ಉದಯರಶ್ಮಿ ದಿನಪತ್ರಿಕೆ
ಇಂಡಿ: ಶೈಕ್ಷಣಿಕ ವಲಯ ವ್ಯಾಪ್ತಿಗೊಳಪಟ್ಟ ಸಾಯಿ ಖಾಸಗಿ ಪ್ರೌಢಶಾಲೆಯಲ್ಲಿ ಎಐ ಟೀಚರ್ ಗಮನ ಸೆಳೆಯುತ್ತಿದೆ.
ತಾಲೂಕಿನಲ್ಲಿಯೇ ಖಾಸಗಿ ಶಾಲೆ ವಿದ್ಯಾರ್ಥಿಗಳ ಬೋಧನೆಗೆ ಎಐ ಟೀಚರ್ ಆದಿತಿ ಯನ್ನು ಪರಿಚಯಿಸುವ ದಿಟ್ಟ ಹೆಜ್ಜೆ ಇಟ್ಟಿದೆ.
ಸಾಯಿ ಶಾಲೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಶಿಕ್ಷಕಿ ಕಾರ್ಯ ನಿರ್ವಹಣೆ ಸಜ್ಜಾಗಿದ್ದು ಏ.೧೨ ರಂದು ವಿದ್ಯುಕ್ತ ಚಾಲನೆ ನೀಡಲಾಗಿದೆ.
ನೀತಿ ಆಯೋಗ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿ ನಿರ್ಮಿಸಿಲಾದ ಆದಿತಿ ಸಾಂಪ್ರದಾಯಿಕ ಬೋಧನಾ ವಿಧಾನಗಳನ್ನು ಕ್ರಾಂತಿಗೊಳಿಸುವ ಗುರಿ ಹೊಂದಿರುವ ಹಲವಾರು ವೈಶಿಷ್ಟಗಳನ್ನು ಹೊಂದಿದೆ. ೨೦ ಭಾಷೆಗಳನ್ನು ಮಾತನಾಡುವ ಮತ್ತು ಪ್ರಶ್ನೆಗಳನ್ನು ನಿಭಾಯಿಸುವ ಸಾಮಥ್ಯದೊಂದಿಗೆ ಆದಿತಿ ಪ್ರತಿ ವಿದ್ಯಾರ್ಥಿಗೆ ಕಲಿಕೆಯ ಅನುಭವ ನೀಡುತ್ತದೆ. ಸೀರೆಯಲ್ಲಿ ಕಂಗೊಳಿಸಿದ ಆದಿತಿ ಎಐ ಶಿಕ್ಷಕಿ ವಿದ್ಯಾರ್ಥಿಗಳ ಸಂವಾದ ನಡೆಸುತ್ತದೆ. ಕೈ ಕುಲುಕುತ್ತದೆ. ವಿದ್ಯಾರ್ಥಿಗಳಿಗೆ ಬಹುಬೇಗ ಇಷ್ಟವಾಗುತ್ತದೆ. ಮಗು ಯಾವದೇ ಪ್ರಶ್ನೆ ಕೇಳಿದರೂ ಎಐ ಶಿಕ್ಷಕಿ ಥಟ್ ಅಂತ ಉತ್ತರ ಹೇಳುತ್ತದೆ. ವಿಶೇಷವಾಗಿ ಇಂಗ್ಲೀಷ್ ಕಲಿಕೆಗೆ ಹೆಚ್ಚು ಪೂರಕವಾಗಲಿದೆ.
ಎಜುಕೇಷನ್ ಕನ್ಸಲಟನ್ಸಿಯವರ ಜೊತೆಗೆ ಒಪ್ಪಂದ ಮಾಡಿಕೊಂಡು ಬೆಂಗಳೂರಿನಿಂದ ಆನ್ ಲೈನ್ ತರಬೇತಿ ನಡೆಯುತ್ತದೆ.
“ಖಾಸಗಿ ಶಾಲೆಯಲ್ಲಿ ಆಂಗ್ಲ ಬಾಷಾ ಮಾಧ್ಯಮವನ್ನು ಪ್ರಥಮವಾಗಿ ಪ್ರಾರಂಭಿಸಿ ತಂತ್ರಜ್ಞಾನದ ಶಿಕ್ಷಣ ಅಭಿವೃದ್ದಿ ಪಡಿಸಿದ್ದು ಅದರ ಮುಂದು ವರೆದ ಭಾಗವಾಗಿ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಆರ್ಟಿಫಿಸಿಯಲ್ ಇಂಟೆಲಿಜೆನ್ಸ ಟೀಚರನ್ನು ಖಾಸಗಿ ಶಾಲೆಗೆ ಪರಿಚಯಿಸಲಾಗುತ್ತಿದೆ.”
– ಶಂಕರ ಕಲಘಟಗಿ
ಆಡಳಿತಾಧಿಕಾರಿಗಳು, ಸಾಯಿ ಶಿಕ್ಷಣ ಸಂಸ್ಥೆ, ಇಂಡಿ

