ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲ್ಲೂಕಿನ ಕನ್ನೂರ ಸವಾಯಿ ವಸ್ತಿ ತೋಟದಲ್ಲಿರುವ ಅಸಂಖ್ಯಾತ ಭಕ್ತರ ಆರಾಧ್ಯದೈವ ಹಜರತಪೀರ ದಗಾ೯ದ ಶಾಹನೂರವಲಿ ಬಾಬಾ ದೇವರ ಜಾತ್ರಾ ಮಹೋತ್ಸವ ಇದೇ ಎಪ್ರಿಲ್ 9 ರಂದು ಗುರುವಾರ ವೈಭವದಿಂದ ಜರುಗಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ನಡೆಯಲಿರುವ ಶಾಹನೂರವಲಿ ಬಾಬಾ ದೇವರ ಜಾತ್ರಾ ಉತ್ಸವ ದೇವರ ಪೂಜಾರಿಯಾಗಿರುವ ಶ್ರೀಮತಿ ಶಾರದಾಬಾಯಿ ಮೋಹನ ರಾಠೋಡ ಹಾಗೂ ಸಕಲ ಸದ್ಭಕ್ತರ ಸಹಾಯ, ಸಹಕಾರದಿಂದ ಆಯೋಜಿಸಲಾಗಿದೆ.
ಈ ಭಾಗದ ಎಲ್ಲ ಸಮಾಜದವರು ಶ್ರದ್ಧಾಭಕ್ತಿಯಿಂದ ಶಾಹನೂರವಲಿ ಬಾಬಾ ದೇವರನ್ನು ಪೂಜ್ಯ ಭಾವನೆಯಿಂದ ಆರಾಧಿಸಿ ಗೌರವಿಸುತ್ತಾರೆ. ತಮ್ಮ ಸನ್ನಿಧಿಯಲ್ಲಿ ಬಂದ ಭಕ್ತರಿಗೆ ಎದುರಾಗಿರುವ ಸಂಕಷ್ಟಗಳನ್ನು ನಿವಾರಿಸಿ ಜೀವನದಲ್ಲಿ ನೆಮ್ಮದಿ ಕರುಣಿಸುತ್ತಾರೆಂಬ ಆಚಲ ನಂಬಿಕೆ ಭಕ್ತ ವಲಯದಲ್ಲಿ ಇರುವುದರಿಂದ ಬಾಬಾ ಜಾಗೃತ ದೇವರಾಗಿ ಇಲ್ಲಿ ನೆಲೆಗೊಂಡಿದ್ದಾರೆ. ಬಾಬಾರ ಪವಾಡಗಳನ್ನು ಪೂಜಾರಿಣಿ ಶ್ರೀಮತಿ ಶಾರದಾಬಾಯಿ ಮೋಹನ ಚವ್ಹಾಣ ಭಕ್ತರಿಗೆ ಮನದಟ್ಟು ಮಾಡಿಕೊಟ್ಟು ಭಕ್ತಿಯ ರಸಭಾವವನ್ನು ಸೃಜೀಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಇವರ ನೇತೃತ್ವದಲ್ಲಿ ಹಾಗೂ ಭಕ್ತರ ಸಹಕಾರದಲ್ಲಿ ಗುರುವಾರ ದಗಾ೯ದ ಈ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

