ಕುಪ್ಮಾ ವಿಜಯಪುರ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ | ಕುಪ್ಮಾ ರಾಜ್ಯ ಸಮಿತಿಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯಾವುದೇ ಒಂದು ಸಮಸ್ಯೆಯನ್ನು ಸರಿ ಮಾಡಬೇಕಾದರೆ. ಅಥವಾ ಯಾವುದೇ ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಕೇವಲ ಒಬ್ಬರಿಂದ ಆಗುವ ಮಾತಲ್ಲ. ಬದಲಿಗೆ ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ಅದನ್ನು ಸರಿಮ ಮಾಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಖಾಸಗಿ ಹಾಗೂ ಅನುದಾನ ರಹಿತ ಕಾಲೇಜುಗಳ ಸಮಸ್ಯೆಗಳನ್ನು ಕೇವಲ ಒಂದೋ ಎರಡೋ ಕಾಲೇಜಿನವರು ಸೇರಿ ಹೋರಾಡಿದರೆ ಅದಕ್ಕೆ ನ್ಯಾಯ ಸಿಗುವುದಿಲ್ಲ. ಆದರೆ ಒಂದು ಅಂಘಟನೆಯ ಮೂಲಕ ಹೋರಾಡಿದಾಗ ಅದಕ್ಕೆ ಬೆಲೆ ಬರುತ್ತದೆ ಎನ್ನುವ ಕಾರಣಕ್ಕಾಗಿ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ ಪ್ರಾರಂಭಗೊಂಡಿತು ಎಂದು ಕುಪ್ಮಾ ರಾಜ್ಯ ಸಮಿತಿಯ ಉಪಾಧ್ಯಕ್ಷ ಹಾಗೂ ಕಾರ್ಕಳದ ಜ್ಞಾನಸುಧಾ ಸಂಸ್ಥೆಯ ಸಂಸ್ಥಾಪಕ ಸುಧಾಕರ ಶೆಟ್ಟಿ ಹೇಳಿದರು.
ನಗರದ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ, ವಿಜಯಪುರ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಹಾಗೂ ಸದಸ್ಯರ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿ ಸ್ಥಾನವಹಿಸಿಕೊಂಡು ಮಾತನಾಡಿದ ಅವರು; ಸರಳತೆಯ ಸಾಕಾರ ಮೂರ್ತಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯರು ನಡೆದಾಡಿದ ಭೂಮಿಯಲ್ಲಿ ಇಂದು ಈ ಸಂಘಟನೆ ತನ್ನ ಬೇರನ್ನು ಊರುತ್ತಿರುವುದು ಇಡೀ ಕುಪ್ಮಾ ಸಂಘಕ್ಕೆ ಒಂದು ಶಕ್ತಿ ತಂದಂತಾಗಿದೆ. ಪೂಜ್ಯರ ಆಶೀರ್ವಾದ ಪಡೆದುಕೊಂಡು ಈ ಸಂಘಟನೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯನ್ನು ತರುವುದರ ಮೂಲಕ ಸಮಸ್ಯೆಗಳೇನೇ ಇದ್ದರು ಪರಿಹಾರ ಕಂಡುಕೊಂಡು ಮಕ್ಕಳ ಹಾಗೂ ಪಾಲಕರ ಕನಸನ್ನು ನನಸು ಮಾಡುವುದಕ್ಕೆ ಕಂಕಣಬದ್ಧರಾಗೋಣ ಎಂದು ಹೇಳಿದರು.
ಕುಪ್ಮಾ ಉಪಾಧ್ಯಕ್ಷ ಹಾಗೂ ಮಂಗಳೂರಿನ ಎಕ್ಸಲಂಟ್ ಕಾಲೇಜಿನ ಸಂಸ್ಥಾಪಕ ಯುವರಾಜ್ ಜೈನ ಮಾತನಾಡಿ; ಒಂದು ಸಂಘಟನೆಯಾಗಿ ಇಂದು ಕುಪ್ಮಾ ಅಸ್ಥಿತ್ವಕ್ಕೆ ಬಂದಿದ್ದು ಎಲ್ಲರೂ ಕೈಜೋಡಿಸಿ ನಡೆದರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಇದನ್ನು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಸುವ ಕಾರ್ಯವನ್ನು ಮಾಡೋಣ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣದ ಉಪ ನಿರ್ದೇಶಕ ಕೆ.ಎ.ಉಪ್ಪಾರ ಕಾರ್ಯಕ್ರಮ ಉದ್ಘಾಟಿಸಿದರು.
ನಂದಿ ಶುಗರ‍್ಸ್ ನಿರ್ದೇಶಕ ಹಾಗೂ ಶ್ರೀ ಶರಣಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯ ಸತ್ಯಜಿತ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣದ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್ ಬಸವರಾಜ್ ಕೌಲಗಿ, ಜಗಜ್ಯೋತಿ ಬಸವೇಶ್ವರ ಸಂಸ್ಥೆಯ ಅಧ್ಯಕ್ಷ ಎಲ್.ಬಿ ಪಾಟೀಲ್ ಉಪಸ್ಥಿತರಿದ್ದರು.
ಶ್ರೀ ಶರಣಬಸವೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಜ್ವಲ್ ಪ್ರಸ್ತಾವಿಕ ಮಾತನಾಡಿದರು, ತುಂಗಳ ಪ.ಪೂ ಕಾಲೇಜಿನ ಪ್ರಾಂಶುಪಾಲ ಜಯತೀರ್ಥ ಕುಲಕರ್ಣಿ ವಂದಿಸಿದರು.
ಕಗೌರವ ಅಧ್ಯಕ್ಷರಾಗಿ ಬಸವರಾಜ್ ಕೌಲಗಿ
ಇದೇ ಸಂದರ್ಭದಲ್ಲಿ ಕುಪ್ಮಾ ವಿಜಯಪುರದ ಗೌರವ ಅಧ್ಯಕ್ಷರಾಗಿ ಬಸವರಾಜ್ ಕೌಲಗಿ, ಅಧ್ಯಕ್ಷರಾಗಿ ಎಲ್.ಬಿ ಪಾಟೀಲ್, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಎಸ್ ಪೂಜಾರಿ, ಹಾಗೂ ಸಿ.ಎಸ್.ಅವಟಿ ಮತ್ತು ರಾಜಶ್ರೀ ಜುಗತಿ, ಕಾರ್ಯದರ್ಶಿಯಾಗಿ ಹೇಮಲತಾ ಬೆನಕಟ್ಟಿ, ಜಂಟೀ ಕಾರ್ಯದರ್ಶಿಯಾಗಿ ಮೀನಾಕ್ಷಿ ಕರಡಿ, ಖಜಾಂಚಿಯಾಗಿ ಕೆ.ಎಂ ಗುನ್ನಾಪುರ ಹಾಗೂ ಸದಸ್ಯರಾಗಿ ಜೆ.ಎಸ್ ಬೋಳೇಗಾಂವ್, ದಿಲಿಪಕುಮಾರ ಪೂಜಾರಿ, ಬಸವರಾಜ ಸೊನ್ನದ, ಶಂಬುಲಿಂಗಯ್ಯ ಕರ್ಪೂರಮಠ, ಶಹನೂರ, ಶಾಜು ಜೋಸೇಫ್, ಕುಮಾರಗೌಡ ಹರ್ನಾಳ, ಸಂಪ್ರದಾ ಪಾಟೀಲ್ ಪದಗ್ರಹಣ ಮಾಡಿದರು.

