ಉದಯರಶ್ಮಿ ದಿನಪತ್ರಿಕೆ
ಇಂಡಿ: ಧರ್ಮಸ್ಥಳ ಸಂಘವು ಕೇವಲ ಸಾಲ ಕೊಡುವದಷ್ಟೇ ಅಲ್ಲದೆ ನೂರಾರು ಜನಪಯೋಗಿ ಯೋಜನೆ ಕೈಗೆತ್ತಿ ಕೊಂಡಿದೆ. ದುಶ್ಚಟ ಮುಕ್ತ ಸಮಾಜ ನಿರ್ಮಿಸಲು ಜನಜಾಗೃತಿ ವೇದಿಕೆ ಮಾಡುತ್ತಿರುವದು ಶ್ಲಾಘನೀಯವಾಗಿದೆ. ವಯೋವೃದ್ದರಿಗೆ ಮಾಶಾಸನವನ್ನು ನೀಡಿ ಸಹಕರಿಸುತ್ತಿದೆ ಎಂದು ಇಂಡಿಯ ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಪಟ್ಟಣದ ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಸ್ಥೆಯ ಕಚೇರಿಯ ಆವರಣದಲ್ಲಿ ನಡೆದ ಹೊಸದಾಗಿ ಮಂಜುರಾದ ಮಾಶಾಸನ ಪತ್ರ, ವ್ಹೀಲ್ ಚೇರ ಮತ್ತು ವಾಕಿಂಗ ಸ್ಟಿಕ್ ವಿತರಿಸಿ ಮಾತನಾಡಿದರು.
ಜೆಡಿ ಎಸ್ ಪ್ರಮುಖ ಬಿ.ಡಿ.ಪಾಟೀಲ ಮಾತನಾಡಿ, ಸ್ವಾಸ್ಥ ಸಮಾಜವನ್ನು ನಿರ್ಮಾಣ ಮಾಡುವ ಮೂಲಕ ನಾಡಿನ ಕಲ್ಯಾಣದ ಆಶಯ ಹೊಂದಿರುವ ಸಂಸ್ಥೆಯು ಮಹಿಳಾ ಸಬಲೀಕರಣ, ವ್ಯಸನಮುಕ್ತ ಸಮಾಜ, ಆರೋಗ್ಯದ ಕಾಳಜಿ, ಪರಿಸರದ ಕಾಳಜಿ, ದೇವಸ್ಥಾನಗಳ ರಕ್ಷಣೆ, ಜೀರ್ಣೋದ್ದಾರ, ಮೂಲಕ ಜಾತ್ಯಾತೀತವಾಗಿ ಧರ್ಮಾತೀತವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಎಂದರು.
ಸಂಸ್ಥೆಯ ಯೋಜನಾಧಿಕಾರಿ ನಟರಾಜ ಯೋಜನೆಯಿಂದ ನಡೆಯುತ್ತಿರುವ ಕಾರ್ಯಕ್ರಮ ಬಗ್ಗೆ ಮಾತನಾಡಿದರು.
ಸಿದ್ದು ಡಂಗಾ, ಪ್ರಕಾಶ ಬಿರಾದಾರ, ಶಾರುಖ ವಲಯ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರು ಸೇವಾ ಪ್ರತಿನಿಧಿಗಳು ಮತ್ತಿತರಿದ್ದರು.
ಫಲಾನುಭವಿಗಳಾದ ಪಾರ್ವತಿ ನಾಗರಹಳ್ಳಿ, ಬಸಲಿಂಗವ್ವ ಪಾಟೀಲ, ಯಲ್ಲವ್ವ ಕೊತರ, ಶಂಕ್ರಪ್ಪ ಸಿದ್ದಪ್ಪ, ಚಂದ್ರಶೇಖರ ತಿಪ್ಪಣ್ಣ, ಸವಿತಾ ಸಂಗಪ್ಪ ಇವರಿಗೆ ವ್ಹಿಲ್ ಚೇರ್, ವಾಕಿಂಗ ಸ್ಟಿಕ್ ಮತ್ತು ಮಾಶಾಸನ ಪತ್ರ ವಿತರಿಸಲಾಯಿತು.
ವಲಯ ಮೇಲ್ವಿಚಾರಕಿ ಸರಸ್ವತಿ, ಮತ್ತಿತರಿದ್ದರು.