ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಕಾಲೇಜಿನ 2024-25ನೇ ಸಾಲಿನಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ಪ್ರಶಿಕ್ಷಣಾರ್ಥಿಗಳು ಮೂರು ರ್‍ಯಾಂಕ್ ಪಡೆದಿದ್ದಾರೆ. ವಿಶ್ವವಿದ್ಯಾಲಯ ಕೊಡಲ್ಪಡುವ ಮೂರೂ ರ್‍ಯಾಂಕ್ ಗಳನ್ನು ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ಸುಷ್ಮಾ ತಂಬಾಕು ಸುವರ್ಣ ಪದಕದೊಂದಿಗೆ ಪ್ರಥಮ ರ‍್ಯಾಂಕ್, ಅಮುಲ ಗುಲಗಾಂವಿ ದ್ವಿತೀಯ ರ‍್ಯಾಂಕ್, ರಮೇಶ ಅಂಬಿ ತೃತೀಯ ರ‍್ಯಾಂಕ್ ಪಡೆದು ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ. ರ‍್ಯಾಂಕ್ ಬಂದ ಪ್ರಶಿಕ್ಷಣಾರ್ಥಿಗಳಿಗೆ ಬಿ.ಎಲ್.ಡಿ.ಇ ಅಂಗ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಶ್ರೀಕಾಂತ ಲಗಳಿ, ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಅರುಣಕುಮಾರ ಶಹಾ, ಪ್ರಾಂಶುಪಾಲರಾದ ಪ್ರೊ.ಕೆ ಜೆ. ಜೀರಗಾಳಿ, ಉಪನ್ಯಾಸಕ ವೃಂದ, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

