ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರೌಢಶಾಲೆಯಲ್ಲಿ ೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-೧ರಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಈ ಪರೀಕ್ಷೆಯಲ್ಲಿ ಮೈಮೂನಾಬೇಗಂ ಕಾಚೂರ ಅವರು ೬೨೫ ಅಂಕಗಳಿಗೆ ೫೭೦ (೯೧.೨೦%) ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜೇಶ್ವರಿ ಕುರಿ ೫೫೫ ಅಂಕಗಳು (೮೮.೮%) ಪಡೆದು ದ್ವಿತೀಯ ಸ್ಥಾನ ಹಾಗೂ ಸಂಜನಾ ಬಡಿಗೇರ ೫೨೬ ಅಂಕಗಳು (೮೪.೧೬%) ಪಡೆದು ತೃತೀಯ ಸ್ಥಾನಗಳಿಸಿದ್ದಾರೆ. ಒಟ್ಟು ೯೮ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿತರಾಗಿದ್ದು, ಅದರಲ್ಲಿ ೯೮ ಮಂದಿ ಹಾಜರಾಗಿ ೮೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ೨ ಮಂದಿ ಡಿಸ್ಟಿಂಕ್ಷನ್, ೩೦ ಮಂದಿ ಪ್ರಥಮ ದರ್ಜೆ, ೨೩ ಮಂದಿ ದ್ವಿತೀಯ ದರ್ಜೆ ಮತ್ತು ೩೩ ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಶಾಲೆಯ ಒಟ್ಟಾರೆ ಫಲಿತಾಂಶ ೯೦% ಆಗಿದ್ದು, ಇದು ಸಂತಸದ ವಿಷಯವಾಗಿದೆ.
ಈ ಸಾಧನೆಗೆ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾರಂಗಮಠ, ಸಿಂದಗಿ. ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ನಿರ್ದೇಶಕರು, ಮುಖ್ಯೋಪಾಧ್ಯಾಯ ಎಸ್.ವೈ.ಯರಲಡ್ಡಿ ಹಾಗೂ ಸಿಬ್ಬಂದಿವರ್ಗ ಸಂತೋಷ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

