Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 11, 2026

ನಗರದ ಇಬ್ಬಂದಿತನ – ನಾವು ಕಟ್ಟಿಕೊಳ್ಳುತ್ತಿರುವ ಏಕಾಂತ ಕೋಟೆ

ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ :ಕಲಬುರ್ಗಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಂಜರು ನೆಲದಲ್ಲೂ ವಿದೇಶಿ ತಳಿ ಮಾವು ಬೆಳೆದ ರಾಜಶ್ರೀ ಜೈನ
(ರಾಜ್ಯ ) ಜಿಲ್ಲೆ

ಬಂಜರು ನೆಲದಲ್ಲೂ ವಿದೇಶಿ ತಳಿ ಮಾವು ಬೆಳೆದ ರಾಜಶ್ರೀ ಜೈನ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ ಜಿಲ್ಲೆಯಲ್ಲಿ ವಿದೇಶಿ ಮಾವಿನಹಣ್ಣು ಬೆಳೆದು ಯಶಸ್ವಿಯಾದ ಪ್ರಥಮ ಮಹಿಳೆ | ೧ ಕೆಜಿ ಮಿಯಾ ಜೋಕಿ ಮಾವಿಗೆ ರೂ.೨.೫ ಲಕ್ಷ ರೂ ಬೇಡಿಕೆ!

