ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ರಾಂಪೂರ ರಸ್ತೆಯ ಹೊರ ವಲಯದಲ್ಲಿರುವ ಸಮರ್ಥ ವಿದ್ಯಾವಿಕಾಸ ಸಂಸ್ಥೆಯ ಪ್ರೇರಣಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಅಪೇಕ್ಷಾ ಹುಗ್ಗಿ ಅವರು ಓದಿದ ಶಾಲೆಗೆ ರೂ.೧.೧೨ಲಕ್ಷ ಮೌಲ್ಯದ ಡಿಜಿಟಲ್ ಬೋರ್ಡ್ ಕಾಣಿಕೆಯಾಗಿ ನೀಡಿದ್ದಾರೆ.
ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಪ್ರಯುಕ್ತ ಮುಂದಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹುಗ್ಗಿ ಕುಟುಂಬ ಡಿಜಿಟಲ್ ಬೋರ್ಡ್ನ್ನು ನೀಡಿದ್ದಾರೆ. ವಿದ್ಯಾರ್ಥಿನಿ ಅಪೇಕ್ಷಾ, ಅವರ ತಂದೆ ಎಂ.ಆರ್.ಹುಗ್ಗಿ ಹಾಗೂ ತಾಯಿ ದ್ರಾಕ್ಷಾಯಿಣಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ನಿರ್ದೇಶಕ ಪಿ.ಡಿ.ಕುಲಕರ್ಣಿ ಮುಖ್ಯಗುರುಮಾತೆ ಎಸ್.ಐ.ಅಸ್ಕಿ, ಬಿ.ಎಸ್.ಲಾಳಸಂಗಿ, ಸಂಗೀತ ಶಿಕ್ಷಕ ವಿನಾಯಕ ಕುಲಕರ್ಣಿ, ಜ್ಞಾನೇಶ್ವರ ಹುಗಾರ, ಅಭಿಷೇಕ, ಭಾಗ್ಯಾಶ್ರೀ ಮುರುಡಿ, ಎಸ್. ನಿವೇದಿತಾ ಉಮ್ಮರಗಿ, ಶೈನಾಜ್, ಯಾಸ್ಮೀನ್, ಅಶ್ವೀನಿ, ಕವಿತಾ ಪೂಜಾರ, ದ್ರಾಕ್ಷಾಯಣಿ ಹುಗ್ಗಿ, ಸಚಿನ ಮಠಪತಿ, ಗುರುರಾಜ ಮುದ್ದೇಬಿಹಾಳ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.

