ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಬಂದಾಳ ರಸ್ತೆಯಲ್ಲಿರುವ * ವಿವೇಕ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇಕಡ 100 ರಷ್ಟು ಆಗಿದೆ.
ಒಟ್ಟು 13 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಕುಮಾರಿ ಲಕ್ಷ್ಮಿ ಸುಗಯ್ಗೋಳ 625 ಕ್ಕೆ 575,92% ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ಕುಮಾರ ಪ್ರವೀಣ ಅಗಸರ 600ಕ್ಕೆ 568, 91% ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಕುಮಾರ ಪೃಥ್ವಿ ಲೋಣಿ 600ಕ್ಕೆ 566, 90.56% ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ಕುಮಾರ ಸಿದ್ಧಾರೂಡ 600ಕ್ಕೆ 555,88.8%, ಸ್ನೇಹಾ ಹೆರೂರ 600ಕ್ಕೆ 553,88.48%, ಭೂಮಿಕಾ ಹಳಿಮನಿ 600ಕ್ಕೆ 549, 87.84%, ಪ್ರಮೋದ್ ಭಾಸಗಿ 600 ಕ್ಕೆ 537, 85.92%, ಶ್ರೀನಿಧಿ ಕುಲಕರ್ಣಿ 600 ಕ್ಕೆ 529,85% ಅಂಕಗಳನ್ನು ಪಡೆದಿದ್ದಾರೆ. ಒಟ್ಟು 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ( ಡಿಸ್ಟಿಂಕ್ಷನ್) ಪಾಸಾದರೆ, ಆದಿತ್ಯ ಅರಳಗುಂಡಗಿ 498, ಆನಂದ ಮಾದರ್ 475, ಕಾವ್ಯ ಕತ್ತಿ 468, ಅರ್ಪಿತಾ ಬಿರಾದಾರ 430, ಮಹಮದ್ ಕೈಫ್ 396 ಅಂಕಗಳನ್ನು ಪಡೆದಿದ್ದಾರೆ 5 ವಿದ್ಯಾರ್ಥಿಗಳು ಉನ್ನತ ಶ್ರೇಣಿ( ಫಸ್ಟ್ ಕ್ಲಾಸ್ ) ಯಲ್ಲಿ ಪಾಸಾಗಿದ್ದಾರೆ. ಒಟ್ಟು ಶಾಲೆಯ ಫಲಿತಾಂಶ 100ಕ್ಕೆ 100ರಷ್ಟು ಆಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ ಹೆಗ್ಗನದೊಡ್ಡಿ ಮತ್ತು ಶಾಲೆಯ ಶಿಕ್ಷಕ ವೃಂದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