ಉದಯರಶ್ಮಿ ದಿನಪತ್ರಿಕೆ

ಇಂಡಿ: ಹಲವು ವರ್ಷಗಳಿಂದ ಬಂಜರು ಬಿದ್ದ ಭೂಮಿಯಲ್ಲಿ ಸಧ್ಯ ಮಿಯಾ ಜೋಕಿ, ಬನಾನಾ ಮಾವಿನ ಹಣ್ಣು ಹಾಗೂ ವಾಟರ್ ಆಪಲ್ ಸೇರಿದಂತೆ ಇತರೆ ಹಣ್ಣುಗಳು ನಳನಳಿಸುತ್ತಿವೆ. ಇದು ಸಾಧ್ಯವಾದದ್ದು ಸಾವಯುವ ಕೃಷಿ ಪದ್ದತಿಯಿಂದ ಸಾಧಿಸಿ ತೋರಿಸಿದವರು ಇಂಡಿ ನಗರದ ರಾಜಶ್ರೀ ಅನಂತ ಜೈನ.
ಇಂಡಿ ನಗರದ ರಾಜಶ್ರೀಯವರು ಪತಿ ಅನಂತ ಅವರ ಸಹಾಯದಿಂದ ೦.೨೫ ಎಕರೆ ಅಂದರೆ ಒಂದು ನಾಲ್ಕನೆಯ ಅಂಶ ಎಕರೆ ಹೊಲದಲ್ಲಿ ವಿದೇಶಿ ಮಿಯಾಜೋಕಿ ಮಾವಿನ ಹಣ್ಣು , ಒಂದು ನಾಲ್ಕನೆಯ ಅಂಶ ಹೊಲದಲ್ಲಿ ವಿದೇಶಿ ಬನಾನಾ ಮಾವಿನ ಹಣ್ಣು, ಒಂದು ನಾಲ್ಕನೆಯ ಅಂಶ ಹೊಲದಲ್ಲಿ ವಿದೇಶಿ ವಾಟರ್ ಆಪಲ್ ಸೇರಿದಂತೆ ೪೦ ರೀತಿಯ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅದರಲ್ಲಿ ೧೦ ಮಾವಿನ ಹಣ್ಣು ಮತ್ತು ಎರಡು ಮಾವಿನಹಣ್ಣು ವಿದೇಶ ತಳಿಯಿಂದ ಕೂಡಿವೆ.
ದೇಶ ವಿದೇಶದ ೪೦ ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡ ಬೆಳೆಸಿದ್ದು ಬಹುತೇಕ ಫಲ ನೀಡುತ್ತಿವೆ. ಮಿಯಾ ಜೋಕಿ, ಬನಾನಾ ಮಾವಿನಹಣ್ಣು ವಾಟರ್ ಆಪಲ್ ಪ್ರತಿಯೊಂದು ೨೫ ಕ್ಕೂ ಹೆಚ್ಚು ಹಣ್ಣಿನ ಗಿಡ ಬೆಳೆದಿದ್ದಾರೆ.
ಮಡ್ಡಿ ಹೊಲ ಏನೂ ಬೆಳೆಯುವದಿಲ್ಲ ಎಂದು ಸುಮಾರು ೧೫ ವರ್ಷಗಳ ಕಾಲ ಮೆಕ್ಕೆಜೋಳ ಸಜ್ಜೆ ತೊಗರಿ ಬೆಳೆಯುತ್ತಿದ್ದರು. ಆಗ ಲಾಭವೆಂಬುದು ಮರಿಚೀಕೆಯಾಗಿತ್ತು. ಹೊಲದ ಸುತ್ತ ಮುಳ್ಳು ಕಂಠಿ ಬೆಳೆದಿದ್ದವು ಎಂದು ಅಂದಿನ ಸ್ಥಿತಿಯನ್ನು ವಿವರಿಸುತ್ತಾರೆ ರಾಜಶ್ರೀ.
ರಾಜಶ್ರೀ ವಿದ್ಯುತ್ ಉಪಕರಣ ತಯಾರಿಸುವ ಕಾರ್ಖಾನೆಯನ್ನು ಹೊಂದಿದ್ದು ಜೊತೆಗೆ ವೀರ ಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಅವರ ಪತಿ ಅನಂತ ಜೈನ ಕೆಲಸ ಮಾಡುತ್ತಿದ್ದು ಹೊಲದ ಕಡೆಗೆ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ೨೦ ವರ್ಷಗಳ ಹಿಂದೆ ೧೦ ಎಕರೆ ಜಮೀನು ಖರಿದಿಸಿದ್ದು ಹೊಲದಲ್ಲಿ ಏನಾದರೂ ಸಾದಿಸಬೇಕೆಂಬ ಛಲ ಅವರದಾಗಿತ್ತು.
ಈ ಭೂಮಿಯಲ್ಲಿ ಮೆಕ್ಕೆಜೋಳ ತೊಗರಿ ಬಿಟ್ಟರೆ ಏನೂ ಬೆಳೆಯಲು ಸಾಧ್ಯವಿಲ್ಲ ಎಂದು ಆಲೋಚಿಸಿದ ರಾಜಶ್ರೀ ಬಂಜರು ಭೂಮಿಯಲ್ಲಿ ಏನಾದರೂ ಬೆಳೆದು ಫಸಲು ಪಡೆಯಬೇಕೆಂದು ನಿರ್ಧರಿಸಿದರು.
ಪತಿಯ ಸಹಾಯದಿಂದ ಮೊದಲು ಭೂಮಿಯಲ್ಲಿಯ ಮುಳ್ಳುಕಂಠಿ ಕಡಿಸಿ ಸಮತಟ್ಟಾಗಿ ಮಾಡಿಸಿದರು. ನೀರಿಗಾಗಿ ಐದು ಕೊಳವೆ ಬಾವಿ ಕೊರೆಸಿದರು. ಮತ್ತು ಎಲ್ಲ ಕಡೆಗೂ ಸೆಟಲಾಯಿಟ್ ಮೋಬೈಲ ಅಪರೇಟರ್ ನಿಂದ ನೀರು ಬಿಡುವ ವ್ಯವಸ್ಥೆಯಿಂದ ಮೊದಲು ತರಕಾರಿ ಬೆಳೆದರು. ಹೊಲದ ಬದುವಿಗೆ ಸ್ವದೇಶಿ ಹಾಗೂ ವಿದೇಶಿ ತಳಿಯ ಹಣ್ಣಿನ ಗಿಡ ೨೦ ತೆಂಗಿನ ಗಿಡ ಬೆಳೆಸಿದರು. ಜೊತೆಗೆ ಏನಾದರೂ ಹೊಸ ಬೆಳೆ ಬೆಳೆಯಬೇಕೆಂದು ಮಾವಿನ ಹಣ್ಣು ಬೆಳೆದರು. ಆಂಧ್ರಪ್ರದೇಶದ ರಾಜಮಂಡಿಯಿಂದ ರೂ ಹತ್ತು ಸಾವಿರಕ್ಕೆ ಒಂದು ಅಗಿ ಮಿಯಾ ಜೋಕಿ ಮಾವಿನಹಣ್ಣು ಅಗಿ ತಂದು ವಿದೇಶಿ ಗಿಡ ಹಚ್ಚಿದರು. ಈಗ ಒಂದು ಗಿಡ ೨೫ ರಿಂದ ೩೦ ಹಣ್ಣು ನೀಡುತ್ತಿವೆ,. ಮೂರು ಅಥವಾ ನಾಲ್ಕು ಹಣ್ಣು ಸೇರಿ ಒಂದು ಕೆಜಿ ಆಗುತ್ತದೆ.
ಇವರ ಹೊಲಕ್ಕೆ ಭೇಟಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ಮತ್ತು ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಎಸ್. ಪಾಟೀಲ ಇವರು ಇಂಡಿಯಂತಹ ಪ್ರದೇಶದಲ್ಲೂ ಮಿಯಾಜೋಕಿ ಮಾವಿನಹಣ್ಣು ಬೆಳೆಯ ಬಹುದು ಎಂಬುದನ್ನು ರಾಜಶ್ರೀ ಮಹಿಳೆಯಾಗಿ ತೋರಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಒಂದು ಕೆಜಿ ಮಾವಿಗೆ ಎರಡುವರೆ ಲಕ್ಷ ರೂ ಬೇಡಿಕೆ!

