ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಾಮೂಹಿಕ ಮದುವೆಗಳು ಅರ್ಥಿಕ ಹೊರೆಯನ್ನು ಕಡಿಮೆ ಮಾಡುವದರ ಜತೆಗೆ ಕುಟುಂಬಗಳನ್ನು ಸಂಕಷ್ಟದಿಂದ ಪಾರು ಮಾಡುತ್ತವೆ. ನಾಡಿನ ಸಂತರ ಶರಣರ ಸ್ವಾಮೀಜಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಪುಣ್ಯವಂತರು ಎಂದು ಯರನಾಳದ ಶ್ರೀ ಸಂಗನಬಸವ ಶ್ರೀಗಳು ಹೇಳಿದರು.
ತಾಲೂಕಿನ ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರ ಮಠದಲ್ಲಿ ಶ್ರೀ ಶಂಕರಲಿಂಗ ಜಾತ್ರಾ ಮಹೋತ್ಸವ ನಿಮಿತ್ಯ ನಡೆದ ಧರ್ಮಸಭೆ ಮತ್ತು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮೂಹಿಕ ವಿವಾಹದಿಂದ ದುಂದು ವೆಚ್ಚ ಕಡಿವಾಣ ಹಾಕುವದರ ಜತೆಗೆ ಸಮಾಜದಲ್ಲಿ ಸಾಮರಸ್ಯ ವೃದ್ದಿಸುತ್ತದೆ ಎಂದರು.
ತುಂಗಳದ ಅನುಸುಯ ಅಮ್ಮನವರು ಮಾತನಾಡಿ ಸಾಮೂಹಿಕ ವಿವಾಹದಿಂದ ಸಮಾಜದಲ್ಲಿ ಸಾಮರಸ್ಯ ಸಹಬಾಳ್ವೆ ಮತ್ತು ಸೌಹಾರ್ಧತೆ ಹೆಚ್ಚಿಸುತ್ತದೆ. ಸರಳ ವಿವಾಹಕ್ಕೆ ಮಾದರಿಯಾಗುವ ಮೂಲಕ ದೇಶದ ಪ್ರಗತಿಗೂ ಸಹಕಾರಿಯಾಗಿ ಎಂದರು.
ಮಂಜುನಾಥ ವಂದಾಲ, ಧರ್ಮರಾಜ ಮುಜಗೊಂಡ, ಸಿದ್ದಾರ್ಥ ಬೈಚಬಾಳ, ಎಂ.ಎಲ್ ಮುಜಗೊಂಡ, ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ ಮುರಲೀಧರ ಬಜಂತ್ರಿ ಮಾತನಾಡಿದರು.
ವೇದಿಕೆಯ ಮೇಲೆ ಲಚ್ಯಾಣದ ಪೀಠಾಧಿಪತಿ ಡಾ. ವೃಷಭಲಿಂಗೇಶ್ವರ ಶ್ರೀಗಳು, ಸಿದ್ದಲಿಂಗ ದೇವರು ಜಕನೂರ, ಶಿವಾನಂದ ಶ್ರೀಗಳು ಹಳಂಗಳಿ, ದ್ರಾಕ್ಷಾಯಿಣಿ ಅಮ್ಮನವರು ಹೂವಿನ ಹಿಪ್ಪರಗಿ, ಅಕ್ಕಮಹಾದೇವಿ ಅಮ್ಮನವರು ಚಿಕ್ಕಪಡಸಲಗಿ, ಶಂಕರಲಿಂಗ ಶ್ರೀಗಳು ಆಳೂರ, ಬಾಬುರಾವ ಮಹಾರಾಜರು, ಬಸಯ್ಯ ಶ್ರೀಗಳು ಮದರಖಂಡಿ, ಬಸವಂತರಾಯಗೌಡ ಪಾಟೀಲ, ಕಲ್ಲನಗೌಡ ಪಾಟೀಲ ಆನಂದ ಮೇತ್ರಿ ಪಿ.ಎಸ್.ಐ ಆನಂದ ಮೇತ್ರಿ ದಂಪತಿಗಳು, ಸಿಡಿಪಿಒ ಗೀತಾ ಗುತ್ತರಗಿಮಠ ಡಾ. ಲಕ್ಷ್ಮೀಕಾಂತ ಮೇತ್ರಿ, ಮತ್ತಿತರಿದ್ದರು.
ಸಂತೋಷ ಜತ್ತಿ ಇವರು ನೂತನ ಕಟ್ಟಡಕ್ಕೆ ಒಂದು ಲಕ್ಷ ರೂ ದೇಣಿಗೆ ನೀಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಲಚ್ಯಾಣದಲ್ಲಿ ಓದಿದ ವಿದ್ಯಾರ್ಥಿಗಳನ್ನು ಶ್ರೀ ಮಠದ ವತಿಯಿಂದ ಸನ್ಮಾನಿಸಲಾಯಿತು.
ಸಾಮೂಹಿಕ ವಿವಾಹದಲ್ಲಿ ೪೨ ಜೋಡಿಗಳು ಪಾಲ್ಗೊಂಡಿದ್ದರು.

