾತ ಕಮಿಟಿ ಇವರಿಂದ ಜರುಗಿದ ಇಸ್ಲಾಮಿಕ್ ರಸಪ್ರಶ್ನೆ ಮತ್ತು ನಾಥಖಾನಿ ಸ್ಪರ್ಧೆಯಲ್ಲಿ ಸತತ ಎರಡನೆಯ ಬಾರಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನೀಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಪರ್ಧೆಯಲ್ಲಿ ಸಿಂದಗಿ ತಾಲ್ಲೂಕಿನ ಒಟ್ಟು ೯ ಉರ್ದು ಪ್ರೌಢಶಾಲೆಗಳು ಭಾಗವಹಿಸಿದ್ದವು.