ಒಂದು ಮಾವಿನ ಗಿಡಕ್ಕೆ ೨೫ ರಿಂದ ೩೦ ಹಣ್ಣುಗಳು ಮತ್ತು ಮೂರು ಅಥವಾ ನಾಲ್ಕು ಹಣ್ಣು ಸೇರಿ ಒಂದು ಕೆಜಿ ಮಿಯಾಜೋಕಿ ಮಾವಿನಹಣ್ಣು ಆಗುತ್ತದೆ. ವಿದೇಶದಲ್ಲಿ ಒಂದು ಕೆಜಿಗೆ ಎರಡುವರೆ ಲಕ್ಷ ರೂ ಬೇಡಿಕೆ ಇದೆ. ಸಧ್ಯ ಒಂದು ಲಕ್ಷ ರೂ ಗೆ ಒಂದು ಕೆಜಿ ಹಣ್ಣು ಮಾರಾಟ ಮಾಡುತ್ತಿದ್ದಾರೆ. ಮುಂಬಯಿ ಕಲಕತ್ತಾ ಸೇರಿದಂತೆ ಹಲವಾರು ಕಡೆಗಳಿಂದ ದಲ್ಲಾಳಿಗಳು ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ.

“ವಿಜಯಪುರ ಜಿಲ್ಲೆಯಲ್ಲಿ ವಿದೇಶಿ ಮಾವಿನಹಣ್ಣು ಬೆಳೆದು ಯಶಸ್ವಿಯಾದ ಪ್ರಥಮ ಮಹಿಳೆ. ವಿಜಯಪುರದಲ್ಲಿಯೂ ಮಿಯಾಜೋಕಿ ಹಣ್ಣು ಬೆಳೆಯಬಹುದೆಂದು ರಾಜಶ್ರೀ ತೋರಿಸಿಕೊಟ್ಟಿದ್ದಾರೆ.”

– ಮಹಾದೇವಪ್ಪ ಏವೂರ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಇಂಡಿ

“ಬಂಜರು ಭೂಮಿ ಮುಳ್ಳು ಕಂಟಿಯಿಂದ ಕೂಡಿದ ಹೊಲದಲ್ಲಿ ಮಿಯಾಜೋಕಿ ವಿದೇಶಿ ಮಾವಿನಹಣ್ಣು ಬೆಳೆದು ಮಹಿಳೆ ಕೃಷಿ ತೋಟಗಾರಿಕೆಯಲ್ಲೂ ಸಾಧಿಸಿ ತೋರಿಸಬಹುದೆಂದು ರಾಜಶ್ರೀ ಯವರು ತೋರಿಸಿದ್ದಾರೆ. ಅವರ ಸಾಧನೆ ತೋಟಗಾರಿಕೆಗೆ ಹೆಮ್ಮೆ ಇದೆ.”

– ಎಚ್.ಎಸ್.ಪಾಟೀಲ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಇಂಡಿ

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 11, 2026

ನಗರದ ಇಬ್ಬಂದಿತನ – ನಾವು ಕಟ್ಟಿಕೊಳ್ಳುತ್ತಿರುವ ಏಕಾಂತ ಕೋಟೆ

ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ :ಕಲಬುರ್ಗಿ

ರೈತರಿಗೆ ಗರಿಷ್ಠ ಪರಿಹಾರ ಕೊಡಿಸಲು ವೈಜ್ಞಾನಿಕ ವರದಿ ಸಿದ್ಧಪಡಿಸಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 11, 2026
    In ದಿನಪತ್ರಿಕೆ
  • ನಗರದ ಇಬ್ಬಂದಿತನ – ನಾವು ಕಟ್ಟಿಕೊಳ್ಳುತ್ತಿರುವ ಏಕಾಂತ ಕೋಟೆ
    In ಭಾವರಶ್ಮಿ
  • ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ :ಕಲಬುರ್ಗಿ
    In (ರಾಜ್ಯ ) ಜಿಲ್ಲೆ
  • ರೈತರಿಗೆ ಗರಿಷ್ಠ ಪರಿಹಾರ ಕೊಡಿಸಲು ವೈಜ್ಞಾನಿಕ ವರದಿ ಸಿದ್ಧಪಡಿಸಿ
    In (ರಾಜ್ಯ ) ಜಿಲ್ಲೆ
  • ಹಿಟ್ಟಿನಹಳ್ಳಿಯಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿದ ಸಚಿವರು
    In (ರಾಜ್ಯ ) ಜಿಲ್ಲೆ
  • ಸಮರ್ಪಕ ನೀರು, ಶುಚಿತ್ವ, ತೆರಿಗೆ ವಸೂಲಿಗೆ ಪ್ರಗತಿ
    In (ರಾಜ್ಯ ) ಜಿಲ್ಲೆ
  • ಪೌರ ಕಾರ್ಮಿಕರು ಈ ದೇಶದ ಆಸ್ತಿ :ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ಪೊಲೀಸ್ ಇಲಾಖೆ ಜನಸ್ನೇಹಿ ಇಲಾಖೆ :ಪಿಎಸೈ ಶ್ರೀಕಾಂತ
    In (ರಾಜ್ಯ ) ಜಿಲ್ಲೆ
  • ಲಿಂಗಾಯತ ಧರ್ಮ ಮಾನ್ಯತೆ ಬೇಡಿಕೆಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಗಮನಾರ್ಹ ಸಾಧನೆ ತೋರಿದ ಬಿಎಲ್‌ಡಿಇ ವಿವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.